Breaking News

ಗೋಕಾಕ್,ಅಥಣಿ,ಕಾಗವಾಡ ಉಪ ಚುನಾವಣೆಯ ಮತದಾನಕ್ಕೆ ಮತಯಂತ್ರಗಳು ರೆಡಿ…

ಬೆಳಗಾವಿ-ನಾಳೆ ಡಿಸೆಂಬರ್ 5ರಂದು ಬೆಳಗಾವಿ ಜಿಲ್ಲೆ ಗೋಕಾಕ್ ಕ್ಷೇತ್ರದ ಉಪಚುನಾವಣೆಯ ಮತದಾನ ನಡೆಯಲಿದೆ ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,42,124 ಮತದಾರರಿದ್ದು ಪುರುಷ – 1,19,737, ಮಹಿಳಾ – 1,22,373, ಇತರೆ – 14 ಮತದಾರರಿದ್ದಾರೆ
ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1573 ಸೇವಾ ಮತದಾರರಿದ್ದಾರೆ
ಗೋಕಾಕ್ ಕ್ಷೇತ್ರದ ನಗರ ಪ್ರದೇಶದಲ್ಲಿ 123, ಗ್ರಾಮೀಣ ಪ್ರದೇಶದಲ್ಲಿ 165 ಸೇರಿ ಒಟ್ಟು 288 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದೆ

ಗೋಕಾಕ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,763 ಯುವ ಮತದಾರರು (18 ರಿಂದ 19 ವಯಸ್ಸು)
ಮಹಿಳಾ ಮತದಾರರಿಗಾಗಿ ಒಂದು ಸಖಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.

ಡಿಸೆಂಬರ್ 5ರಂದು‌ ಬೆಳಗಾವಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ
ಮೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ
ಇಂದಿನಿಂದ ಡಿಸೆಂಬರ್ 5ರ ಸಂಜೆ 6ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ

ಕಾಗವಾಡ, ಗೋಕಾಕ್, ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನಿಷೇಧಾಜ್ಞೆಯಾಗಿದೆ ಇಂದಿನಿಂದ ಡಿಸೆಂಬರ್ 5ರ‌ ಮಧ್ಯರಾತ್ರಿ 12ರವರೆಗೆ ಮದ್ಯಮಾರಾಟ ನಿಷೇಧ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಮೂರು ಕ್ಷೇತ್ರಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ
ಒಟ್ಟು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ 945 ಮತಗಟ್ಟೆಗಳ ಸ್ಥಾಪನೆ ಮಾಡಲಾಗಿದ್ದು
ಮೂರು ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಖಿ ಮತಗಟ್ಟೆ ಸ್ಥಾಪನೆಯಾಗಿದೆ.

6 ಡಿ ಎಸ್ ಪಿ, 12 ಪಿಐ, 33 ಪಿಎಸ್ಐ, 62 ಎಎಸ್ಐ,
1143 ಪೊಲೀಸ್ ಪೊಲೀಸ್ ಕಾನ್ಸ್ಟೇಬಲ್ ಮತ್ತು ಮುಖ್ಯಪೇದೆಗಳು,
991 ಹೋಮ್ ಗಾರ್ಡ್ ಸೇರಿ 2248 ಭದ್ರತಾ ಸಿಬ್ಬಂದಿ ನಿಯೋಜನೆ ಮೂರು ಕ್ಷೇತ್ರಗಳಲ್ಲಿ 15 ಡಿಎಆರ್ 15 ಕೆಎಸ್ ಆರ್‌ಪಿ 8 ಸಿಎಪಿಎಫ್ ತುಕಡಿಗಳ ನಿಯೋಜನೆ ಮಾಡಲಾಗಿದ್ದು ಗೋಕಾಕಿನ ಸರ್ಕಾರಿ ಎಕ್ಸ ಮುನ್ಸಿಪಲ್ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣಾ ಸಿಬ್ಬಂಧಿಗಳು ಮತಯಂತ್ರ ಸೇರಿದಂತೆ ಮತದಾನಕ್ಕೆ ಅಗತ್ಯವಿರುವ ಸಾಮುಗ್ರಿಗಳನ್ನು ಪಡೆಯುತ್ತಿದ್ದಾರೆ.

ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂಧಿಗಳು ಮತಯಂತ್ರಗಳೊಂದಿಗೆ ಮತಗಟ್ಟೆಗಳಿಗೆ ಕರೆದುಯ್ಯಲು ಬಸ್ ಗಳು ಸಜ್ಜಾಗಿ ನಿಂತಿವೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *