ಬೆಳಗಾವಿ- ನಗರದ ಮಹಾದ್ವಾ ರಸ್ರೆಯ ನಾಲ್ಕನೇಯ ಕ್ರಾಸ್ ನಲ್ಲಿರುವ ಮುರುಕುಟೆ ಅವರಿಗೆ ಸೇರಿದ ಮನೆಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಹಾನಿಯಾಗಿದೆ
ಮಧ್ಯಾಹ್ನ ಮೂರು ಘಂಟೆ ಸುಮಾರಿಗೆ ಮನೆಯಲ್ಲಿ ಶಾರ್ಟ ಸರ್ಕ್ಯಟ್ ನಿಂದಾಗಿ ಮನೆಯ ತುಂಬೆಲ್ಲ ಬೆಂಕಿ ಹರಡಿ ಮನೆಯಲ್ಲಿನ ಎಲ್ಲ ಸಾಮುಗ್ರಿಗಳು ಸುಟ್ಟು ಭಸ್ಮವಾಗಿವೆ ಅಗ್ನಿ ಶಾಮಕ ದಳ ಹಾಗು ಸ್ಥಳಿಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದು ಬೆಂಕಿ ಇನ್ನುವರೆಗೆ ನಿಯಂತ್ರಣಕ್ಕೆ ಬಂದಿಲ್ಲ
ಬೆಂಕಿ ಅವಘಡದಿಂದಾಗಿ ಮಹದ್ವಾ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಮಾರ್ಕೆಟ್ ಪೋಲೀಸರು ಹಾಗು ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ
ಆಕಸ್ಮಿಕ ಬೆಂಕಿಯಿಂದಾಗಿ ಲಕ್ಷಾಂತರ ರೂ ಹಾನಿಯಾಗಿದೆ ಮನೆಯಲ್ಲಿ ಯಾರು ಇಲ್ಲದಿರುವಾಗ ಈ ಘಟನೆ ನಡೆದಿದ್ದು ಮನೆಯಿಂದ ಹೊಗೆಯಾಡಲು ಆರಂಭಿಸಿದಾಗ ಮನೆಗೆ ಬೆಂಕಿ ತಗಲಿದ ವಿಷಯ ಗೊತ್ತಾಗಿದೆ
ಮುರುಕುಟೆ ಅವರ ಮನೆಯಲ್ಲಿ ಯಶ್ವಂತ ಪಾಟೀಲ ಎಂಬ ಕುಟುಂಬ ವಾಸವಾಗಿತ್ತು ಇವರ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ