ಬೆಳಗಾವಿ- ಅಣ್ಣನ ಮೇಲಿನ ಸಿಟ್ಟಿಗೆ ಪುಟ್ಟ ಬಾಲಕಿಯನ್ನು ಚಿಕ್ಕಪ್ಪನೇ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ನಡೆದಿದೆ
ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿ ಅಣ್ಣನ ಮಗಳನ್ನೇ ಹತ್ಯೆ ಮಾಡಿದ್ದಾನೆ ನಾಲ್ಕು ವರ್ಷದ ಪ್ರೇಮಾ ಹೊಸಮನಿ ಕೊಲೆಯಾದ ಬಾಲಕಿಯಾಗಿದ್ದಾಳೆ
ಬಾಲಕಿ ಚಿಕ್ಕಪ್ಪ ಮಲ್ಲಪ್ಪ ಹೊಸಮನಿಯಿಂದ ಕೃತ್ಯ ನಡೆದಿದೆ.ತಂದೆ ಮೇಲಿನ ಸೇಡಿಗೆ ಮಗಳನ್ನ ಕೊಲೆ ಮಾಡಿದ ಪಾಪಿ ಚಿಕ್ಕಪ್ಪನ ವಿರುದ್ಧ ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ