
ಬೆಳಗಾವಿ- ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಎಂದೆದಿಗೂ ನಡೆಯಲಾರದ ಬೆಂಕಿ ಆವಘಡ ಸಂಭವಿಸಿದೆ ಗ್ರಾಮದ ಸುಮಾರು 70 ಕ್ಕೂ ಹೆಚ್ಚು ಮನೆಗಳೂ ಸುಟ್ಟು ಭಸ್ಮವಾಗಿದ್ದು ಇಡೀ ಗ್ರಾಮ ಬೆಂಕಿಯ ಜ್ವಾಲೆಯಲ್ಲಿ ಬೆಂದು ಹೋಗಿದೆ
ಆಕಸ್ಮಿಕ ಬೆಂಕಿ ಅವಘಡಕ್ಕೆ 70ಕ್ಕೂ ಅಧಿಕ ಮನೆಗಳು ಭಸ್ಮವಾಗಿವೆ ಹತ್ತಾರು ಬಣವಿಗಳು ಬೆಂಕಿಯ ಜ್ವಾಲೆಗೆ ಬೂದಿಯಾಗಿವೆ ಆಕಳುಗಳು ಬೆಂಕಿಗಾಹುತಿಯಾಗಿದ್ದು ಇಡೀ ಗ್ರಾಮ ಬೆಂಕಿಯ ಶೆಕೆಯಲ್ಲಿ ನರಳುತ್ತಿದೆ
ಹಂಚಿನಾಳ ಗ್ರಾಮದಲ್ಲಿ ಮೊದಲು ಹುಲ್ಲಿನ ಬನವಿಗಳಿಗೆ ವಿದ್ಯುತ್ ಶಾರ್ಟ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಬವಿಸಿದೆ ಎಂದು ಹೇಳಲಾಗುತ್ತಿದೆ. ಬಣವಿಗೆ ಹೊತ್ತಿದ ಬೆಂಕಿ ಇಡೀ ಗ್ರಾಮದಲ್ಲಿ ಆವರಿಸಿದೆ ಎಂದು ತಿಳಿದು ಬಂದಿದೆ. ಹತ್ತಾರು ಬಣವಿಗಳು, ಆಕಳುಗಳು ಬೆಂಕಿಗಾಹುತಿ ಯಾಗಿವೆ
ಸ್ಥಳದಲ್ಲಿ ೫ ಅಗ್ನಿಶಾಮಕ ದಳ ವಾಹನ ಬೆಂಕು ನಂದಿಸುವ ಕೆಲಸ ನಡೆದಿದೆ ಗ್ರಾಮಸ್ಥರು ಬೆಂಕಿ ಆವಘಡದಿಂದ ಕಂಗಾಲಾಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ