ಬೆಳಗಾವಿ- ರಾಜ್ಯರಾಜಕಾರಣ,ಇಂದ್ರ,ಚಂದ್ರ,ಸೂರ್ಯ,ತಾರೆಗಳೊಂದಿಗೆ ,ಎಲ್ಲ ಧೂಮಕೇತುಗಳು,ಈಗ ಜಲಪಾತಿನ ನಗರಿ,ಕರದಂಟಿನ ಗೋಕಾಕಿನ ಧರೆಗೆ ಇಳಿದೆವೆ.
ಕಾಂಗ್ರೆಸ್,ಬಿಜೆಪಿ,ಜೆಡಿಎಸ್ ಸಾಮ್ರಾಜ್ಯದ ಎಲ್ಲ ಹುಲಿಗಳು ಬೇಟೆಯಾಡಲು ಗೋಕಾಕ್ ಎಂಬ ಅರಣ್ಯದಲ್ಲಿ ದಾಳಿ ಮಾಡಿವೆ ಇಲ್ಲಿ ಯಾರು ಬೇಟೆಯಾಡುತ್ತಾರೆ,ಯಾರು ಗೋ ಬ್ಯಾಕ್ ಆಗುತ್ತಾರೆ ಎನ್ನುವ ಲೆಕ್ಕ ಯಾರ ತೆಲೆಗೂ ಹತ್ತುತ್ತಿಲ್ಲ ಆದರೆ,ಮೂರೂ ಹುಲಿಗಳು ತುಂಬಾ ಹಸಿದಿವೆ ಯಾರು ? ಯಾವ ತಂತ್ರದ ಮೂಲಕ ಬೇಟೆ ಆಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ.
ಗೋಕಾಕ್ ಕಾಂಗ್ರೆಸ್ಸಿನ ಭದ್ರಕೋಟೆ ಗೋಕಾಕ್ ಸಮ್ರಾಜ್ಯದ ಸಾಮ್ರಾಟನಾಗಿದ್ದ ರಮೇಶ್ ಜಾರಕಿಹೊಳಿ ಈಗ ಕಾಂಗ್ರೆಸ್ ಎಂಬ ಸಿಂಹಾಸನ ಬಿಟ್ಟು ಬಿಜೆಪಿ ಎಂಬ ಸಿಂಹಾಸನದಲ್ಲಿ ಕುಳಿತಿದ್ದಾರೆ ಈ ಸಿಂಹಾಸನದಲ್ಲಿ ಕುಳಿತುಕೊಂಡು ರಮೇಶ್ ಜಾರಕಿಹೊಳಿ ಸಾಮ್ರಾಜ್ಯ ಉಳಿಸಿಕೊಳ್ಳುತ್ತಾರಾ..? ಎನ್ನುವದು ಈಗ ಯಕ್ಷ ಪ್ರಶ್ನೆಯಾಗಿದೆ.
ಗೋಕಾಕ್ ಸಾಮ್ರಾಜ್ಯದ ಸಂಸ್ಥಾಪಕ ಕಾಂಗ್ರೆಸ್ ಮುಖಂಡ ಸತೀಶ್ ಜಾರಕಿಹೊಳಿ ಅವರು ಚಿಕ್ಕಯಜಮಾನ ಲಖನ್ ಜಾರಕುಹೊಳಿ ಅವರಿಗೆ ಗೋಕಾಕ್ ಸಾಮ್ರಾಜ್ಯದ ಸಿಂಹಾಸನದಲ್ಲಿ ಕೂರಿಸಲು ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ.
ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿದ ರಮೇಶ್ ಜಾರಕಿಹೊಳಿ ವಿರುದ್ಧ ಸೇಡು ತೀರಿಸಿಕೊಳ್ಳಲು,ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಶೋಕ ಪೂಜಾರಿಯನ್ನು ಕಣಕ್ಕಿಳಿಸಿ ಎಲ್ಲ ರೀತಿಯ ತಂತ್ರ ಮಂತ್ರಗಳನ್ನು ರೂಪಿಸಿ ರಮೇಶ್ ಜಾರಕಿಹೊಳಿ ಅವರನ್ನು ಸೋಲಿಸಲು ಎಲ್ಲಿಲ್ಲದ ಪ್ರಯತ್ನ ನಡೆಸಿದ್ದಾರೆ
ಗೋಕಾಕ್ ಕ್ಷೇತ್ರದಲ್ಲಿ ಇಂದು ಕುಮಾರಸ್ವಾಮಿ,ಸಿದ್ಧ ರಾಮಯ್ಯ ರೋಡ್ ಶೋ ಮೂಲಕ ಮತಯಾಚಿಸಲಿದ್ದಾರೆ.
ನಾಳೆಯಿಂದ ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನ ಬೆಳಗಾವಿ ಜಿಲ್ಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ,ನಾಡಿದ್ದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಗೋಕಾಕಿಗೆ ಆಗಮಿಸಲಿದ್ದಾರೆ .
ಈಗ ಗೋಕಾಕಿನಲ್ಲಿ ಯಾರು ಯಾವ ಸಮಾಜದ ಮತಗಳನ್ನು ಪಡೆಯುತ್ಥಾರೆ,ಎನ್ನುವುದನ್ನು ಗೋಕಾಕಿನ ನಾಯಕರು ಗುಣಾಕಾರ ಭಾಗಾಕಾರದ ಲೆಕ್ಕ ಹಾಕುತ್ತಿದ್ದರೂ ಗೋಕಾಕಿನ ಲೆಕ್ಕಾಚಾರ ಯಾರ ತೆಲೆಗೂ ಹತ್ತುತ್ತಿಲ್ಲ,ಯಾಕಂದ್ರೆ ಕಗ್ಗಂಟಾಗಿರುವ ಈ ಲೆಕ್ಕವನ್ನು ಬಿಡಿಸುವ ಫಾರ್ಮೂಲಾ ಗೋಕಾಕಿನ ಮತದಾರರ ಹತ್ತಿರವಿದೆ,ಹೀಗಾಗಿ ಕಣದಲ್ಲಿರುವ ಮೂರೂ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಹತ್ತಿರ,ಹತ್ತಿರ ಬಾ ಎನ್ನುವ ಮಂತ್ರ ಜಪಿಸುತ್ತಿದ್ದಾರೆ.