ಬೆಳಗಾವಿ- ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನಾಗಿ ಹೆಚ್ ಕೆ ಪಾಟೀಲರನ್ನು ನೇಮಕ ಮಾಡಿದ ಬಳಿಕ ಗಡಿನಾಡ ಕನ್ನಡಿಗರ ಸಂಬ್ರಮಕ್ಕೆ ಮಿತಿ ಇರಲಿಲ್ಲ ಮೂರು ವರ್ಷದ ಹಿಂದೆ ಬೆಳಗಾವಿಯಲ್ಲಿ ಸಭೆ ನಡೆಸಿ ಹೋದ ಸಚಿವ ಮಹಾಶಯಯರು ಮರಳಿ ಗಡಿನಾಡ ಗುಡಿಯ ದರ್ಶನ ಮಾಡಿದ ಉದಾಹರಣೆ ಇಲ್ಲ
ಗಡಿನಾಡ ಕನ್ನಡಿಗರು ಅನಾಥ ಪ್ರಜ್ಞೆ ಅನುಭವಿಸಬೇಡಿ ನಾನು ತಿಂಗಳಿಗೊಮ್ಮೆ ಬರ್ತೇನಿ..ಇಲ್ಲಿಯ ಕನ್ನಡಿಗರ ಸಮಸ್ಯೆ ಆಲಿಸುತ್ತೇನೆ ಬೆಳಗಾವಿಯಲ್ಲಿ ಗಡಿ ವಿವಾದಕ್ಕೆ ಸಮಂಧಿಸಿದಂತೆ ಪ್ರಾದೇಶಿಕ ಕಚೇರಿಯನ್ನು ಆರಂಭ ಮಾಡ್ತೀನಿ ಎಂದು ಹೇಳಿ ಹೋದವರು ಮರಳಿ ಬೆಳಗಾವಿಯ ಕಡೆಗೆ ತಿರುಗಿ ನೋಡಿಲ್ಲ
ಬೆಳಗಾವಿ ಗಡಿ ವಿವಾದ ಅತ್ಯಂತ ಸಂವೇದನಾ ಶೀಲವಾಗಿದ್ದು ಈ ವಿಷಯದಲ್ಲಿ ಯಾವುದೇ ಎಡವಡ್ಟು ಆಗಬಾರದು ಎಂದು ಮುಂದಾಲೋಚನೆ ಮಾಡಿ ಬೆಳಗಾವಿಯ ಕನ್ನಡದ ನಾಯಕರು ಕಾಡಿನೇಡಿ ಗಡಿ ಮೇಲುಸ್ತುವಾರಿ ಸಚಿವರೊಬ್ಬರನ್ನು ನೇಮಕ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು
ಹಿರಿಯ ಅನುಭವಿ ಮತ್ತು ಕನ್ನಡದ ಬಗ್ಗೆ ಅತೀವ ಕಾಳಜಿ ಇರುವ ಹೆಚ್ ಕೆ ಪಾಟೀಲರನ್ನೇ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಬೆಳಗಾವಿಯ ಹೋರಾಟಗಾರರಾದ ಅಶೋಕ ಚಂದರಗಿ,ಸಿದ್ದನಗೌಡ ಪಾಟೀಲ,ಮತ್ತು ರಾಘವೇಂದ್ರ ಜೋಶಿ ಸರ್ಕಾರಕ್ಕೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಸರ್ಕಾರ ಹೆಚ್ ಕೆ ಪಾಟೀಲರನ್ನೇ ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿದ್ದು ಇತಿಹಾಸ
ಸುಪ್ರೀಂ ಕೋರ್ಟ್ ನಲ್ಲಿ ಬೆಳಗಾವಿ ಗಡಿ ವಿವಾದಕ್ಕೆ ಸಮಂಧಿಸಿದಂತೆ ವಿಚಾರಣೆ ನಡೆಯುತ್ತಿದೆ ಇಂತಹ ಸಂದರ್ಭದಲ್ಲಿ ಗಡಿ ಉಸ್ಪಂದಿಸಲಿ ಎನ್ಸನುವದುಚಿವರು ಬೆಳಗಾವಿಗೆ ಬರಬೇಕೆಂದು ಅವರನ್ನು ನೇಮಕ ಮಾಡಿಸಿದ ಮಹಾಶಯಯರು ಒತ್ತಾಯಿಸಬೇಕಿತ್ತು ಆದರೆ ಈ ವಿಷಯದಲ್ಲಿ ಮೈ.ಭೀ ಚುಪ್..ತು.ಭೀ ಚುಪ್ ಎನ್ನುವಂತೆ ಗಡಿ ಉಸ್ತುವಾರಿ ಸಚಿವರು ನಾಪತ್ತೆಯಾದರೆ ಇಲ್ಲಿಯ ಕನ್ನಡದ ನಾಯಕರು ಈ ಬಗ್ಗೆ ಚಕಾರವೆತ್ತದೇ ಇರುವದು ದುರ್ದೈವ
ಈಗಲಾದರೂ ಗಡಿ ಉಸ್ತುವಾರಿ ಸಚಿವರ ಸವಾರಿ ಬೆಳಗಾವಿ ಕಡೆಗೆ ಬರಲಿ ಇಲ್ಲಿಯ ಸಮಸ್ಯೆ ಗಳಿಗೆ ಸ್ಪಂದಿಸಲಿ ಎನ್ನುವದು ನಮ್ಮ ಕಳಕಳಿ ಅಷ್ಟೆ