ಬೆಳಗಾವಿ-ಕರ್ನಾಟಕದ ಕಳಸಾ ನಾಲಾ ಕಾಮಗಾರಿ ಪರಿಶೀಲನೆ ಮಾಡಿದ ಗೋವಾ ನೀರಾವರಿ ಸಚಿವ ವಿನೋದ ಪಾಳೇಕರ ಕರ್ನಾಟಕದವರು ಹರಾಮಿಗಳು ಎಂದು ಹೇಳುವ ಮೂಲಕ ಪುಂಡಾಟಿಕೆ ಪ್ರದರ್ಶನ ಮಾಡಿದ್ದಾರೆ
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿಯಿರುವ ಕಳಸಾ ನಾಲಾ ಕಾಮಗಾರಿ ಪರಿಶೀಲಿಸಿ, ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ ವ್ಯೆಕ್ತ ಪಡಿಸಿದ ಇವರು
ಕರ್ನಾಟಕ ಸರ್ಕಾರ ದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ
ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸಿದೆ. ಮಹದಾಯಿ ವಿಚಾರದಲ್ಲಿ ಕರ್ನಾಟಕ ಸರ್ಕಾರ ಡರ್ಟಿ ಪೋಲಿಟಿಕ್ಸ ಮಾಡುತ್ತಿದೆ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರು ರಾಜ್ಯ ಬಿ.ಜೆ.ಪಿ ಅದ್ಯಕ್ಷ ಯಡಿಯೂರಪ್ಪ ಅವರಿಗೆ ಬರೆದ ಪತ್ರ ನ್ಯಾಯಾಲಯದ ಆದೇಶ ಅಲ್ಲಾ ಎಂದು ಹೇಳಿದ ಗೋವಾ ನೀರಾವರಿ ಮಂತ್ರಿ ಪಾಳೇಕರ ತಮ್ಮ ಪಾಳೇಗಾರಿಕೆ ತೋರಿಸಿದ್ದಾರೆ
ಮಹದಾಯಿ ನಮ್ಮ ತಾಯಿ ಕರ್ನಾಟಕದಲ್ಲಿ ರೈತರು ಪ್ರತಿಭಟನೆ ಮಾಡಿದರೆ ನಮಗೇನು? ಮಹದಾಯಿ ವಿವಾದ ಪ್ರಕರಣ ನ್ಯಾಯಾಧೀಕರಣದಲ್ಲಿ ಇತ್ಯರ್ಥವಾಗುವ ವರೆಗೆ ನೀರು ಕೊಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿ ಗೋವಾಗೆ ಮರಳಿದ ಮಂತ್ರಿ ಪಾಳೇಕರ್ ಗೋವಾದಲ್ಲಿ ಕನ್ನಡಿಗರಿಗೆ ಹರಾಮಿಗಳು ಎಂದು ಹೇಳಿದ್ದಾರೆ
ಕಳಸಾ ಬಂಡೂರಿ ನಾಲೆಯ ಸ್ಥಳ ವನ್ನು ವೀಕ್ಷಿಸಿ ಗೋವಾಗೆ ಮರಳಿದ ಪಾಳೆಕರ ಅವರನ್ನು ಗೋವಾ ಮಾದ್ಯಮ ಪ್ರತಿನಿಧಿಗಳು ಕಳಸಾ ವೀಕ್ಷಣೆಗೆ ಪೋಲೀಸ್ ಬಂದೋಬಸ್ತಿಯಲ್ಲಿ ಹೋಗಿದ್ಯಾಕೆ ? ಎಂದು ಪ್ರಶ್ನೆ ಮಾಡಿದಾಗ ಕರ್ನಾಟಕದವರು ಹರಾಮಿಗಳು ಅದಕ್ಕೆ ಪೋಲೀಸ್ ಬಂದೋಬಸ್ತಿಯಲ್ಲಿ ಕಳಸಾ ವೀಕ್ಷಣೆ ಮಾಡಿದ್ದೇನೆ ಎಂದು ಗೋವಾ ಮಂತ್ರಿ ಪಾಳೇಕರ್ ಹೇಳಿಕೆ ನೀಡಿದ್ದಾರೆ