ಬೆಳಗಾವಿ- ಕೊರೊನಾ ಎಫೆಕ್ಟ್,ಗೋವಾ ಮತ್ತು ಮಹಾರಾಷ್ಟ್ರದಲ್ಲಿರುವ ಕನ್ನಡಿಗ ಕಾರ್ಮಿಕರು ಅತಂತ್ರವಾಗಿದ್ದು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಊರುಗಳತ್ತ ಈ ಅತಂತ್ರ ಕಾರ್ಮಿಕರು ತೆರಳುತ್ತಿರುವ ದೃಶ್ಯ ಬೆಳಗಾವಿ ಜಿಲ್ಲೆಯಲ್ಲಿ ಸಾಮಾನ್ಯವಾಗಿದೆ.
ಬೆಳಗಾವಿ – ಬಾಗಲಕೋಟೆ ರಾಜ್ಯ ಹೆದ್ದಾರಿಯಲ್ಲಿ ತೆರಳುತ್ತಿರುವ ಕಾರ್ಮಿಕರಿಗೆ ಇಲ್ಲಿಯ ಜನ ,ನೀರು ಮತ್ತು ಊಟ ಕೊಟ್ಟು ಮಾನವ ಧರ್ಮವನ್ನು ನಿಭಾಯಿಸುತ್ತಿದ್ದಾರೆ.
ಮಹಾರಾಷ್ಟ್ರದ ಕರಾಡ್‌ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕರಾಡ್‌ನಿಂದ ಕೊಲ್ಲಾಪುರವರೆಗೆ ವಾಹನದಲ್ಲಿ ಆಗಮಿಸಿ, ಕೊಲ್ಲಾಪುರದಿಂದ ಬೆಳಗಾವಿ ಮಾರ್ಗವಾಗಿ ಯಾದಗಿರಿ, ರಾಯಚೂರಿನತ್ತ ಕಾಲ್ನಡಿಗೆ ಪ್ರಯಾಣ ಬೆಳೆಸಿದ್ದಾರೆ.
ಆಹಾರ ನೀರು ಕೊಡಲು ಬಂದ ಸ್ಥಳೀಯರಿಗೆ ವಾಹನದ ವ್ಯವಸ್ಥೆ ಮಾಡುವಂತೆ ಅಂಗಲಾಚುತ್ತಿರುವ ಈ ಕಾರ್ಮಿಕರ ಪರಿಸ್ಥಿತಿ ನೋಡಿದ್ರೆ,ಮಹಾರಾಷ್ಟ್ರ ಮತ್ತು ಗೋವಾ ಸರ್ಕಾರಗಳು ಕೊರೋನಾಗಿಂತಲೂ ಮಹಾಮಾರಿ ಎನ್ನುವದು ಅರ್ಥವಾಗುತ್ತದೆ.
ಹೇಗಾದರೂ ಮಾಡಿ ವಾಹನ ವ್ಯವಸ್ಥೆ ಮಾಡಿ ಎಂದು ಸ್ಥಳೀಯರಲ್ಲಿ ಬೇಡಿಕೊಳ್ಳುತ್ತಿರುವ ಕಾರ್ಮಿಕರು, ನಡೆದುಕೊಂಡೇ ಯಾದಗಿರಿ, ರಾಯಚೂರಿನತ್ತ ತೆರಳುತ್ತಿದ್ದಾರೆ
ನಿನ್ನೆ ರಾತ್ರಿಯಿಂದ ಗೋವಾ ರಾಜ್ಯದಿಂದಲೂ ಚೋರ್ಲಾ ಮಾರ್ಗವಾಗಿ,ಕಾರ್ಮಿಕರು ತಂಡೋಪ ತಂಡವಾಗಿ ನಡೆಯುತ್ತಲೇ ಬೆಳಗಾವಿಯ ಕಡೆಗೆ ಬರುತ್ತಿದ್ದಾರೆ.
ಮಹಾರಾಷ್ಟ್ರ,ಮತ್ತು ಗೋವಾ ಸರ್ಕಾರಗಳು ,ಕೊರೋನಾ ಎಂಬ ಜಾಗತಿಕ ವಿಪತ್ತಿನ ನಡುವೆಯೂ ಕನ್ನಡದ ಕಾರ್ಮಿಕರನ್ನು ತಮ್ಮ ರಾಜ್ಯಗಳಿಂದ ಹೊರದಬ್ನಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ದುಸ್ಸಹಾಸಕ್ಕೆ ಕೈ ಹಾಕಿ ದೇಶದ ಏಕತೆ,ಮತ್ತು ಐಕ್ಯತೆಯನ್ನು ಹಾಳು ಮಾಡುತ್ತಿವೆ.