ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಮೊದಲು ಎಂಟ್ರಿ ಮಾಡಿದ್ದು ಹಿರೇಬಾಗೇವಾಡಿ ಗ್ರಾಮದಲ್ಲಿ ಡೇ ಒನ್ ನಿಂದ ಇಂದಿನವರೆಗೆ ಈ ಗ್ರಾಮ ಅನೇಕ ಸಂಕಷ್ಟ,ಅಪಮಾನಗಳನ್ನು ಸಹಿಸಿ ನಿನ್ನೆ ರಾತ್ರಿ ಹೆಮ್ಮಾರಿ ಕೊರೋನಾ ಕಾಟದಿಂದ ಮುಕ್ತವಾಗಿದೆ.
ಬೆಳಗಾವಿ ತಾಲ್ಲೂಕಿನ ಈ ಗ್ರಾಮವೊಂದರಲ್ಲೇ ಬರೊಬ್ಬರಿ 49 ಸೊಂಕಿತರು ಪತ್ತೆಯಾಗಿ ಎಲ್ಲರೂ ಗುಣಮುಖರಾಗಿದ್ದಾರೆ.ಹಲವಾರು ದಿನಗಳಿಂದ ತಲ್ಲಣಗೊಂಡಿದ್ದ ಈ ಗ್ರಾಮ ಇಂದಿನಿಂದ ನಿರಾಳವಾಗಿದೆ.
ತಬ್ಲೀಗ್ ನಂಟಿನಿಂದ ಈ ಗ್ರಾಮಕ್ಕೆ ಹೆಮ್ಮಾರಿ ಕೊರೋನಾ ಕಾಲಿಟ್ಟಿತ್ತು,ಅದಾದ ಬಳಿಕ ಸೊಂಕು 49 ಜನರಿಗೆ ತಗಲಿತ್ತು,ಈ 49 ಜನರ ಪೈಕಿ ಒಬ್ಬ ಅಜ್ಜಿ,ಕೊರೋನಾ ಸೊಂಕಿನಿಂದ ಮೃತಪಟ್ಟಿದ್ದು ಇದೇ ಗ್ರಾಮದಲ್ಲಿ.
ಅನೇಕ ಸಂಕಷ್ಟ ಗಳನ್ನು ಸಹಿಸಿ,ತಿಂಗಳುಗಳ ಕಾಲ ಶೀಲ್ ಡೌನ್ ಕರಾಳ ಛಾಯೆಯಲ್ಲಿ ಕಾಲ ಕಳೆದಿರುವ ಹಿರೇಬಾಗೇವಾಡಿ ಗ್ರಾಮ ಈಗ ಶೀಲ್ ಡೌನ್ ನಿಂದ ಮುಕ್ತವಾಗಿ,ಇಲ್ಲಿಯ ಜನ ಸಹಜ ಬದುಕಿನತ್ತ ಸಾಗಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ