ಬೆಳಗಾವಿ- ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಟೋಲ್ ನಾಕಾದಲ್ಲಿ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ ಇಲ್ಲಿ ಮನಸ್ಸಿಗೆ ಬಂದಾಗ ಟೋಲ್ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಟೋಲ್ ದರ ಹೆಚ್ಚಾದ ತಕ್ಷಣ ಕೆಸ್ಸಾರ್ಟಿಸಿ ಟೋಲ್ ಹೊರೆಯನ್ನು ಬಸ್ ಪ್ರಯಾಣಿಕರ ಮೇಲೆ ಭರಿಸುತ್ತಿದೆ
ಕೆಸ್ಸಾರ್ಟಿಸಿ ಅಧಿಕಾರಿಗಳ ಈ ಕ್ರಮದಿಂದ ಬೆಳಗಾವಿ-ಹುಬ್ಬಳ್ಳಿ ಮಾರ್ಗದ ಪ್ರಯಾಣಿಕರು ನಿಗದಿತ ದರಕ್ಕಿಂತ ದುಬಾರಿ ದರವನ್ನು ಭರಿಸಿ ಬಸ್ ಪ್ರಯಾಣ ಮಾಡುತ್ತಿದ್ದಾರೆ
ಕೆಸ್ಸಾರ್ಟಿಸಿ ಅಧಿಕಾರಿಗಳ ೀ ಕ್ರಮವನ್ನ ಹಿರೇ ಬಾಗೇವಾಡಿ,ಮುತ್ನಾಳ.ಮುಗುಟಖಾನ ಹುಬ್ಬಳ್ಳಿ,ಇಟಗಿ ಕ್ರಾಸ್.ಹಾಗು ಕಿತ್ತೂರಿನ ಜನ ಖಂಡಿಸಿದ್ದಾರೆ
ಟೋಲ್ ಶುಲ್ಕ ಹೆಚ್ಚಾದರೆ ಅದನ್ನು ಕೆಸ್ಸಾರ್ಟಿಸಿ ಸಂಸ್ಥೆಯೇ ಭರಿಸಬೇಕು ಇಲ್ಲವಾದಲ್ಲಿ ಟೋಲ್ ಶುಲ್ಕವನ್ನು ಸರ್ಕಾರಿ ವಾಹನಗಳಿಂದ ಪಡೆಯುವದನ್ನು ನಿಲ್ಲಿಸಬೇಕು ಅನ್ನೋದು ಬಸ್ ಪ್ರಯಾಣಿಕರ ಒತ್ತಾಯವಾಗಿದೆ
ಈ ಮೊದಲು ಬೆಳಗಾವಿ ನಗರದಿಂದ ಎಂ.ಕೆ ಹುಬ್ಬಳ್ಳಿ.ಇಟಗಿಕ್ರಾಸ್ ವರೆಗೆ ಬಸ್ ಪ್ರಯಾಣಿಕರು 33 ರೂಪಾಯಿಯಲ್ಲಿ ಪ್ರಯಾಣ ಮಾಡುತ್ತಿದ್ದರು ಆದರೆ ಈಗ ಟೋಲ್ ಹೆಚ್ಚಳವಾಗಿರುವದರಿಂದ ಕೆಸ್ಸಾರ್ಟಿಸಿ ಆಧಿಕಾರಿಗಳು ಟಿಕೇಟ್ ದರವನ್ನು ಎಕಾ ಏಕಿ ಹತ್ತು ರೂಪಾಯಿಯನ್ನು ಹೆಚ್ಚಳ ಮಾಡಿದ್ದಾರೆ ಹಿರೇಬಾಗೇವಾಡಿಯಿಂದ ಮುತ್ನಾಳ ಗ್ರಾಮಕ್ಕೆ ಹೋಗಬೇಕಾದರೆ ಈಗ 20 ರೂಪಾಯಿ ಕೊಡಬೇಕಾಗಿದೆ
ಹತ್ತರಗಿಯ ಟೋಲ್ ನಾಕಾದಲ್ಲಿ ಅತೀ ಕಡಿಮೆ ಟೋಲ್ ಪಡೆಯಲಾಗುತ್ತಿದೆ ಆದರೆ ಹಿರೇ ಬಾಗೇವಾಡಿ ಟೋಲ್ ನಾಕಾದಲ್ಲಿ ಅಂಧಾ-ದರ್ಭಾರ್ ನಡೆಯುತ್ತದ್ದರೂ ಸಹ ಜನ ಪ್ರತಿನಿಧಿಗಳು ನಿದ್ರಿಸುತ್ತಿದ್ದಾರೆ
ಜಿಲ್ಲಾಧಿಕಾರಿ ಎನ್ ಜ್ಯರಾಮ್ ಅವರು ಈ ಟೋಲ್ ನಾಕಾ ಆಕರಣೆ ಮಾಡುತ್ತಿರುವ ಟೋಲ್ ಶುಲ್ಕದ ಕುರಿತು ಪರಶೀಲನೆ ಮಾಡುವದು ಅತ್ಯಗತ್ಯವಾಗಿದೆ ಕೇಂದ್ರ ಸರ್ಕಾರ ಹಾಗು ಟೋಲ್ ಆಕರಣೆ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಗುತ್ತಿಗೆದಾರನ ನಡುವೆ ಯಾವ ರೀತಿಯ ಒಪ್ಪಂದ ಾಗಿದೆ ಅನ್ನೋದು ಬಹಿರಂಗವಾಗಬೇಕಾಗಿದೆ
Check Also
ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ
ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …