Breaking News

ಬೆಳಗಾವಿ ಪಾಲಿಕೆಗೆ ಹಲಗಾ ರೈತರ ಮುತ್ತಿಗೆ

 

ಬೆಳಗಾವಿ-ಹಲಗಾ ಗ್ರಾಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಮಾಡುತ್ತಿರುವದನ್ನು ವಿರೋಧಿಸಿ ಹಲಗಾ ಗ್ರಾಮದ ನೂರಾರು ಜನ ರೈತರು ಇಂದು ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು
ಹಲಗಾ ಗ್ರಾಮದ ರೈತರ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಂಡು ರೈತರನ್ನು ಬೀದಿ ಪಾಲು ಮಾಡಲಾಗಿದ್ದು ಬೆಳಗಾವಿ ಪಾಲಿಕೆ ಹಲಗಾ ಗ್ರಾಮದಲ್ಲಿ ಕೊಳಚೆ ಸಂಸ್ಕರಣಾ ಘಟಕ ನಿರ್ಮಿಸುವದನ್ನು ಕೈಬಿಡಬೇಕೆಂದು ಬೆಳಗಾವಿಯ ಶೇತ್ಕರಿ ಸಂಘಟನೆ ಮಾಜಿ ಮಹಾಪೌರ ಶಿವಾಜಿ ಸುಂಠಕರ ನೇತ್ರತ್ವದಲ್ಲಿ ಪ್ರತಿಭಟನೆ ಮಾಡಿ ಪಾಲಿಕೆ ಆಯುಕ್ತರಿಗೆ ಮನವಿ ಅರ್ಪಿಸಿದರು
ರೈತರಿಗೆ ನ್ಯಾಯ ಸಿಗೋವರೆಗೆ ಹೋರಾಟ ನಿಲ್ಲುವದಿಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರಿಗೆ ಆಗಿರುವ ಅನ್ಯಾಯದ ಬಗ್ಗೆ ಮನವಿ ಅರ್ಪಿಸುತ್ತೇವೆ ಯಾವ ಕಾರಣಕ್ಕೂ ಹಲಗಾ ಗ್ರಾಮದಲ್ಲಿ STP ಪ್ಲಾಂಟ್ ನಿರ್ಮಿಸುವದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು

ತುರಮರಿ ಗ್ರಾಮದ ಕಚರಾ ಡಿಪೋ ಶಿಪ್ಟ ಮಾಡಬೇಕು ಕಸಾಯಿ ಖಾನೆಗಳನ್ನು ಬಂದ್ ಮಾಡಬೇಕು ಎಂದು ಒತ್ತಾಯ ಮಾಡಿದ್ರು ಪೋಲೀಸರ ಸರ್ಪಗಾವಲನ್ನು ಭೇದಿಸಿದ ಪ್ರತಿಭಟನಾಕಾರರು ಕಚೇರಿಯ ಮುಖ್ಯದ್ವಾರದ ಬಳಿ ಕುಳಿತುಕೊಂಡು ಪ್ರತಿಭಟಿಸಿದರು

ಈ ಸಂಧರ್ಭದಲ್ಲಿ ಪೋಲೀಸರು ಹಾಗು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆದು ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *