ಉಪ ಚುನಾವಣೆ: 71 ಪ್ರಕರಣ ದಾಖಲು; ನಗದು ಹಣ, ಮದ್ಯ ವಶ
ಬೆಳಗಾವಿ, -ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟಾರೆ 71 ಪ್ರಕರಣಗಳನ್ನು ದಾಖಲಿಸುವ ಮೂಲಕ 3.23 ಲಕ್ಷ ರೂಪಾಯಿ ನಗದು ಸೇರಿದಂತೆ ಅಕ್ರಮ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟಾರೆ 3.23 ಲಕ್ಷ ನಗದು; 5.26 ಲಕ್ಷ ಮೌಲ್ಯದ 1371.99 ಲೀಟರ್ ಮದ್ಯ ಹಾಗೂ 4.04 ಲಕ್ಷ ಮೌಲ್ಯದ ಎಂಟು ಬೈಕ್ ಹಾಗೂ ಒಂದು ಸರಕು ಸಾಗಾಣಿಕೆ ವಾಹನವನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ಕಾಗವಾಡ ಮತಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ 9600 ಚಿಹ್ನೆ ಹೊಂದಿರುವ ಕ್ಯಾಪ್ ಗಳು ಹಾಗೂ 22,500 ಶಲ್ಯಗಳನ್ನು ಕೂಡ ಮಾದರಿ ನೀತಿ ಸಂಹಿತೆ ತಂಡಗಳಿಂದ ವಶಪಡಿಸಿಕೊಳ್ಳಲಾಗಿದೆ.
ಎಫ್.ಎಸ್.ಟಿ, ಪೊಲೀಸ್, ಅಬಕಾರಿ ಮತ್ತು ಎಸ್.ಎಸ್.ಟಿ ತಂಡಗಳು ಪ್ರತ್ಯೇಕವಾಗಿ ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಎಂದು ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ ತಿಳಿಸಿದ್ದಾರೆ.
ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಥಣಿ ಮತಕ್ಷೇತ್ರದಲ್ಲಿ 20; ಕಾಗವಾಡದಲ್ಲಿ 18 ಮತ್ತು ಗೋಕಾಕ ಮತಕ್ಷೇತ್ರದಲ್ಲಿ 33 ಹೀಗೆ ಒಟ್ಟು 71 ಪ್ರಕರಣಗಳು ದಾಖಲಿಸಲಾಗಿದೆ.
***