Breaking News

ಬೆಳಗಾವಿ ಸಿಪಿಐಗಳ ವರ್ಗಾವಣೆ CEN ಗೆ ಚಾಂಪಿಯನ್…..!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹಲವಾರು ಪೋಲೀಸ್ ಠಾಣೆಗಳ ಸಿಪಿಐ ಗಳ ವರ್ಗಾವಣೆ ಆಗಿದೆ. ಬೆಳಗಾವಿ ನಗರ CEN ಠಾಣೆ ಸೈಬರ್ ಕ್ರೈಂ ಠಾಣೆಗೆ ಗಡ್ಡೇಕರ್ ಅವರನ್ನು ನಿಯೋಜನೆ ಮಾಡಲಾಗಿದೆ. ಇದೇ ಠಾಣೆಯಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿ ಅಪಾರ ಅನುಭವ ಇರುವ ಸಿಪಿಐ ಗಡ್ಡೇಕರ್ CEN ಠಾಣೆಗೆ ಬಂದಿದ್ದು ಸೈಬರ್ ಕ್ರಿಮಿಗಳಿಗೆ ನಡುಕ ಹುಟ್ಟಿದೆ.

ಇತ್ತೀಚಿಗೆ ಸೈಬರ್ ಕ್ರೈಂ ಹೆಚ್ಚುತ್ತಲೇ ಇದೆ. ಡಿಜಿಟಲ್ ಯುಗದಲ್ಲಿ ಆನ್ ಲೈನ್ ಮೂಲಕ ಓಟಿಪಿ ಬಳಿಸಿ ಹಣ ದೋಚುವ ದಂಧೆ ಹೆಚ್ಚಾಗಿದೆ . ಈ ವಿಭಾಗದಲ್ಲಿ ಸೈಬರ್ ಕ್ರಮಿಗಳಿಗೆ ಲಗಾಮು ಹಾಕುವ ವಿಚಾರದಲ್ಲಿ ಅನುಭವ ಇರುವ ಗಡ್ಡೇಕರ್ ಅವರು ಮತ್ತೇ ಇದೇ ಠಾಣೆಗೆ ನಿಯೋಜನೆ ಗೊಂಡಿದ್ದಾರೆ.

ಬೆಳಗಾವಿ ನಗರ ಸೈಬರ್ ಕ್ರೈಂ ಠಾಣೆಗೆ ಗಡ್ಡೇಕರ್ ಬಂದಿದ್ದಾರೆ. ಬೆಳಗಾವಿಯ ಖಡೇಬಝಾರ್ ಠಾಣೆಯ ಪಿಐ ದಿಲೀಪ್ ನಿಂಬಾಳ್ಕರ್ ಅವರನ್ನು ಬೆಳಗಾವಿಯ ಮಹಿಳಾ ಪೋಲೀಸ್ ಠಾಣೆಗೆ ವರ್ಗಾವಣೆ ಆಗಿದೆ. ಖಡೇಬಝಾರ್ ಪಿಐ ನೇಮಕ ಬಾಕಿ ಇದೆ ಇವತ್ತು ಆರ್ಡರ್ ಹೊರಬೀಳುವ ಸಾಧ್ಯತೆ ಇದೆ. ಮತ್ತು ಯಮಕನಮರಡಿ ಠಾಣೆಗೆ ಜಾವೇದ್ ಮುಶಾಪೂರೆ ಅವರ ವರ್ಗಾವಣೆ ಆಗಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *