ಮೈತ್ರಿ ಪಕ್ಷ ವ್ಯಾಪ್ತಿಯಿಂದ ಹೊರಗೆ ಇದ್ದು ಹೋರಾಟ ಮಾಡಬೇಕೆಂದಿದ್ದೇನೆ-ದೇವೇಗೌಡ
ಬೆಳಗಾವಿ-ಮೈತ್ರಿ ಪಕ್ಷ ವ್ಯಾಪ್ತಿಯಿಂದ ಹೊರಗೆ ಇದ್ದು ಹೋರಾಟ ಮಾಡಬೇಕೆಂದಿದ್ದೇನೆ ಎಂದು ಹೆಚ್ ಡಿ ದೇವೇಗೌಡ ತಿಳಿಸಿದ್ದಾರೆ
ಗೋಕಾಕಿನ ಜೆಡಿಎಸ್ ಅಭ್ಯರ್ಥಿ ಅಶೋಕ ಪೂಜಾರಿ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು
ಗೋಕಾಕ್‌ಗೆ ಇಂದು ಪಕ್ಷದ ಕಾರ್ಯಕರ್ತನಾಗಿ ಬಂದಿದ್ದೇನೆ ನಾನು ಲೋಕಸಭಾ ಸದಸ್ಯನೂ ಅಲ್ಲ, ಪ್ರಧಾನಮಂತ್ರಿ ಯೂ ಅಲ್ಲಬೆಳಗಾವಿ ಮೇಲೆ ನನಗೆ ವಿಶೇಷ ಗೌರವ ಇದೆ ನಾನು ಸಿಎಂ ಆಗಿದ್ದಾಗ ಬೆಳಗಾವಿ ಜಿಲ್ಲೆಯಿಂದ ಜನತಾದಳಕ್ಕೆ 14 ಸ್ಥಾನ ಕೊಟ್ಟಿತ್ತು ಈ ಭಾಗಕ್ಕೂ ನನಗೂ ಬಹಳ ಸಂಬಂಧ ಇದೆ ಎಂಟು ಶುಗರ್ ಫ್ಯಾಕ್ಟರಿ ಗಳನ್ನು ಇಲ್ಲಿ ಕೊಟ್ಟಿದ್ದೇನೆ ಮಾರ್ಕಂಡೇಯ ನೀರಾವರಿ ಯೋಜನೆ ಈ ಜಿಲ್ಲೆಗೆ ಕೊಟ್ಟಿದ್ದೇನೆ ಪಿ.ವಿ.ನರಸಿಂಹರಾವ್ ಸರ್ಕಾರದಲ್ಲಿ ಶುಗರ್ ಫ್ಯಾಕ್ಟರಿ ಲೈಸೆನ್ಸ್‌ಗೆ ಕಂಟ್ರೋಲ್ ಇತ್ತು ಆದರೂ
ನಾನು ರೈತರ ಪರವಾಗಿ ಹೋರಾಟ ಮಾಡಿದ್ದೇನೆ ಎಂದರು ಹೆಚ್. ಡಿ.ದೇವೇಗೌಡ
ಈ ಉಪಚುನಾವಣೆಯಲ್ಲಿ ಹೆಚ್‌ಡಿಕೆ ಎರಡು ದಿನ ಇಲ್ಲೇ ಇದ್ದು ಪ್ರಚಾರ ಮಾಡಿದ್ದಾರೆ, ಕಾರ್ಯಕರ್ತರ ಜೊತೆ ಚರ್ಚೆ ನಡೆಸಿದ್ದಾರೆ ಈ ಚುನಾವಣೆಯಲ್ಲಿ ಎಲ್ಲಾ ನಾಯಕರು ಒಗ್ಗೂಡಿ ಅಶೋಕ್ ಪೂಜಾರಿ ಪರ ಪ್ರಚಾರ ಮಾಡುತ್ತಿದ್ದಾರೆ ಕಳೆದ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಅಶೋಕ ಪೂಜಾರಿ ಸೋತಿದ್ದಾರೆ ಅಶೋಕ್ ಪೂಜಾರಿ ಮೇಲೆ ಚುನಾವಣೆಗೆ ಸ್ಪರ್ಧಿಸದಂತೆ ಬಹಳ ಒತ್ತಡವಿತ್ತು ಒಂದು ಹಂತದಲ್ಲಿ ನಮ್ಮ ಅಧ್ಯಕ್ಷರಿಗೆ ಪ್ರಾಣ ಬೆದರಿಕೆಯೂ ಇತ್ತು
ಎಲ್ಲ ಒತ್ತಡಗಳನ್ನು ಎದುರಿಸಿ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ಈ ವ್ಯಕ್ತಿಯನ್ನು ಗೆಲ್ಲಿಸಿ ಕೊಡಿ ಎಂದು ಗೋಕಾಕ್ ಜನರಲ್ಲಿ ವಿನಂತಿಸಲು ಬಂದಿದ್ದೇನೆ ಎಂದು ದೇವೇಗೌಡರು ಗೋಕಾಕಿನ ಜನತೆಯಲ್ಲಿ ಮನವಿ ಮಾಡಿಕೊಂಡರು.
ಬಿಜೆಪಿ ಅಧಿಕಾರದಿಂದ ದೂರ ಇಡಲು ಎಲ್ಲಾ ಆಯ್ಕೆಗಳು ಓಪನ್ ಇವೆ ಎಂಬ ಕೆ.ಸಿ.ವೇಣುಗೋಪಾಲ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ದೇವೇಗೌಡರು
ನಾನು ವೇಣುಗೋಪಾಲರವರ ಬಗ್ಗೆ ಲಘುವಾಗಿ ಮಾತನಾಡಲ್ಲಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿದ್ದಾರೆ ಮೈತ್ರಿ ಸರ್ಕಾರ ಹೇಗೆ ಹೋಯ್ತು ಅಂತಾ ಗೊತ್ತಿದೆಮಹಾರಾಷ್ಟ್ರದಲ್ಲಿ ನಡೆದ ಘಟನೆ ಬೇರೆ ಅದರಲ್ಲಿ ನನ್ನ ಪಕ್ಷ ಇಲ್ಲ ನಾನು ಎರಡು ಪಕ್ಷಗಳ ವಿರುದ್ಧ ಹೋರಾಟ ಮಾಡ್ತಿದ್ದೇನೆಮೈತ್ರಿ ಪಕ್ಷ ವ್ಯಾಪ್ತಿಯಿಂದ ಹೊರಗೆ ಇದ್ದು ಹೋರಾಟ ಮಾಡಬೇಕೆಂದಿದ್ದೇನೆ
ಎಂದು ದೇವೇಗೌಡರು ಹೇಳಿದರು.
ಹಿಂದೆ ನನ್ನ ಕೇಳದೇ ಹೆಚ್ ಡಿಕೆ ಬಿಜೆಪಿ ಜೊತೆ ಹೋದ್ರು
ಕಳೆದ ಬಾರಿ ಕಾಂಗ್ರೆಸ್ ನಾಯಕರು ನಮ್ಮ ಮನೆಗೆ ಬಂದ್ರು ಕುಮಾರಸ್ವಾಮಿಯನ್ನೇ ಸಿಎಂ ಮಾಡಿ ಅಂತಾ ಹೇಳಿದರು2004ರಲ್ಲಿ ಖರ್ಗೆರನ್ನು ಸಿಎಂ ಮಾಡಬೇಕಿತ್ತು ನಾನು ಪ್ರಪೋಸಲ್ ಮಾಡ್ತೀನಿ ಮಾಡಿ ಎಂದೆ ಆಗ ಅವರು
ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಕೆಲಸ ಮಾಡ್ತಿದಾರೆ ಅಂದ್ರು ಆಗ ಪರಮೇಶ್ವರ ಅಥವಾ ಮುನಿಯಪ್ಪರನ್ನು ಮಾಡಿ ಎಂದಿದ್ದೆ
ನನ್ನ ಮಾತಿಗೆ ಮಲ್ಲಿಕಾರ್ಜುನ ಖರ್ಗೆರವರು ಒಪ್ಪಿಕೊಂಡಿದ್ರು
ಆದರೆ ಆ ವೇಳೆ ಕುಮಾರಸ್ವಾಮಿಯೇ ಸಿಎಂ ಆಗಬೇಕು ಅಂತಾ ಹೈಕಮಾಂಡ್ ಹೇಳಿದೆ ಅಂತಾ ಅಂದ್ರು ಎಂದುಗೋಕಾಕ್‌ನಲ್ಲಿ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರು ಹಳೆಯ ನೆನಪುಗಳನ್ನು ಮೆಲಕು ಹಾಕಿದರು
ನನ್ನ ಪಕ್ಷದ ಹಿರಿಯ ಮುಖಂಡ ಅಶೋಕ್ ಪೂಜಾರಿ,ಈ
ಅಶೋಕ್ ಪೂಜಾರಿ ಗೆಲ್ಲಿಸಿ ಜನರು ಪ್ರಾದೇಶಿಕ ಪಕ್ಷ ಬೆಳೆಸುತ್ತಾರೆ ಎಂಬ ವಿಶ್ವಾಸವಿದೆ
ನಾನು ಯಾವ ಸಮುದಾಯಕ್ಕೆ ಅನ್ಯಾಯ ಮಾಡಿದ್ದೇನೆ? ಈ ಭಾಗದ ಅಭಿವೃದ್ಧಿಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆಯಡಿಯೂರಪ್ಪ ಟೀಕೆ ಮಾಡಲು ನಾನು ಇಲ್ಲಿ ಬಂದಿಲ್ಲ
ಕುದುರೆ ವ್ಯಾಪಾರ ಮಾಡಿದ್ದು ಯಡಿಯೂರಪ್ಪ ರ ಮಹತ್ತರ ಸಾಧನೆ ಎಂದು ಆರೋಪಿಸಿದರು
ಮಾಜಿ ಶಾಸಕರುಗಳೇ ಮುಂದಿನ ಮಂತ್ರಿಗಳೇ ಅಂತಾ ಭಾಷಣ ಮಾಡ್ತಿದಾರೆ 105 ಜನ ಮೊದಲು ಗೆದ್ದಿದ್ದ ಪೈಕಿ 18 ಜನರನ್ನು ಮಂತ್ರಿ ಮಾಡಿಕೊಂಡಿದಾರೆ ಅವರಲ್ಲೇ 80 ಜನ ಕೂಂತಿದ್ದಾರೆ, ಅವರನ್ನು ಬಿಟ್ಟು ಈ 15 ಜನರಿಗೆ ಮಂತ್ರಿ ಮಾಡಿದ್ದಾರೆ
ಅವರಿಗೆ ಹೇಗೆ ಕೊಡ್ತಾರೆ, ಬಿಎಸ್‌ವೈ ಹೇಳಿಕೆ ಎಷ್ಟು ಹಾಸ್ಯಾಸ್ಪದ ಎಂದರು ಗೆಲ್ಲದೇ ಇದ್ದ ಲಕ್ಷ್ಮಣ್ ಸವದಿರನ್ನು ಡಿಸಿಎಂ ಮಾಡಿದ್ರು, ಅವರಿಗೆ ಟಿಕೆಟ್ ಕೊಡಲಿಲ್ಲ ಅವರನ್ನೂ ಮಂತ್ರಿ ಮಾಡ್ತೇವೆ, ಸವದಿರನ್ನು ಎಂಎಲ್ ಸಿ ಮಾಡಿ ಡಿಸಿಎಂ ಇರ್ತಾರೆ ಅಂತಾರೆ ಜನರು ಪ್ರಬುದ್ಧತೆಯಿಂದ ಇದ್ದಾರೆ, ಜನರು ನಂಬ್ತಾರಾ ಇದನ್ನ?? ಎಂದು ಪ್ರಶ್ನಿಸಿದರು
ಬಿಜೆಪಿ ಜೊತೆ ಕೈ ಜೋಡಿಸುತ್ತೀರಾ ಅಂತಾ ದೇವೇಗೌಡರಿಗೆ ಮಾಧ್ಯಮದವರ ಪ್ರಶ್ನೆ
ನನ್ನ ಮಗ ಬಿಜೆಪಿ ಜೊತೆ ಹೋಗಿ ನೋವು ಅನುಭವಿಸಿ ಬಂದಿದ್ದಾನೆ ಅಪ್ಪ ನಾನು ಹೋಗಲ್ಲ ಅಂತಾ ನನ್ನ ಮಗನೇ ಹೇಳುತ್ತಿದ್ದಾನೆಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ತೀರ್ಮಾನ ಕೈಗೊಂಡಿದೆ ಯಡಿಯೂರಪ್ಪರ ಸರ್ಕಾರಕ್ಕೆ ನನ್ನ ಪಕ್ಷದ ವತಿಯಿಂದ ಯಾವುದೇ ಆತಂಕ ಇಲ್ಲ ಎಂದು ದೇವೇಗೌಡರು ಭರವಸೆ ನೀಡಿದ್ದಾರೆ.
ಯಡಿಯೂರಪ್ಪ ಆನಂದವಾಗಿ ಇರಲಿ
ಸೋತ ಶಾಸಕನನ್ನು ಡಿಸಿಎಂ ಮಾಡಿದ್ದಾರೆ
ಉಮೇಶ್ ಕತ್ತಿ ನನ್ನ ಹಳೆಯ ಸ್ನೇಹಿತ
ಅಂತ ಹಿರಿಯ ನಾಯಕರಿಗೆ ಇವರು ಮಂತ್ರಿಗಿರಿ ಕೊಟ್ಟಿಲ್ಲ ನಾನು ಮತ್ತೆ ಸಿಎಂ ಆಗ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ
ತೀರ್ಮಾನ ಕೊಡುವವರು ಮತದಾರರು*
ಅಕ್ಕಿ ಕೊಡೋದು ಏನೂ ಹೊಸದಲ್ಲ
ನಾನು ಪ್ರಧಾನಿಯಾಗಿದ್ದಾಗ 10 ಕೆ.ಜಿ. ಅಕ್ಕಿ, ಸೀಮೆಎಣ್ಣೆ ಇತ್ಯಾದಿ ಕೊಟ್ಟಿದ್ದೆ ಸಿದ್ದರಾಮಯ್ಯ ಗೆ ಜ್ಞಾಪಕ ಶಕ್ತಿ ಇದೆ
*ಅವರು ಸ್ವಲ್ಪ ಸಮಾಧಾನ ಆಗಿ ಇದ್ರೆ ಒಳ್ಳೆಯದು*ಎಂದು ದೇವೇಗೌಡರು ಸಿದ್ರಾಮಯ್ಯಗೆ ಟಾಂಗ್ ಕೊಟ್ಟರು.
ಜನತಾಪಕ್ಷದಲ್ಲಿದ್ದಾಗಿನ ಘಟನೆ ಬಗ್ಗೆ ಹೇಳಿದ್ರೆ ಅವರ ಮನಸ್ಸಿಗೆ ನೋವಾಗುತ್ತೆ
ಕಾಂಗ್ರೆಸ್ ನಲ್ಲೂ ಒಳ್ಳೆಯ ಒಳ್ಳೆಯ ಸಮರ್ಥ ಲೀಡರ್ ಇದ್ದಾರೆ ಖರ್ಗೆ, ಮುನಿಯಪ್ಪ, ದೇಶಪಾಂಡೆ ಇಲ್ವೇ ಅಂತಾ ಹೆಚ್.ಡಿ.ದೇವೇಗೌಡ ಪ್ರಶ್ನೆ ಮಾಡಿದರು.