ಮ್ಯಾಜಿಕ್ ಮಾಡದ ಜೋಳಿಗೆ,ರಮೇಶ್ ಸಾಹುಕಾರ್ ಬಾಯಿಗೆ ಹೋಳಿಗೆ….!!!
ಬೆಳಗಾವಿ- ಬೆಳಗಾವಿ ಜಿಲ್ಲೆಯ ಉಪ ಸಮರದಲ್ಲಿ ಕಮಲ ತನ್ನ ಕರಾಮತ್ತು ತೋರಿಸಿದ್ದು ಜಿಲ್ಲೆಯ ಗೋಕಾಕ್,ಅಥಣಿ,ಕಾಗವಾಡ ಕ್ಷೇತ್ರಗಳೂ ಬಿಜೆಪಿ ಪಾಲಾಗಿದ್ದು ಕಾಂಗ್ರೆಸ್ ಮತ್ತೆ ಜಿಲ್ಲೆಯಲ್ಲಿ ಸಮಾಪ್ತಿಯಾಗಿದೆ.
ಗೋಕಾಕ್ ಕ್ಷೇತ್ರದಲ್ಲಿ ಜಿಡೆಎಸ್ ಪಕ್ಷದ ಜೋಳಿಗೆ ಮ್ಯಾಜಿಕ್ ಮಾಡುವಲ್ಲಿ ವಿಫಲ ವಾಗಿದ್ದು ಗೋಕಾಕಿನ ಹೋಳಿಗೆ ಬಿಜೆಪಿಯ ರಮೇಶ್ ಜಾರಕಿಹೊಳಿ ಅವರ ಬಾಯಿಗೆ ಬಿದ್ದಿದೆ .ಲಖನ್ ಜಾರಕಿಹೊಳಿ ಗೆಲುವು ಸಾಧಿಸದಿದ್ದರೂ ಗೋಲಾಕಿನಲ್ಲಿ ಕಾಂಗ್ರೆಸ್ ಪಕ್ಷದ ಮಾನ ಉಳಿಸಿದ್ದಾರೆ.
ಅಥಣಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟೊಳ್ಳಿ ಹೆಚ್ಚು ಮಾತನಾಡದೇ ಮೌನ ಕ್ರಾಂತಿ ಮಾಡುವ ಮೂಲಕ ಗೆಲುವು ಸಾಧಿಸಿದ್ದಾರೆ.
ಕಾಗವಾಡದಲ್ಲಿ ಕಾಗೆಯ ಹೋರಾಟ,ಮತ್ತು ಹಾರಾಟ ಎರಡೂ ವರ್ಕೌಟ್ ಆಗಲಿಲ್ಲ,ಬಿಜೆಪಿಯ ಶ್ರೀಮಂತ ಪಾಟೀಲ ಕಾಗವಾಡದಲ್ಲಿ ಜಯಭೇರಿ ಬಾರಿಸಿದ್ದಾರೆ
ಒಟ್ಟಾರೆ ಜಿಲ್ಲೆಯಲ್ಲಿ ಕಮಲ ಅರಳಿದ್ದು ಕೈ ಗೆ ಮತದಾರ ಕೈ ಕೊಟ್ಟಿದ್ದಾನೆ .
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ