Breaking News

ಬೆಳಗಾವಿ ರಾಜ್ಯೋತ್ಸವದಲ್ಲಿ ಹಿರೇಮಠದ ಜೋಳಿಗೆಯಿಂದ ಕನ್ನಡಿಗರಿಗೆ ಹೋಳಿಗೆ..!!

ಬೆಳಗಾವಿ, ನವಂಬರ 1 ರಂದು ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಳ್ಳಿ ಹಾಗೂ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಿದರು.

ಬೆಳಗಾವಿಯ ಲಕ್ಷ್ಮೀ ಟೇಕ್ ಡಿ ಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬೆಳಗಾವಿಯಲ್ಲಿ ವಿಜೃಂಭಣೆಯಿಂದ ನಡೆಯುವ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಕನ್ನಡಾಭಿಮಾನಿಗಳಿಗೆ ಕಳೆದ 4 ವರ್ಷಗಳಿಂದ ಮಾಡಿಕೊಂಡು ಬಂದಿರುವಂತೆ ಈ ಬಾರಿಯೂ ಅನ್ನ ದಾಸೋಹದ ವ್ಯವಸ್ಥೆ ಮಾಡುವಂತೆ ಜಿಲ್ಲಾಧಿಕಾರಿಗಳು ಶ್ರೀಗಳಲ್ಲಿ ವಿನಂತಿಸಿದರು. ಇನ್ನೂ ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿದ ಶ್ರೀಗಳು ಈ ಬಾರಿಯೂ ಕನ್ನಡಾಭಿಮಾನಿಗಳಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗುವದು ಎಂದು ಅಧಿಕಾರಿಗಳಿಗೆ ಭರವಸೆ ನೀಡಿದರು.

ಕಳೆದ ಮೂರು ವರ್ಷಗಳಿಂದ ರಾಜ್ಯೋತ್ಸವ ಮೆರವಣಿಗೆಯಲ್ಲಿ ಅನ್ನ ದಾಸೋಹದ ವ್ಯವಸ್ಥೆ ಮಾಡುವಂತೆ ಈ ಬಾರಿಯೂ ಮಾಡಲಾಗುವದು ಅದ್ರಲ್ಲೂ ವಿಶೇಷವಾಗಿ ಈ ಬಾರಿ ಕನ್ನಡ ಅಭಿಮಾನಿಗಳೂ ಹೋಳಿಗೆ ಊಟ ಸವಿಯಲಿದ್ದಾರೆ. ಸದಾ ಕನ್ನಡ ನಾಡು ನುಡಿ ಸೇವೆಯಲ್ಲಿ ಮುಂದೆ ಇರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಹೋಳಿಗೆ ಊಟದ ದಾಸೋಹ ಈ ಬಾರಿಯೂ ಕನ್ನಡ ಅಭಿಮಾನಿಗಳಲ್ಲಿ ಹರ್ಷ ತರುವದರ ಜೊತೆಗೆ ಕನ್ನಡ ರಾಜ್ಯೋತ್ಸವಕ್ಕೆ ಮತ್ತಷ್ಟು ಮೆರಗು ತರಲಿದೆ.

Check Also

ಬೆಳಗಾವಿಗೆ ಹುಲಿ ಬಂದಿದ್ದು ನೂರಕ್ಕೆ ನೂರು ಸತ್ಯ….!!

ಬೆಳಗಾವಿ: ಕಳೆದ ತಿಂಗಳಷ್ಟೇ ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಹೆಣ್ಣು ಸಿಂಹವೊಂದು ಸೇರ್ಪಡೆಯಾಗಿತ್ತು. ಈಗ ಹೆಣ್ಣು ಹುಲಿಯೊಂದರ …

Leave a Reply

Your email address will not be published. Required fields are marked *