ಬೆಳಗಾವಿ- ರಾಜ್ಯದ ಜೋಗದ ಸಿರಿ ಬಿಟ್ಟರೆ ಗೋಕಾಕಿನ ಧಬ ಧಬೆಯ ಸಿರಿ ನೋಡಲು ಎರಡು ಕಣ್ಣುಗಳು ಸಾಲುವದಿಲ್ಲ ಈ ವರ್ಷವಂತೂ ಈ ಧಬ ಧಬೆ ಮೈದುಂಬಿ ಹರಿಯುತ್ತಿದೆ ನೂರಾರು ಅಡಿ ಎತ್ತರದಿಂದ ಧಬ ಧಭ ಬೀಳುವ ಜಲಪಾತ ನೋಡಲು ಜನಸಾಗರವೇ ಗೋಕಾಕಿನಲ್ಲಿ ನೆರೆದಿದೆ
ಮಳೆ ಬಂದ್ರೆ ಸಾಕು ಕೆಲವರು ಅಂಬೋಲಿಯ ಜಲಧಾರೆ ನೋಡಲು ಧಾವಿಸಿದರೆ ನಮ್ಮ ಹಳ್ಳಿಯ ಜನ ಗೋಕಾಕಿಗೆ ದೌಡಾಯಿಸುತ್ತಾರೆ ಗೋಕಾಕ ಫಾಲ್ಸ ನೋಡಿ ಅಲ್ಲಿ ಸುಡುವ ಗೊಂಜಾಳ ರುಚಿ ನೋಡುವ ಮಜಾ ನೇ ಬೇರೆ
ಈ ವರ್ಷ ಗೋಕಾಕಿನ ಜಲಪಾತದ ಸ್ವರೂಪವೇ ಬದಲಾಗಿದೆ ದುಪ್ಪಟ್ಟು ನೀರು ನೆಲಕಪ್ಪಳಿಸುವದನ್ನು ನೋಡಲು ಜನ ಜಾತ್ರೆಯೇ ಅಲ್ಲಿ ನೆರದಿದೆ
ಇಂದು ಸಂಡೇ ಎಲ್ಲರೂ ಫ್ಯಾಮಿಲಿ ಸಮೇತ ಗೋಕಾಕ ಫಾಲ್ಸನ ಸೆರಗಿನಲ್ಲಿ ಬೀಡಾರ ಹೂಡಿದ್ದಾರೆ ಗೋಕಾಕಿನ ನಾಲ್ಕೂ ದಿಕ್ಕುಗಳಿಂದ ಫಾಲ್ಸ ನೋಡಲು ವಾಹನಗಳ ಸಾಲು ಸಾಲು ಫಾಲ್ಸ ರಸ್ತೆಯಲ್ಲಿ ಸರದಿಯಲ್ಲಿ ನಿಂತುಕೊಂಡಿವೆ
ಎಲ್ಲಿ ನೋಡಿದಲ್ಲಿ ಯುವಕ ಯುವತಿಯರ ಗುಂಪು ಜಲಪಾತದ ಅಡಿಯಲ್ಲಿ ನಿಂತು ಸೆಲ್ಫಿ ತೆಗೆಯುತ್ತ ಸಕತ್ ಎಂಜಾಯ್ ಮಾಡುತ್ತಿದೆ
ಗೋಕಾಕ್ ಫಾಲ್ಸ ಮೇಲಿರುವ ಜೋತಾಡುವ ಸೇತುವೆ ಮೇಲೆ ನಿಂತು ಜಲಪಾತ ನೋಡಲು ಜನ ಮುಗಿ ಬಿದ್ದಿದ್ದಾರೆ
ಗೋಕಾಕ ಜಲಪಾಲ ನೋಡಿಕೊಂಡು ಗೊಡಚಿನಮಲ್ಕಿ ಜಲಪಾತ ನೋಡಲು ಕೆಲವರು ಹೋಗುವ ದೃಶ್ಯ ಕಂಡರೇ ಇನ್ನು ಕೆಲವರು ತಮ್ಮ ಫ್ಯಾಮೀಲಿ ಸಮೇತ ರೊಟ್ಟಿ ಬುತ್ತಿ ಕಟ್ಟಿಕೊಂಡು ಒಟ್ಟಿಗೆ ಉಟ ಮಾಡಿ ಜಲಪಾತದ ಸಿರಿ ಯಲ್ಲಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ
ಜಲಪಾತದ ಅಡಿಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳುವದನ್ನು ತಡೆಯಲು ಪೋಲೀಸರು ಪರದಾಡುತ್ತಿದ್ದಾರೆ
ಗೋಕಾಕ್ ಫಾಲ್ಸ ಹೇಗಿದೆಯೋ ಹಾಗೆಯೇ ಇದೆ ಜಲಪಾತದ ಮೇಲೆ ಜೋತಾಡುವ ಸೇತುವೆ ಜೋತಾಡುತ್ತಲೇ ಇದೆ ಜಲಪಾತದ ಸುತ್ತಲೂ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಪ್ರವಾಸಿಗರು ಒಂದು ಕಡೆ ನಿಂತು ಜಲಪಾತದ ದೃಶ್ಯ ನೋಡುವ ಸಮರ್ಪಕ ವ್ಯೆವಸ್ಥೆಯನ್ನೂ ಮಾಡಲು ಹೋಗದ ಸರ್ಕಾರ ಗೋಕಾಕ ಜಲಪಾತ ಪ್ರವಾಸಿ ಸ್ಥಳವನ್ನು ಸ್ಥಳೀಯ ಜನ ಪ್ರತಿನಿಧಿಗಳು ಮತ್ತು ಸರ್ಕಾರ ಅಭಿವೃದ್ಧಿ ಪಡಿಸುವ ಗೋಜಿಗೆ ಹೋಗದೇ ಇರುವದು ವಿಪರ್ಯಾಸ
ಅದೇನೆ ಇರಲಿ ಪುರಸೊತ್ತು ಅನ್ನೋದು ಇದ್ದರೆ ಗೋಕಾಕಿಗೆ ಹೋಗಿ ಎಂಜಾಯ್ ಮಾಡಿ ಬರುವಾಗ ಕರದಂಟು ತರುವದನ್ನು ಮರೆಯ ಬೇಡಿ
Check Also
ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ
ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …