ಬೆಳಗಾವಿ- ಕನ್ನಡದ ಕಾರ್ಮಿಕರನ್ನು ದುಡಿಸಿಕೊಂಡು ಅವರ ಜೊತೆ ನರಂತರವಾಗಿ ಅಮಾನವೀಯವಾಗಿ ವರ್ತಿಸುತ್ತಲೇ ಬಂದಿರುವ ಗೋವಾ ಸರ್ಕಾರ,ಕೊರೋನಾ ಲಾಕ್ ಡೌನ್ ಕರಾಳ ಛಾಯೆಯಲ್ಲೂ,ಗೋವಾ ಸರ್ಕಾರ ಕನ್ನಡದ ಕಾರ್ಮಿಕರನ್ನು ನಡು ರಸ್ತೆಯಲ್ಲಿ ಕೈ ಬಿಟ್ಟಿರುವ ಘಟನೆ ನಡೆದಿದೆ .
ಗೋವಾದ ಶಿಪ್ ಯಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ಬೀದರ ಹುಮ್ನಾಬಾದ ಮೂಲದ ಸುಮಾರು ಇಪ್ಪತ್ತು ಕಾರ್ಮಿಕರಿಗೆ ಮಂಗಳವಾರದಿಂದ ಊಟವನ್ನು ಕೊಡದೇ ಅವರನ್ನು ಕರ್ನಾಟಕದ ಗಡಿಯಲ್ಲಿ ಬಿಟ್ಟು ಹೋಗಿದ್ದು.ಮಂಗಳವಾರದಿಂದ ಊಟ ಮಾಡದೇ ಅಶಕ್ತರಾಗಿದ್ದ ಈ ಕನ್ನಡದ ಕಾರ್ಮಿಕರು,ಗೋವಾಕ್ಕೆ ತರಕಾರಿ ಸಾಗಿಸಿ ಬೆಳಗಾವಿಗೆ ಬರುತ್ತಿದ್ದ ವಾಹನ ತಡೆದು ಈ ಕಾರ್ಮಿಕರು ಬೆಳಗಾವಿ ನಗರಕ್ಕೆ ತಲುಪಿದ್ದಾರೆ
ಸಹಾಯ ಕೋರಿ ಬೆಳಗಾವಿ ಜಿಲ್ಲಾಡಳಿತದ ಮೊರೆ ಹೋಗಿರುವ ಈ ಕಾರ್ಮಿಕರನ್ನು ಪೋಲೀಸರು ನಗರದ ಅಶೋಕ ನಗರದಲ್ಲಿ ನಿಲ್ಲಿಸಿ ಮೇಲಾಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದರು.
ಸುದ್ಧಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ,ಬೊಮ್ಮನಹಳ್ಳಿ,ನಗರ ಪೋಲೀಸ್ ಆಯುಕ್ತ ಲೋಕೇಶಕುಮಾರ್ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಕಾರ್ಮಿಕರ ಸಮಸ್ಯೆ ಆಲಿಸಿ ಎಲ್ಲ ಕಾರ್ಮಿಕರನ್ನು ಭೀಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.
ಗೋವಾದಿಂದ ಬೆಳಗಾವಿಗೆ ಬಂದಿರುವ ಈ ಕಾರ್ಮಿಕರ ಪರಿಸ್ಥಿತಿ .ಅತಂತ್ರವಾಗಿದ್ದು,ಬೆಳಗಾವಿ ಜಿಲ್ಲಾಡಳಿತ ಈ ಕಾರ್ಮಿಕರಿಗೆ ಸಹಾಯಕ್ಕೆ ಮುಂದಾಗಿದೆ