ಬೆಳಗಾವಿ : ಫೆ.8 ನೇ ತಾರೀಖನಂದೇ ಬಜೆಟ್ ಮಂಡನೆ ಕುಮಾರಸ್ವಾಮಿ ಮಂಡಿಸಲಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಅವರು ಮಂಗಳ ವಾರ ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಅನುಮಾನವೇ ಇಲ್ಲ ಈ ಭಾರಿ ಕುಮಾರಸ್ವಾಮಿ ಅವರು ರೈತಪರ ಬಜೆಟ್ ಮಂಡಿಸುತ್ತಾರೆ. ನಾವೂ ರೈತರಿಗೆ ಒಳ್ಳೆಯ ಬಜೆಟ್ ನೀಡುತ್ತೇವೆ ಎಂದು ಹೇಳಿದರು.
ಸಮ್ಮೀಶ್ರ ಸರ್ಕಾರ ಪತನದ ವಿಚಾರವಾಗಿ ಮಾದ್ಯಮ ಮಿತ್ರರು ಪ್ರಶ್ನಿಸಿದಾಗ ಸರ್ಕಾರ ಬೀಳುವುದಿಲ್ಲ. ಗಾಬರಿ ಆಗುವಂತ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ. ನಮ್ಮ ಸರ್ಕಾರಕ್ಕೆ ಏನು ಭಯವಿಲ್ಲ. ಬಿಜೆಪಿ ಗೆ ಅಧಿಕಾರ ಹಿಡಿಯಬೇಕೆಂಬ ಭ್ರಮೆಇದೇ. ಬಿಜೆಪಿ
ಯಾವ ಹೋಮ ಮಾಡಿದ್ರು ಏನು ಆಗಲ್ಲ. ಯಡಿಯೂರಪ್ಪ ಗರುಡ ಹೋಮ ಠುಸ್ ಆಗುತ್ತೇ ಕಾದು ನೋಡಿ, ನಾನಂತು ಹೋಮ ಮಾಡುವುದಿಲ್ಲ..ನಾನು ಶಿವನ ಭಕ್ತ ಎಂದರು.
ಎ.ಮಂಜು ವಿರುದ್ಧ ಮತ್ತೆ ರೇವಣ್ಣ ಗರಂ ಆದ ಅವರು ಬೆಳಗ್ಗೆ ಬೆಳಗ್ಗೆ ಅವರ ಹೆಸರನ್ನ ಯಾಕೇ ತಗಿತೀರಾ.ನಿಮ್ಮ ಬಾಯಿಯಲ್ಲಿ ಅಂತವರ ಹೆಸರು ಬರಬಾರದು.ನಾನಂತು ಅಂತವರ ಹೆಸರು ಮತ್ತು ಅವರ ಬಗ್ಗೆ ಏನು ಮಾತಾಡಲ್ಲ ಎಂದು ಹೇಳಿದರು.
ಕಾಂಗ್ರೆಸ್ ಮಾಡಿದ ತಪ್ಪಿಗೆ ಹಾಸನದಲ್ಲಿ ಒಂದು ಬಿಜೆಪಿ ಸ್ಥಾನ ಬಂದಿದೆ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಶಾಸಕರ ಕಿರಿಕಿರಿ ವಿಚಾರವಾಗಿ ಉತ್ತರಿಸಿದ ಅವರು, ಎಲ್ಲ ಪಕ್ಷದಲ್ಲೂ ಶಾಸಕರ ಕಿರಿಕಿರಿ ಆಗೇ ಆಗುತ್ತೇ. ಕುಮಾರಸ್ವಾಮಿ ಯಾವುದೇ ರಾಜೀನಾಮೆ ಕೊಡುವುದಿಲ್ಲ.ರೈತರ ಪರವಾಗಿ ಒಳ್ಳೆಯ ಬಜೆಟ್ ಮಂಡಿಸುತ್ತಾರೆ. ಎಚ.ಡಿ.ರೇವಣ್ಣರಿಗೆ ಸಿಎಂ ಆಗುವ ಆಸೆ ಇಲ್ಲವಾ ಪ್ರಶ್ನೆಗೆ.ನನಗೆ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡರು ಒಳ್ಳೆ ಜವಾಬ್ದಾರಿ ಕೊಟ್ಟಿದ್ದಾರೆ ಎಂದು ಹೇಳಿ ಸುಮ್ಮನಾದ ಎಚ.ಡಿ.ರೇವಣ್ಣ.ಸಿದ್ದರಾಮಯ್ಯ ಬೆಂಬಲಿತ ಶಾಸಕರ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು
.ರಮೇಶ್ ಜಾರಕಿಹೊಳಿ ನಮ್ಮ ಬ್ರದರ್ ಇದ್ದಹಾಗೇ.ರಮೇಶ್ ಗೆ ಕುಮಾರಸ್ವಾಮಿ ಮತ್ತು ನನ್ನ ಜೊತೆ ಒಳ್ಳೆ ಸಂಬಂಧವಿದೆ. ಎಲ್ಲವನ್ನ ಸರಿ ಪಡಿಸೋಣ ಎಂದು ಸಚಿವ ರೇವಣ್ಣ ಹೇಳಿದರು.