ಬೆಳಗಾವಿ-ಗೋಕಾಕಿಗೆ ಆಗಮಿಸಿರುವ ಮಾಜಿ ಮಂತ್ರಿ,ಹಾಲಿ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ ಅವರು ಇವತ್ತು ಹೊಸ ಬಾಂಬ್ ಸಿಡಿಸಿದ್ದಾರೆ.ಜಾರಕಿಹೊಳಿಯನ್ನ, ವಿಶ್ವನಾಥ್‌ನ ಯಾರು ತುಳಿಯಲು ಆಗಲ್ಲ. ಎಂದು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಕೈತಪ್ಪುತ್ತಿರುವ ವಿಚಾರದ ಬಗ್ಗೆ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಅವರ ಸಚಿವ ಸ್ಥಾನ ತಪ್ಪಲು ಕಾಣುವ ಕೈಗಳೇ ಕಾರಣ.ರಮೇಶ್ ಜಾರಕಿಹೊಳಿಯನ್ನೂ ನಮ್ಮನ್ನೂ ಕಾಣುವ ಕೈಗಳೇ ಮುಗಿಸುತ್ತವೆ. ಸಿದ್ರಾಮಯ್ಯ, ನಾವು, ಜಾರಕಿಹೊಳಿ, ಹಿಂದುಳಿದ ವರ್ಗದವರು ಯಾರು ಬದಕಂಗಿಲ್ಲ ಇಲ್ಲಿ.ರಮೇಶ್ಜಾರಕಿಹೊಳಿ ಬಿಜೆಪಿ ಸರ್ಕಾರ ಸ್ಥಾಪನೆಗೆ ಪ್ರಮುಖ ಕಾರಣರಾದವರು. ಅವರಿಗೆ ಈ ರೀತಿ ಆಟ ಆಡಿಸುತ್ತಾ ಕುಳಿತ್ರೇ. ಜಾರಕಿಹೊಳಿಯನ್ನ, ವಿಶ್ವನಾಥ್‌ನ ಯಾರು ತುಳಿಯಲು ಆಗಲ್ಲ.ಎಂದು ವಿಶ್ವನಾಥ ಗುಡುಗಿದ್ದಾರೆ.
ಇದೆಲ್ಲಾ ತಾತ್ಕಾಲಿಕ, ನಿಮಗೆ ಅಧಿಕಾರ ನಾವೇ ಕೊಟ್ಟಿದ್ದೇವೆ.
ನಾವು ಕೊಟ್ಟ ತ್ರಿಶೂಲದಲ್ಲಿ ನಮ್ಮನ್ನ ತೀವಿತಿದ್ದೀರಿ.ಇದು ಶಾಶ್ವತ ಅಲ್ಲ ಎಂದು ವಿಶ್ವನಾಥ ಅಸಮಾಧಾನವನ್ನು ಗೋಕಾಕಿನಲ್ಲಿ ಹೊರ ಹಾಕಿದ್ದು ವಿಶೇಷ.ವಿಶ್ವನಾಥರ ಗೋಕಾಕ್ ಭೇಟಿ,ಅನೇಕ ರಾಜಕೀಯ ಬೆಳವಣಿಗೆಗಳ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ