ಬೆಳಗಾವಿ – ಇಂದು ಮದ್ಯಾಹ್ನ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಸಭೆ ಮಾಡುತ್ತಿರುವಾಗ ಹಿರೇಬಾಗೇವಾಡಿಯಲ್ಲಿ 85 ವರ್ಷದ ಅಜ್ಜಿ ಮೃತ ಪಟ್ಟಿದ್ದಾಳೆ ಎಂಬ ಸುದ್ಧಿ ಬರುತ್ತಿದ್ದಂತೆಯೇ ಹಲವಾರು ಪ್ರಶ್ನೆಗಳು ಎದುರಾಗಿದ್ದವು.
ಮೃತಪಟ್ಟಿರುವ ಅಜ್ಜಿ,ಸೊಂಕಿತರ ಸಂಬಂದಿಯೇ..? ಸೊಂಕಿತರ ಸಂಬಂದಿಯಾಗಿದ್ದರೆ ಅಜ್ಜಿಯನ್ನು ಕ್ವಾರಂಟೈನ್ ಮಾಡಲಿಲ್ಲವೇಕೆ..? ಇದು ಜಿಲ್ಲಾಡಳಿತದ ವೈಫಲ್ಯವೇ ….? ಎನ್ನುವ ಹಲವಾರು ಪ್ರಶ್ನೆಗಳು ಆಕ್ರೋಶಕ್ಕೆ ಕಾರಣವಾಗಿದ್ದವು.
ಸಮಯ ಸರಿದಂತೆ ಒಂದೊಂದು ಮಾಹಿತಿ ಹೊರಬಂದ ಬಳಿಕ ಸತ್ಯಾಂಶ ಗೊತ್ತಾಯಿತು..ಮೃತಪಟ್ಟ ಮುದುಕಿ ನಿನ್ನೆ ಸಂಜೆಯಷ್ಟೆ ಸೊಂಕಿತ ಎಂದು ಗೊತ್ತಾಗಿದ್ದ ಹಿರೇಬಾಗೇವಾಡಿಯ ಸೊಂಕಿತನ ಅಜ್ಜಿ ಎಂದು ಗೊತ್ತಾಯಿತು.
ಮೊಮ್ಮಗನ ರಿಪೋರ್ಟ್ ಪಾಸಿಟೀವ್ ಬಂದಿದೆ ಎಂದು ಅಜ್ಜಿಗೆ ಹೃದಯಾಘಾತ ಆಗಿರಬಹುದು ಎನ್ನುವ ಮಾತಗಳು ಕೇಳಿ ಬಂದಿದ್ದವು ..
ನಿನ್ನೆ ಸಂಜೆ ಹಿರೇಬಾಗೇವಾಡಿಯ ವ್ಯೆಕ್ತಿಗೆ ಸೊಂಕು ಇರುವದು ದೃಡವಾದ ಬಳಿಕ,ಹಿರೇಬಾಗೇವಾಡಿಯ ಪೋಲೀಸರು ಸೊಂಕಿತನ ಮನೆಗೆ ಹೋಗಿದ್ದಾರೆ. ಮನೆಗೆ ಪೋಲೀಸರು ಬರುತ್ತಿದ್ದಾರೆ ಎಂಬ ಸುದ್ಧಿ ಈ ಅಜ್ಜಿಗೆ ತಿಳಿಯುತ್ತಿದ್ದಂತೆಯೇ ಈ ಅಜ್ಜಿ ಮನೆಯಿಂದ ತಪ್ಪಸಿಕೊಂಡು ಸಂಬಂದಿಕರ ಮನೆಯಲ್ಲಿ ಅಡಗಿ ಕುಳಿತುಕೊಂಡಿದ್ದಳು ಆ ಅಜ್ಜಿಗೆ ಇಂದು ಬೆಳಿಗ್ಗೆ ಉಸಿರಾಟದ ತೊಂದರೆ ಎದುರಾದ ಬಳಿಕವೇ ಪೋಲೀಸರಿಗೆ ಈ 85 ವರ್ಷದ ವೃದ್ದೆ ಸೊಂಕಿತನ ಅಜ್ಝಿ ಎಂದು ಗೊತ್ತಾಗಿದೆ.
ಪೋಲೀಸರು ಜೀವದ ಹಂಗು ತೊರೆದು ಸೊಂಕಿತನ ಮನೆಗೆ ಹೋಗಿ ಎಲ್ಲರನ್ನು ಕ್ವಾರಂಟೈನ್ ಮಾಡಲು ಹೋದ್ರೆ ಮನೆಯಲ್ಲಿದ್ದ ಅಜ್ಜಿಯ ಬಗ್ಗೆ ಮನೆಯಲ್ಲಿರುವ ಯಜಮಾನರು ಪೋಲೀಸರಿಗೆ ಮಾಹಿತಿ ನೀಡಿದ್ದರೆ ಈ ಅಜ್ಜಿಯ ಜೀವ ಉಳಿಯ ಬಹುದಿತ್ತು, ಮನೆಯವರ ಅಚಾತುರ್ಯದಿಂದಾಗಿ ಈ ಘಟನೆ ನಡೆದಿರುವದು ಸತ್ಯ
ಇಂದು ಮೃತ ಪಟ್ಟ ಅಜ್ಜಿ ಸೊಂಕಿತನ ಸಂಪರ್ಕಕ್ಕೆ ಬಂದಿದ್ದಳು ಅಜ್ಜಿಯ ಗಂಟಲು ದ್ರವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು,ವರದಿ ಬಂದ ಬಳಿಕ ಈ ಅಜ್ಜಿಯ ಸಾವಿಗೆ ಕಾರಣ ಏನು ? ಅನ್ನೋದು ಗೊತ್ತಾಗಲಿದೆ.
ಅಜ್ಜಿಯ ಅಂತ್ಯಕ್ರಿಯೆಯನ್ನು ಧಾರ್ಮಿಕ ವಿಧಿಯ ಜೊತೆಗೆ ಸರ್ಕಾರದ ಮಾರ್ಗಸೂಚಿಯಂತೆ ನಡೆಯಲಿದೆ.
ಎರಡು ದಿನದ ಬಳಿಕ ಹಿರೇಬಾಗೇವಾಡಿಯ ಈ ಅಜ್ಜಿಯ ರಿಪೋರ್ಟ್ ಬರಲಿದೆ.