ಬೆಳಗಾವಿ- ಮತ್ತೆ ಗೋವಾ ಸಚಿವ ವಿನೋದ್ ಪಾಲೇಕರ್ ಪುಂಡಾಟಿಕೆ ಮುಂದುವರೆಸಿದ್ದಾರೆ ಕನ್ನಡಿಗರಿಗೆ ಮಹದಾಯಿ ನೀರು ಕೊಡುವ ಪ್ರಶ್ನೆಯಿಲ್ಲ ಎಂದು ಹೇಳಿಕೆ ನೀಡಿದ್ದಾರೆ
ಕನ್ನಡಿಗರಿಗೆ ಹರಾಮಿಗಳು ಎಂದ ಸಚಿವನಿಂದ ಕ್ಷಮೆಯಾಚಿಸುವ ಬದಲಾಗಿ ಉದ್ದಟತನದ ಹೇಳಿಕೆ ಹೊರಬಿದ್ದಿದೆ ಮಹದಾಯಿ ನೀರಿಗಾಗಿ ಕನ್ನಡಿಗರು ಎಷ್ಟೇ ಪ್ರತಿಭಟನೆ ಮಾಡಲಿ ನಾವು ಮಹದಾಯಿ ನೀರು ಉಳಿವಿಗಾಗಿ ಯಾವುದೇ ಹಂತಕ್ಕೂ ಹೋಗ್ತವಿ ಎಂದು ಪಾಳೇಕರ್ ಹೇಳಿದ್ದಾರೆ
ಮಹದಾಯಿಗಾಗಿ ನಮ್ಮ ಗೋವಾ ಫಾರ್ವರ್ಡ್ ಪಾರ್ಟಿ ಹಾಗೂ ಗೋವಾ ಸರ್ಕಾರ ಯಾವುದೇ ತ್ಯಾಗ್ ಬಲಿದಾನಕ್ಕೆ ಸಿದ್ಧವಾಗಿದೆ ಗೋವಾ ರಾಜ್ಯಕ್ಕೆ ಮಹದಾಯಿ ಒಂದೆ ಜಲ ಮೂಲವಿದೆ
ಮಹದಾಯಿ ಅಸ್ತಿತ್ವ ಉಳಿಸಿಕೊಳ್ಳಲು ಯಾವುದೇ ಬಲಿದಾನಕ್ಕೂ ನಾವು ಸಿದ್ಧವಾಗಿದ್ದೇವೆ ಎಂದ ಗೋವಾ ಸಚಿವ ಪಾಲೇಕರ್ಸು ಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಕರ್ನಾಟಕ ಕಾಮಗಾರಿ ನಡೆಸಿದೆ ಎಂದು ಪಾಲೇಕರ್ ಆರೋಪಿಸಿದ್ದಾರೆ
ಈ ವಿಷಯವನ್ನು ನ್ಯಾಧಿಕರಣದ
ಗಮನಕ್ಕೆ ಗೋವಾ ಸರ್ಕಾರ ತರಲಿದೆ ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದ್ದು ಕರ್ನಾಟಕದ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಿದೆ ಎಂದ ಗೋವಾ ನೀರಾವರಿ ಸಚಿವ ಪಾಲೇಕರ್ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ