ಬೆಳಗಾವಿ – ನಗರದ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಕಾಲ ಮಹಿಳಾ ಪೋಲೀಸ್ ಪೇದೆಯಾಗಿ ಕರ್ತವ್ಯ ನಿಭಾಯಿಸಿದ್ದ ರಾಜ್ಯ ಮಟ್ಟದ ಮಹಿಳಾ ಕಬ್ಬಡ್ಡಿ ಆಟಗಾರ್ತಿ ಯಾಗಿದ್ದ ಕುಮಾರಿ ಗೌರಿ ಜೀವಾಜಿಗೋಳ (28) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ರಾಗಿದ್ದಾರೆ.
ಗೌರಿ ಜೋವಾಜಿಗೋಳ ಮೂಲತಹ ವಿಜಯಪೂರದ ಬಬಲೇಶ್ವರ ಗ್ರಾಮದವರು.ಸ್ಪೋರ್ಟ್ಸ್ ಕೋಟಾದಲ್ಲಿ ಮಹಿಳಾ ಪೋಲೀಸ್ ಪೇದೆಯಾಗಿ ಬೆಳಗಾವಿಯ ಮಾಳ ಮಾರುತಿ ಪೋಲೀಸ್ ಠಾಣೆಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು ಇತ್ತೀಚಿಗಷ್ಟೆ ಪೋಲೀಸ್ ಇಲಾಖೆಗೆ ರಿಸೈನ್ ಮಾಡಿ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ಅವರು ಇಂದು ಬೆಳಿಗ್ಗೆ ತಮ್ಮ ಸ್ವಗ್ರಾಮದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಗೌರಿ ಅವರನ್ನು ಮಾಳ ಮಾರುತಿ ಠಾಣೆಯ ಪೋಲೀಸರು ಗೌರಕ್ಕಾ ಎಂದೇ ಕರೆಯುತ್ತಿದ್ದರು .ಗೌರಿ ಜೀವಾಜಿಗೋಳ ಅವರು ರಾಜ್ಯ ಮಟ್ಟದ ಮಹಿಳಾ ಕಬ್ಬಡ್ಡಿ ಸ್ಪರ್ದೆಗಳಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ