ಬೆಳಗಾವಿ
ಗಣೇಶ ಉತ್ಸವದಲ್ಲಿ ಮಂಡಳಮುಖಂಡರು ಡಾಲ್ಬಿಗೆ ಖರ್ಚು ಮಾಡುವಹಣವನ್ನು ಕೊಡಗು, ಮಡಿಕೇರಿ ನೆರೆಸಂತ್ರಸ್ತರಿಗೆ ನೀಡಿ ಮಾದರಿಯಾಗಬೇಕುಎಂದು ಪೊಲೀಸ್ ಆಯುಕ್ತಡಾ.ಡಿ.ಸಿ.ರಾಜಪ್ಪ ಹೇಳಿದರು.
ಶುಕ್ರವಾರ ನಗರದ ಪೊಲೀಸ್ ಜಿಮ್‍ಖಾನ್ ಸಭಾಂಗಣದಲ್ಲಿಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು. ಗಣೇಶೋತ್ಸವಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.ಅದರಲ್ಲಿ ಗಣೇಶ ಮಂಡಳದವರು ಡಾಲ್ಬಿಹಚ್ಚಿ ಲಕ್ಷಾಂತರ ರು. ಖರ್ಚು ಮಾಡುವಬದಲು ನೆರೆಯ ಸಂತ್ರಸ್ತರಿಗೆ ಆಹಣವನ್ನು ನೀಡಿದರೆಮಾದರೆಯಾಗುತ್ತದೆ. ಡಾಲ್ಬಿ ಹಚ್ಚುನಿರ್ಧಾರ ಮಾಡಿದರೆ ಕಳೆದ ಬಾರಿಯಕಾನೂನು ಚೌಕಟ್ಟಿನಲ್ಲಿ ಇತಿಮಿತಿಗಳನ್ನುಅಳವಡಿಸಲಾಗುವುದು ಎಂದರು.
ಕಳೆದ ಬಾರಿ 357 ಮಂಡಳದವರುಗಣೇಶ ಮೂರ್ತಿಗಳನು ಪ್ರತಿಷ್ಠಾಮಾಡಿದ್ದರು. ಈ ವರ್ಷ 378 ಗಣೇಶಪ್ರತಿಷ್ಠಾಪನೆಯಾಗಿವೆ. ಯಾವುದೇ ರೀತಿಕಾನೂನು ಸುವ್ಯವಸ್ಥೆ ಕದಡದಂತೆಮಂಡಳದವರು ನೋಡಿಕೊಳ್ಳಬೇಕು.ಪೊಲೀಸರು ಎಲ್ಲ ರೀತಿಯಲ್ಲಿ ಸಹಕಾರನೀಡಲಾಗುವುದು. ಯಾವುದೇಕಾರಣಕ್ಕೂ ಅಹೀತಕರ ಘಟನೆನಡೆಯದಂತೆ ನೋಡಿಕೊಳ್ಳಬೇಕೆಂದರು.
ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ಪ್ರತಿವರ್ಷ ಗಣೇಶ ಹಬ್ಬದಂದು ಪ್ರತಿ ಮಂಡಳದವರಿಗೆಕೆಇಬಿ,ಅಗ್ನಿಶಾಮಕ, ಹೆಸ್ಕಾಂ ಸೇರಿದಂತೆ ಇನ್ನಿತರಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕಾದರೆ ತುಂಬತೊಂದರೆ ಉಂಟಾಗುತ್ತದೆ.ಆದ್ದರಿಂದ ಜಿಲ್ಲಾಡಳಿತವತಿಯಿಂದ ಸರಳವಾಗಿ ಅನುಮತಿ ನೀಡುವ ವ್ಯವಸ್ಥೆಮಾಡಬೇಕೆಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾಎಸ್., ಪಾಲಿಕೆ ಆಯುಕ್ತ ಶಶಿಧರಕುರೇರ್, ಡಿಸಿಪಿಗಳಾದ ಸೀಮಾಲಾಟ್ಕರ್, ಮಹಾನಿಂಗ ನಂದಗಾವಿ,ಗಣೇಶ ಮಂಡಳದ ರಮಾಕಾಂತಕೊಂಡುಸ್ಕರ್ ಸೇರಿದಂತೆಮೊದಲಾದವರು ಹಾಜರಿದ್ದರು.