ಬೆಳಗಾವಿ- ಗೋಕಾಕಿನ ಕೆ ಎಲ್ ಇ ಸಂಸ್ಥೆಯ ಮಹಾದೇವಪಣ್ಣಾ ಮುನವಳ್ಳಿ ಶಾಲೆಯ ಸಭಾಂಗಣದಲ್ಲಿ ಲಗಾಯತ ಸಮುದಾಯದ ಮುಖಂಡರ ಸಭೆ ಮುಗಿದ ಬಳಿಕ ದೊಡ್ಡ ಗದ್ದಲವೇ ನಡೆಯಿತು.
ಅಶೋಕ ಪೂಜಾರಿ ಅವರಿಗೆ ಬೆಂಬಲ ನೀಡಿರುವ ಪಕ್ಷೇತರ ಅಭ್ಯರ್ಥಿ ಪ್ರಕಾಶ ಬಾಗೋಜಿ ಲಿಂಗಾಯತ ಮುಖಂಡರ ಸಭೆ ಮುಗಿದ ಬಳಿಕ ಸುರೇಶ್ ಅಂಗಡಿ ಅವರ ಕಾಲಿಗೆ ಬಿದ್ದು ಕೈ ಮುಗಿದು ನೀವು ಒಬ್ಬರನ್ನೇ ಬೆಂಬಲಿಸುವದು ಸರಿಯಲ್ಲ ಎಂದು ಆಕ್ರೋಶ ವ್ಯೆಕ್ತಪಡಿಸಿದರು.
ಗೋಕಾಕನಲ್ಲಿ ಲಿಂಗಾಯತ ಸಭೆಯಲ್ಲಿ ಭಾರಿ ಹೈಡ್ರಾಮಾ ನಡೆಯಿತು
ಸಭೆ ಮುಗಿಯುತ್ತಿದ್ದಂತೆ ಲಿಂಗಾಯತ ಮುಖಂಡರಿಂದಲೇ ದಾಂಧಲೆ,
ರಮೇಶ್ ಜಾರಕಿಹೊಳಿಯವರನ್ನ ನಾವು ಬೆಂಬಲಿಸೊಲ್ಲ ಎಂದು ಪಟ್ಟು ಹಿಡಿದರು
೩೦ ವರ್ಷದಿಂದ ನಮ್ಮನ್ನ ನಮ್ಮ ಸಮಾಜವನ್ನ ರಮೇಶ ಜಾರಕಿಹೊಳಿ ತುಳಿದಿದ್ದಾರೆ,
ಈಗ ನೀವು ಬಂದು ಅವರಿಗೇ ಮತ ನೀಡುವಂತೆ ಹೇಳ್ತಿದ್ದರಿ,
ಇದು ಎಷ್ಟರ ಮಟ್ಟಿಗೆ ಸರಿ ಎಂದು ತರಾಟೆಗೆ ತೆಗೆದುಕೊಂಡ ಪ್ರಕಾಶ್ ಬಾಗೋಜಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು
ಲಿಂಗಾಯತ ಮುಖಂಡ ಪ್ರಕಾಶ ಬಾಗೋಜಿಯಿಂದ ಕೇಂದ್ರ ಸಚಿವ ಸುರೇಶ ಅಂಗಡಿ ಕಾಲಿಗೆ ಬಿದ್ದು ಬೇಡಿಕೆ,
ದಯವಿಟ್ಟು ಸಮಾಜದ ಮೇಲೆ ಒತ್ತಡ ಹಾಕದಂತೆ ಮನವಿ ಮಾಡಿದ ಪ್ರಕಾಶ ಬಾಗೋಜಿ,
ನಗರದ ಮಹದೇಪ್ಪ ಮುನವಳ್ಳಿ ಕೆ ಎಲ್ ಇ ಶಾಲೆಯಲ್ಲಿ ನಡೆದ ಸಭೆ,
ಸಭೆಯಲ್ಲಿ ಭಾಗಿಯಾಗಿದ್ದ ಪ್ರಭಾಕರ್ ಕೋರೆ, ಮಹಾಂತೇಶ ಕವಟಗಿಮಠ,
ಶಾಸಕ ವಿಶ್ವನಾಥ ಪಾಟೀಲ್, ಎ ಎಸ್ ಪಾಟೀಲ್ ನಡಹಳ್ಳಿ,
ನಾಯಕರ ಮುಂದೆ ಬಿಕ್ಕಿ ಬಿಕ್ಕಿ ಅತ್ತು ನಮ್ಮ ಸಮಾಜದ ಮೇಲೆ ಒತ್ತಡ ಹಾಕಬೇಡಿ ಎಂದು ಬೇಡಿಕೆ,
ಗೋಕಾಕನಲ್ಲಿ ಭಾರಿ ಹೈಡ್ರಾಮ ಸೃಷ್ಟಡಿಸಿದ ಲಿಂಗಾಯತ ಸಮುದಾಯದ ಸಭೆ,
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ