ಬೆಳಗಾವಿ- ದೇಶಾದ್ಯಂತ ಏಕರೂಪ ತೆರಿಗೆ ಪದ್ಧತಿಯಾದ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿರುವುದರಿಂದ ರಾಜ್ಯಾದ್ಯಂತ ಎಲ್ಲಾ ವರ್ತಕರು, ವ್ಯಾಪಾರ ವಹಿವಾಟುಗಳನ್ನ ಇದೇ ಜನವರಿ ೧೫ ರೊಳಗಾಗಿ, ಜಿಎಸ್ ಟಿ ಅಡಿಯಲ್ಲ ದಾಖಲಾತಿ ಹಾಗೂ ನೊಂದಣಿ ಮಾಡಿಕೊಳ್ಳಬೇಕು ಎಂದು ವಾಣಿಜ್ಯ ತರಿಗೆ ಜಂಟಿ ಆಯುಕ್ತ ಎಸ್ ಮಿರ್ಜಾ ಅಜ್ಮಲ್ ಹೇಳಿದ್ದಾರೆ.
ಬೆಳಗಾವಿಯ ವಿಭಾಗದ ಮೌಲ್ಯವರ್ಧಿತ ತೆರಿಗೆ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೨೦೧೬ ಡಿಸೆಂಬರ್ ೧೮. ರಿಂದ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೀಗಾಗಿ ಇದೇ ಜನೆವರಿ ೧೫ ರ ತನಕ ಅವದಿ ಇದೆ ಎಲ್ಲ ವರ್ತಕರು ದಾಖಲಾತಿ ಹೊಂದಿ ವ್ಯಾಟ್ ತೆರಿಗೆ ಪದ್ದತಿ ಯಿಂದ ಜಿಎಸ್ ಟಿ ಯಲ್ಲಿ ನೋಂದಣಿ ಮಾಡಿಕೊಳ್ಳಿ ಎಂದರು. ಬೆಳಗಾವಿ ವಿಭಾಗೀಯ ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇರಿಯ ವ್ಯಾಪ್ತಿಗೆ ಬರುವ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳ ವರ್ತಕರು ನೋಂದಣಿ ಮಾಡಿಕೊಳ್ಳಿ ಎಂದರು.
ವ್ಯಾಟಿಗೆ ಒಳಪಡುವ ಎಲ್ಲರು ಈಗಾಗಲೆ ೫೦ ಸಾವಿರಕ್ಕೂ ಹೆಚ್ಚು ಜನರು ನೊಂದಣಿ ಮಾಡಿಕೊಂಡಿದ್ದಾರೆ, ಈಗಾಗಲೆ ಶೇ ೮೦ % ರಷ್ಟು ನೊಂದಣಿ ಕಾರ್ಯ ಮುಗದಿದೆ ಇನ್ನು ೨೦% ಬಾಕಿ ಇದೆ ಇನ್ನೆರಡು ದಿನದಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ರು. ಎಸ್ ಮಿರ್ಜಾ ಅಜ್ಮತ್ ಉಲ್ಲಾ.