ಬೆಳಗಾವಿ- ಇಂದು ದೇಶಾದಂತ ರಾಷ್ಟ್ರಪಿತ ಮಹಾತ್ಮ ಗಾಂಧಿ ೧೪೮ ಜನ್ಮದಿನಾಚರಣೆ ಎಲ್ಲಡೆ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.
ಆದ್ರೆ ೧೯೨೪ರಲ್ಲಿ ಮೊದಲು ಕಾಂಗ್ರೇಸ್ ಅಧಿವೇಶನಕ್ಕೆ ಸ್ವತಹ ಬೆಳಗಾವಿಗೆ ಆಗಮಿಸಿ, ಅಧಿವೇಶನಕ್ಕೆ ಗಾಂಧಿಯವರು ಚಾಲನೆ ಕೊಟ್ಟಿದ್ದರು. ಅವರ ಸ್ಮರಣಾರ್ಥ ಬೆಳಗಾವಿಯಲ್ಲಿ ಅವರು ಉಳಿದ ಸ್ಥಳದಲ್ಲಿ ಭವ್ಯ ಬಂಗಲೆ ಕಟ್ಟಿ ಅಲ್ಲಿ ಅವರ ಪುತಳಿ ಅನಾವರಣ ಮಾಡಿದ್ದಾರೆ.
ಅಂತಹ ಪುತಳಿ ಇಂದು ಅನಾಥವಾಗಿದ್ದು ಜಿಲ್ಲಾಡಳಿತ ಪ್ರತಿವರುಷ ಅದ್ದೂರಿಯಾಗಿ ಗಾಂಧಿ ಜಯಂತಿಯನ್ನು ಆಚರಣೆ ಮಾಡುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವರು ಮಾಲಾರ್ಪಣೆ ಮಾಡಿ ಗಾಂಧಿಜಿಗೆ ನಮನ ಸಲ್ಲಿಸುತ್ತಿದ್ದರು. ಆದ್ರೆ ಇಂದು ಬೆಳಗಾವಿ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಗಾಂಧಿ ಜಯಥಿ ಆಚರಣೆಗೆ ಬಾರದೆ ಗಾಂದಿಜಿಗೆ ಅವಮಾನ ಮಾಡಿದರು.
ಕನಿಷ್ಟ ಪಕ್ಷ ಜಿಲ್ಲಾಧಿಕಾರಿ ಜಿಯಾವುಲ್ಲಾ ಸಾಹೇಬರು ಸಹ ಬಂದು ಗೌರವ ಸಲ್ಲಿಸಲಿಲ್ಲಾ. ಇದರಿಂದ ಸ್ವಾತಂತ್ರ್ಯ ತಂದು ಕೊಟ್ಟ ಮಾಹಾನ್ ಮಾನವತಾವಾದಿ ರಾಷ್ಟ್ರಪಿತ ಮಾಹಾತ್ಮಾಗಾಂಧಿ ಜಯಂತಿ ಬೆಳಗಾವಿ ಜಿಲ್ಲೆಯಲ್ಲಿ ಸಪ್ಪೆಯಾಗಿತ್ತು. ಇದರಿಂದ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ಮತ್ತು ಜಿಲ್ಲಾಧಿಕಾರಿ ಜಿಯಾವುಲ್ಲಾ ಸಹ ಗಾಂಧಿ ಪ್ರತಿಮೆ ಬಳಿ ೧೦.೩೦ ವರೆಗೂ ಬಾರದ ಹಿನ್ನಲೆಯಲ್ಲಿ ಬೆಳಗಾವಿ ಆಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ ಗಾಂಧಿಜಿಗೆ ಮಾಲಾರ್ಪಣೆ ಮಾಡಿ ತರಾತುರಿಯಲ್ಲಿ ಗಾಂಧಿ ಜಂತಿಯನ್ನು ಮಾಡಿ ಮುಗಿಸಿದರು.