Breaking News

ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ .೭೪.೭೨ ರಷ್ಟು ಮತದಾನ

 

ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ .೭೪.೭೨ ರಷ್ಟು ಮತದಾನ

ಬೆಳಗಾವಿ, )ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಉಪ ಚುನಾವಣೆ ನಿಮಿತ್ತ ಗುರುವಾರ(ಡಿ.೫) ಮತದಾನ ಶಾಂತಿಯುತವಾಗಿ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ಶೇ.೭೪.೭೨ ಮತದಾನವಾಗಿದೆ.

ಅಥಣಿ-೨,೧೯,೮೩೧ ಮತದಾರರು; ಕಾಗವಾಡ ೧,೮೬,೧೯೦ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಒಟ್ಟು ೨,೪೪,೩೧೩ ಮತದಾರರು ಇದ್ದಾರೆ.

ಜಿಲ್ಲೆಯ ಒಟ್ಟಾರೆ ೬,೫೦,೩೩೪ ಮತದಾರರ ಪೈಕಿ ೪,೮೫,೯೨೬ ಜನರು ತಮ್ಮ ಮತ ಚಲಾಯಿಸಿದ್ದರು.

ಕೆಲವೆಡೆ ಮಾದರಿ ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ವರದಿಯಾಗಿರುವುದನ್ನು ಹೊರತುಪಡಿಸಿ ಒಟ್ಟಾರೆ ಚುನಾವಣಾ ಪ್ರಕ್ರಿಯೆಯು ಸಂಪೂರ್ಣ ಶಾಂತಿಯುತವಾಗಿ ನಡೆಯಿತು.

ಮತದಾನ ಅಂತ್ಯಗೊಂಡ ಸಂಜೆ ಆರು ಗಂಟೆಯವರೆಗಿನ ಅವಧಿಯಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ಶೇ.೭೩.೦೮ ರಷ್ಟು ಮತದಾನವಾಗಿತ್ತು. ಒಟ್ಟು ಮತದಾರರ ಪೈಕಿ ೧,೭೮,೫೫೪ ಜನರು ಮತದಾನ ಮಾಡಿದ್ದಾರೆ.

ಅದೇ ರೀತಿ ಅಥಣಿ ಮತಕ್ಷೇತ್ರದಲ್ಲಿ ಒಟ್ಟು ಶೇ.೭೫.೨೩ ಮತದಾನವಾಗಿದ್ದು, ೧,೬೫,೩೭೦ ಜನರು ಮತ ಚಲಾವಣೆ ಮಾಡಿರುತ್ತಾರೆ.
ಕಾಗವಾಡದಲ್ಲಿ ೧,೪೨,೦೦೨ (ಶೇ.೭೬.೨೭)ಜನರು ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.

ನಿಧಾನಗತಿಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯು ಮಧ್ಯಾಹ್ನದ ವೇಳೆಗೆ ಚುರುಕುಗೊಂಡಿತು.

ಬೆಳಿಗ್ಗೆ ೯ ಗಂಟೆವರೆಗೆ ಜಿಲ್ಲೆಯ ಮೂರೂ ಮಕ್ಷೇತ್ರಗಳಲ್ಲಿ ಶೇ. 7.10 ಮತದಾನವಾಗಿತ್ತು.
ಈ ಅವಧಿಯಲ್ಲಿ ಅಥಣಿ ೮.೩೩; ಕಾಗವಾಡ ೬.೯೪ ಹಾಗೂ ಗೋಕಾಕ ಶೇ.೬.೧೧ ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

ಅದೇ ರೀತಿ ೧೧ ಗಂಟೆಯ ವೇಳೆಗೆ ಜಿಲ್ಲೆಯ ಒಟ್ಟು ಮತದಾನ ಪ್ರಮಾಣ ೨೧.೬೦ ರಷ್ಟಾಗಿತ್ತು.
ಅಥಣಿ ೨೩.೧೦; ಕಾಗವಾಡ ೨೧.೩೪ ಮತ್ತು ಗೋಕಾಕ ಮತಕ್ಷೇತ್ರದಲ್ಲಿ ಶೇ. ೨೦.೪೫ ಮತನದಾನ ನಡೆದಿತ್ತು.

ನಂತರದ ಎರಡು ಗಂಟೆಯ ಅವಧಿಯಲ್ಲಿ ಜಿಲ್ಲೆಯ ಒಟ್ಟಾರೆ ಮತದಾನ ಪ್ರಮಾಣ ೩೮.೬೬ ಆಗಿತ್ತು ಒಟ್ಟು ಮತದಾರರ ಪೈಕಿ ೨,೫೧,೪೧೧ ಜನರು ತಮ್ಮ ಹಕ್ಕು ಚಲಾಯಿಸಿದ್ದರು.

ಮಧ್ಯಾಹ್ನ ೩ ಗಂಟೆಯವರೆಗೆ ಜಿಲ್ಲೆಯ ಮೂರೂ ಮತಕ್ಷೇತ್ರಗಳ ಒಟ್ಟಾರೆ ಮತದಾನ ಪ್ರಮಾಣವು ಶೇ.೫೩.೬೯ ತಲುಪಿತು. ಒಟ್ಟು ಮತದಾರರ ಪೈಕಿ ೩,೪೯,೧೫೬ ಮತಗಳು ಚಲಾವಣೆಗೊಂಡಿದ್ದವು.
ಈ ವೇಳೆಗೆ ಅಥಣಿ ಶೇ.೫೬.೦೫; ಕಾಗವಾಡ ಶೇ. ೫೧.೪೧ ಹಾಗೂ ಗೋಕಾಕ ಮತಕ್ಷೇತ್ರದಲ್ಲಿ ಶೇ.೫೩.೩೦ ಮತದಾನವಾಗಿತ್ತು.

ಸಂಜೆ ಐದು ಗಂಟೆಯವರೆಗೆ ಜಿಲ್ಲೆಯ ಒಟ್ಟಾರೆ ಮತದಾನವು ಶೇ. ೬೮.೯೨ ರಷ್ಟಾಗಿದೆ.
ಅಥಣಿಯಲ್ಲಿ ೧,೫೫,೪೯೨ (ಶೇ.೭೦.೭೩); ಕಾಗವಾಡ ೧,೨೯,೮೮೦(ಶೇ.೬೯.೭೬) ಹಾಗೂ ಗೋಕಾಕ ಮತಕ್ಷೇತ್ರದಲ್ಲಿ ೧,೬೨,೮೧೦(ಶೇ.೬೨.೬೪) ಜನರು ತಮ್ಮ ಮತವನ್ನು ಚಲಾಯಿಸಿದ್ದರು.

ಬೆಳಿಗ್ಗೆ ೭ ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆಯು ಸಂಜೆ ೬ ಗಂಟೆಯವರೆಗೆ ನಡೆಯಿತು. ಮತದಾನ ಕೊನೆಗೊಳ್ಳುವ ೬ ಗಂಟೆಯ ವೇಳೆಗೆ ಮತಗಟ್ಟೆ ಆವರಣದಲ್ಲಿ ಹಾಜರಿದ್ದ ಮತದಾರರಿಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.
***

Check Also

ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..

ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.