ಬೆಳಗಾವಿ- ಬೆಳಗಾವಿಯಲ್ಲಿ ಫೆಬ್ರುವರಿ 4 ರಂದು ಬೃಹತ್ತ ಹಿಂದೂ ಜನಜಾಗೃತಿ ಸಮಾವೇಶ ನಡೆಯಲಿದ್ದು ಈ ಸಮಾವೇಶದಲ್ಲಿ ದೇಶದ ವಿವಿಧ ಹಿಂದೂ ಸಂಘಟನೆಗಳ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ
ಹಿಂದೂ ಜನಜಾಗೃತಿ ಸಮೀತಿ ಆಯೋಜಿಸಿರುವ ಈ ಹಿಂದೂ ಸಮಾವೇಶ ಬೆಳಗಾವಿಯ ವಡಗಾಂವ ಪರಿಸರದಲ್ಲಿನ ಆದರ್ಶ ಕಾಲೇಜು ಮೈದಾನ ದಲ್ಲಿ ಫೆಬ್ರುವರಿ ನಾಲ್ಕರಂದು ಸಂಜೆ ಆರು ಘಂಟೆಗೆ ಆರಂಭವಾಗಲಿದೆ ಎಂದು ಸಮೀತಿಯ ಮುಖಂಡ ಸುಧೀರ ಹೇರೇಕರ ತಿಳಿಸಿದ್ದಾರೆ
ಬೆಳಗಾವಿಯಲ್ಲಿ ನಡೆಯುವ ಸಮಾವೇಶದಲ್ಲಿ ಹಿಂದೂ ಸಂಘಟನೆಗಳ ಮುಖಂಡರಾದ ಮನೋಜ ಕಡಾಯೆ, ಪ್ರತಿಭಾ ತಾವರೆ, ರಾಹುಲ್ ಕೌಲ್ , ಸೇರಿದಂತೆ ಹಲವಾರು ಜನ ಮುಖಂಡರು ಪಾಲ್ಗೊಂಡು ಹಿಂದೂ ರಾಷ್ಟ್ರ ಸ್ಥಾಪನೆ ಕುರಿತು ಸಾಮೂಹಿಕ ಪ್ರತಿಜ್ಞೆ ಮಾಡಲಿದ್ದಾರೆ
ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಹಿಂದೂ ಧರ್ಮ ರಕ್ಷಣೆ ,ಧರ್ಮ ಶಿಕ್ಷಣ, ಸಾಧನೆ ಕುರಿತು ಗ್ರಂಥ ಪ್ರದರ್ಶನ ನಡೆಯಲಿದೆ
ಹಿಂದೂ ಧರ್ಮದ ಮೇಲೆ ಆಗುತ್ತಿರುವ ಅನ್ಯಾಯ ,ದೌರ್ಜನ್ಯ, ಲವ್ ಜುಹಾದ್, ಹಿಂದೂ ಧರ್ಮ ರ್ಯಾಲಿಗಳ ಮೇಲೆ ಆಗುತ್ತಿರುವ ಆಕ್ರಮಣ, ಕಾಶ್ಮೀರ ಹಿಂದೂಗಳ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದ್ದು ಕಾಶ್ಮೀರ ಹಿಂದೂಗಳಿಗೆ ಆಗುತ್ತಿರುವ ಅನ್ಯಾಯದ ಕುರಿತು ಫಲಕ ಪ್ರದರ್ಶನ ನಡೆಯಲಿದೆ ಎಂದು ಸುಧೀರ ಹೇರೇಕರ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ