ಬೆಳಗಾವಿ
ಗೌರಿ ಲಂಕೇಶ್ ಹತ್ಯೆಗೂ ಹಿಂದೂ ಸನಾತನ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ದೇಶದಲ್ಲಿ ಸನಾತನ ಸಂಸ್ಥೆ ಆತಂಕವಾದಿ ಸಂಘಟನೆ ಎಂದು ರಾಜಕೀಯ ಪಕ್ಷಗಳು ಹೇಳಿಕೊಂಡು ತಿರುಗಾಡುತ್ತಿವೆ ಎಂದು ಹಿಂದೂ ಸನಾತನ ಸಂಸ್ಥೆಯ ಪ್ರತಿಭಾ ತಾವರೆ ಹೇಳಿದರು.
ಭಾನುವಾರ ಹಿಂದೂ ಜನಜಾಗೃತಿ ಬಹೃತ ಧರ್ಮ ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಕೆಲ ರಾಜಕೀಯ ಪಕ್ಷಗಳು ಹಿಂದೂ ಜನ ಜಾಗೃತಿ ಸಮಿತಿ ಆತಂಕವಾದಿ ಸಂಘಟನೆ ಎಂದು ಬಿಂಬಿಸುತ್ತಿವೆ. ಸನಾತನ ಸಂಸ್ಥೆ ಹಿಂದೂ ಸಂಘಟನೆಯಲ್ಲಿ ತೋಡಗಿಕೊಂಡಿದೆ.ಆದರೆ ದಾಬೋಳಕರ, ಪಾನ್ಸರೆ, ಎಂ.ಎಂ.ಕಲಬುರ್ಗಿ ಹತ್ಯೆ ಮಾಡಿದೆ ಎಂದು ಆರೋಪ ಮಾಡುತ್ತಿದ್ದಾರೆ. ಹಿಂದೂ ಸಂಘಟನೆಯಲ್ಲಿ ತೋಡಗಿಕೊಂಡವರು ಹಿಂದೂ ಹತ್ಯೆ ಮಾಡುತ್ತಾರಾ ಎಂದು ಪ್ರಶ್ನಿಸಿದರು.
ಕಾಶ್ಮೀರದಲ್ಲಿ ಆತಂಕವಾದಿಗಳು ಹಿಂದೂಗಳ ಮೇಲೆ ಹತ್ಯೆ ನಡೆಸುತ್ತಾರೆ. ಅವರ ಬಗ್ಗೆ ಚಕಾರ ಎತ್ತದ ರಾಜಕೀಯ ಪಕ್ಷಗಳು ಸನಾತನ ಸಂಸ್ಥೆಗಳ ಮೇಲೆ ಕೊಲೆ ಆರೋಪ ಮಾಡುತ್ತಿದ್ದಾರೆ. ಇದು ಹಿಂದೂರಾಷ್ಟ್ರ ಖಂಡನೆ ಮಾಡಬೇಕೆಂದರು.
ವಿನಾಕಾರಣ ಭಾರತದಲ್ಲಿ ಹಿಂದೂ ಸನಾತನ ಸಂಸ್ಥೆ ಆತಂಕವಾದಿ ಸಂಘಟನೆ ಎನ್ನುವವರಿಗೆ ಧಿಕ್ಕಾರವಿರಲಿ. ದಾಬೋಳಕರ ಕೊಲೆ ಪ್ರಕರಣದಲ್ಲಿ ಪೊಲೀಸರು ದಿಕ್ಕು ತಪ್ಪಿಸುತ್ತಿದ್ದಾರೆ. ಇದರಿಂದ ಕೊಲೆಗೈದ ಆರೋಪಿಗಳಿಗೆ ಜಾಮೀನು ನೀಡುವಂತೆ ನೋಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಉಜ್ವಲಾ ಗಾವಡೆ ಮಾತನಾಡಿ, ಸಾವಿರ ವರ್ಷದ ಇತಿಹಾಸದಲ್ಲಿ ಮಹಾನ್ ಪುರುಷರು ಹಿಂದೂ ರಾಷ್ಟ್ರವನ್ನು ಕಾಪಾಡುವಲ್ಲಿ ಹೋರಾಡಿದವರು. ಇತಿಹಾಸವನ್ನು ಅರಿತು ಶೌರ್ಯದಿಂದ ಹಿಂದೂ ರಾಷ್ಟ್ರ ಕಟ್ಟುವ ಪ್ರಯತ್ನವನ್ನು ಮಾಡಬೇಕೆಂದರು.
ಲವ್ ಜಿಹಾದ್, ಸೆಕ್ಸ್ ಜಿಹಾದ ಸೇರಿದಂತೆ ಹಿಂದೂವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತದೆ. ಇದನ್ನು ತಡೆಗಟ್ಟಲು ಹಿಂದೂ ಜನಜಾಗೃತಿ ಸಮಿತಿ ಹೋರಾಟ ನಡೆಸುತ್ತಿದೆ.
ದೆಹಲಿ ನಿರ್ಭಯ ಅತ್ಯಾಚಾರ ಘೋರ ಘಟನೆಯ ನಂತರ ದೇಶದಲ್ಲಿ 24 ಗಂಟೆಯಲ್ಲಿ ಒಬ್ಬ ಮಹಿಳೆ ಮೇಲೆ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಮಹಿಳೆಯರು ಜಾಗೃತರಾಗಬೇಕಿದೆ ಇಂಥ ಕೃತ್ಯಗಳ ವಿರುದ್ಧ ಹೋರಾಡುವ ಅಗತ್ಯವಿದೆ ಎಂದರು.
ಹಿಂದೂ ಧರ್ಮದಲ್ಲಿ ಮಹಿಳೆಗೆ ದೇವತೆಗೆ ಹೋಲಿಸುತ್ತಾರೆ. ವೀರ ರಾಣಿ ಕಿತ್ತೂರು ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀ ಬಾಯಿಯಂತೆ ಶೌರ್ಯದಿಂದ ಮಹಿಳೆಯರ ಸಂರಕ್ಷಣೆ ಮಾಡಿಕೊಳ್ಳಬೇಕಿದೆ ಎಂದರು.
ರಾಹುಲ ಕೌಲ ಮಾತನಾಡಿ, ದೇಶದಲ್ಲಿ ಲವ್ ಜೀಹಾದ ಪ್ರಕರಣ ದಿನದಿಂದ ದಿನಕ್ಕೆ ಇಸ್ಲಾಂ ಧರ್ಮ ಹೆಚ್ಚುಮಾಡುತ್ತಿದೆ. ಕಳೆದ 30 ವರ್ಷದಿಂದ ಕಾಶ್ಮೀರದಲ್ಲಿ ನಡೆಯುತ್ತಿದ್ದು ಈಗ ದೇಶದ ತುಂಬ ನಡೆಯುತ್ತಿದೆ ಎಂದು ಕಳವಳವ್ಯಕ್ತಪಡಿಸಿದರು.
ಹಿಂದೂಗಳ ಮೇಲೆ ಆದ ನೋವನ್ನು ಹತ್ತಿರದಿಂದ ನೋಡಿದ್ದೇನೆ. ಕಾಶ್ಮೀರ ಹಿಂದೂಗಳು ಪೂಜಾ, ಸಂಸ್ಕೃತಿ, ಮನೆಗಳನ್ನು ತೋರೆದು ಪಲಾಯಾನ ಮಾಡುತ್ತಿದ್ದಾರೆ. 15 ವರ್ಷಗಳ ಹಿಂದಿನ ಕಥೆಯನ್ನುರಾಜಕೀಯ ಪಕ್ಷಗಳ ಕಟ್ಟುತ್ತಿವೆ.
ಕಾಶ್ಮೀರದಲ್ಲಿ ಮುಸ್ಲಿಂರು ಹೆಚ್ಚಿದ್ದಾರೆ ಎಂದು ಚಿಂತಿಸುವ ರಾಜಕೀಯ ಪಕ್ಷಗಳು ನೂರಾರುವರ್ಷಗಳಿಂದ ಹಿಂದೂಗಳು ವಾಸ ಮಾಡುತ್ತಿದ್ದಾರೆ. ಅವರನ್ನು ಪಲಾಯಾನ ಮಾಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು.