ಗೋಕಾಕ್ ತ್ರಿಕೋಣ ತಂಟೆಯಲ್ಲಿ ಬಾರಿಸೋರು ಯಾರು ? ಗೆಲುವಿನ ಗಂಟೆ….!!!
ಬೆಳಗಾವಿ- ಗೋಕಾಕಿನಲ್ಲಿ ಬಿಜೆಪಿ ,ಕಾಂಗ್ರೆಸ್,ಜೆ ಡಿ.ಎಸ್ ನಡುವೆ ಬಿರುಸಿನ ತ್ರಿಕೋಣ ಸ್ಪರ್ದೆ ನಡೆದಿದ್ದು ರಾಜ್ಯದ ಜನರಿಗೆ ಗೊತ್ತು ಆದ್ರೆ ಈ ತ್ರಿಕೋಣ ತಂಟೆಯ ಭವಿಷ್ಯ ಗೆಲುವಿನ ಗಂಟೆಯ ಸದ್ದು ಮತಯಂತ್ರಗಳಲ್ಲಿ ಸುಭದ್ರ ವಾಗಿದ್ದು ಸೋಮವಾರ ಬೆಳಿಗ್ಗೆಯಿಂದಲೇ ಆ ಸದ್ದು ಮತಯಂತ್ರದಿಂದ ಹೊರ ಬೀಳಲೀದೆ .
ಮತದಾನ ಮುಗಿದು ಹೋಗಿದೆ.ಆರೋಪ ಪ್ರತ್ಯಾರೋಪಗಳಿಗೆ ವಿರಾಮ ಸಿಕ್ಕಿದೆ,ದ್ವನಿ ವರ್ದಕಗಳು ಮೌನವಾಗಿವೆ.ಪ್ರತಿಸ್ಪರ್ದಿಗಳು ರಿಲ್ಯಾಕ್ಸ ಆಗಿದ್ದಾರೆ ಆದ್ರೆ ಮೂವರು ಅಭ್ಯರ್ಥಗಳ ಬೆಂಬಲಿಗರು ಮಾತ್ರ ಯಾರು ಗೆಲ್ಲ ಬಹುದು ಎಂದು ಮಾದ್ಯಮ ಮಿತ್ರರಿಗೆ,ತಮ್ಮ ಗೆಳೆಯರಿಗೆ ,ತಮ್ಮ ಹಿರಿಯ ನಾಯಕರಿಗೆ ಫೋನ್ ಮಾಡಿ ಕೇಳುತ್ತಲೇ ಇದ್ದಾರೆ.
ಬಿಜೆಪಿ,ಕಾಂಗ್ರೆಸ್ ಜೆಡಿಎಸ್ ಹೇಗೆ ಗೆಲ್ಲುತ್ತದೆ ಅನ್ನೋದಕ್ಕೆ ಮೂರು ಪಕ್ಷಗಳ ನಾಯಕರು ತಮ್ಮದೇ ಆದ ಸಮೀಕರಣ ಹೇಳುತ್ತಾರೆ.ಮೂರು ಪಕ್ಷಗಳ ಕಾರ್ಯಕರ್ತರ ಗೆಲುವಿನ ಸಮೀಕರಣವನ್ನು ಪ್ರತ್ಯೇಕವಾಗಿ ಆಲಿಸಿ ಅಂತಿಮದಲ್ಲಿ ಗೆಲುವು ಯಾರದು? ಎನ್ನುವ ಲೆಕ್ಕ ಬಿಡಿಸಲು ಹೋಗಿ ಅನೇಕ ರಾಜಕೀಯ ವಿಶ್ಲೇಷಕರು ತಮ್ಮ ತೆಲೆ ಕೆರೆಸಿಕೊಂಡು.ತೆಲೆಗೆ ಗೋಕಾಕಿನ ಲೆಕ್ಕ ಹತ್ತುತ್ತಿಲ್ಲ ಎಂದು ಹೇಳುವ ದೃಶ್ಯಗಳು ಗೋಕಾಕಿನಲ್ಲಿ ಸಾಮಾನ್ಯವಾಗಿದ್ದವು
ಕಾಂಗ್ರೆಸ್ ಗೋಕಾಕಿನಲ್ಲಿ ನಾವು ಹೇಗೆ ಗೆಲ್ಲುತ್ತೆ ಅನ್ನೋದಕ್ಕೆ ಕಾಂಗ್ರೆಸ್ ನಾಯಕರು ಒಂದು ಸಮೀಕರಣ ಹೇಳುತ್ತಾರೆ , ಲಿಂಗಾಯತ ಸಮಾಜದ ಮತಗಳು ಬಿಜೆಪಿ ಮತ್ತು ಜೆಡಿಎಸ್ ನಡುವೆ ಹಂಚಿಕೆ ಆಗುತ್ತವೆ ಕಾಂಗ್ರೆಸ್ ಸಂಪ್ರದಾಯಿಕ ಮತಗಳ ಶಕ್ತಿ ಹೆಚ್ಚಾಗಿ ಗೋಕಾಕಿನಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಹೇಳುವ ಗೆಲುವಿನ ಸಮೀಕರಣ ಏನೆಂದರೆ ಜಾರಕಿಹೊಳಿ ಕುಟುಂಬದ ಪರವಾಗಿರುವ ಮತಗಳನ್ನು ರಮೇಶ್ ಮತ್ತು ಲಖನ್ ಹಂಚಿಕೊಳ್ಳುತ್ತಾರೆ.ಜಾರಕಿಹೊಳಿ ಕುಟುಂಬದ ವಿರೋಧಿ ಮತಗಳು ನೇರವಾಗಿ ಜೆಡಿಎಸ್ ಗೆ ಬಿದ್ದಿವೆ ಸಹೋದರರ ಜಗಳದಲ್ಲಿ ಗೆಲುವು ನಮ್ಮದೇ ಅಂತಾರೆ ಜೆಡಿಎಸ್ ಕಾರ್ಯಕರ್ತರು.
ಬಿಜೆಪಿ ಹೇಗೆ ಗೆಲ್ಲುತ್ತದೆ ಅನ್ನೋದಕ್ಕೆ ಬಿಜೆಪಿ ಕಾರ್ಯಕರ್ತರ ಬಳಿ,ನಾಯಕರ ಬಳಿ ಒಂದು ಸಮೀಕರಣ ಇದೆ ಅದೇನಂದ್ರೆ ರಮೇಶ್ ಜಾರಕಿಹೊಳಿ ಕಳೆದ ಇಪ್ಪತ್ತು ವರ್ಷದಿಂದ ಗೋಕಾಕ್ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ.ಅವರದೇ ಆದ ಸಂಘಟನೆ ಇದೆ .ಕಳೆದ ಲೋಕಸಭೆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ತೊರೆದು ಹೊರಗೆ ಬಂದಿರಲಿಲ್ಲ ಆದರೂ ಸುರೇಶ್ ಅಂಗಡಿ ಅವರಿಗೆ ಒಂದು ಲಕ್ಷ ಮತಗಳ ಲೀಡ್ ಕೊಟ್ಟಿದ್ದಾರೆ.ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇದೆ ಹೀಗಾಗಿ ಗೆಲುವು ನಮ್ಮದೇ ಅಂತಾರೆ ಬಿಜೆಪಿ ನಾಯಕರು.
ಮೂರೂ ರಾಜಕೀಯ ಪಕ್ಷಗಳ ಕಾರ್ಯಕರ್ತರ ಲೆಕ್ಕಾಚಾರ, ಮತ್ತು ಅವರ ಸಮೀಕರಣಗಳನ್ನು ಕೇಳಿದ್ರೆ ಕೊನೆಗೆ ಗೆಲುವು ಯಾರದು ಎನ್ನುವ ಗೊಂದಲ ಎದುರಾಗುವದರಲ್ಲಿ ಸಂದೇಹವೇ ಇಲ್ಲ.
ಗೋಕಾಕಿನಲ್ಲಿ ಯಾರು ಗೆಲ್ತಾರೆ ? ಅನ್ನೋದಕ್ಕೆ ಈಗ ಕ್ಷೇತ್ರದಲ್ಲಿ ಸಹಜವಾಗಿ ಬೆಟ್ಟಿಂಗ್ ಶುರುವಾಗಿದೆ, ಯಾರು ಗೆಲ್ತಾರೆ ? ಯಾರು ನಂಬರ್ ಒನ್ ,ನಂಬರ್ ದೋ ಯಾರು? ಮೂರನೇಯ ಸ್ಥಾನ ಯಾರಿಗೆ ಸಿಗುತ್ತೆ ಎನ್ಮುವ ಪ್ರಶ್ನೆಗಳ ಆಧಾರದ ಮೇಲೆ ಗೋಕಾಕಿನಲ್ಲಿ ಜೋರ್ ದಾರ್ ಬೆಟ್ಟಿಂಗ್ ನಡೆಯುತ್ತಿದೆ.
ಮತದಾನದ ನಂತರ ನಡೆದ ಸಮೀಕ್ಷೆಗಳಲ್ಲಿ ಗೋಕಾಕಿನಲ್ಲಿ ಬಿಜೆಪಿ ಅಕೌಂಟ್ ತೆರೆಯುತ್ತದೆ ಎಂದು ಹೇಳಿದೆ .ಸಮೀಕ್ಷೆಗಳು ಸುಳ್ಳಾಗುತ್ತವೆ ಗೆಲ್ಲೋದು ನಾನೇ ಎಂದು ಲಖನ್ ಜಾರಕಿಹೊಳಿ ಹೆಳಿಕೊಂಡಿದ್ದಾರೆ.ಎಲ್ಲವೂ ಮೌನವಾಗಿದೆ ಸೋಮವಾರದ ವರೆಗೆ ಕಾಯಿರಿ ಎಂದು ಅಶೋಕ ಪೂಜಾರಿ ಹೇಳಿದ್ದರೆ ರಮೇಶ್ ಜಾರಕಿಹೊಳಿ ಸ್ವಾಮಿ… ಗೆಲ್ಲೋದು ನಾವೇ ಸೋಮವಾರದ ವರೆಗೆ ವೇಟ್ ಮಾಡಿ ಎಂದಿದ್ದಾರೆ
ಗೋಕಾಕ್ ಕ್ಷೇತ್ರದ ಮತದಾರ ಪ್ರಭು ತನ್ನ ತೀರ್ಪು ನೀಡಿದ್ದಾನೆ.ಈ ತೀರ್ಪು ಮತ ಯಂತ್ರಗಳಲ್ಲಿ ಭದ್ರವಾಗಿದೆ ಸೋಮವಾರ ತೀರ್ಪು ಹೊರ ಬೀಳಲಿದೆ.ಅಲ್ಲಿಯವರೆಗೆ ಗೆಲುವಿನ ಕುರಿತು ರಾಜಕೀಯ ವಿಶ್ಲೇಷಣೆ, ಗುಣಾಕಾರ,ಭಾಗಾಕಾರ ನಡೆಯುತ್ತಲೇ ಇರುತ್ತದೆ .