ಮಹಾ ಸಿಎಂ ಉದ್ಧವ ಠಾಕ್ರೆ ಅಲ್ಲ ,ಉಪಾದ್ಯಾಪಿ ಠಾಕ್ರೆ- ಹೊರಟ್ಟಿ ವ್ಯಂಗ್ಯ
ಬೆಳಗಾವಿ- ಗಡಿ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಯಾವ ಹೆಜ್ಜೆ ಇಡುತ್ತಿದೆತೋ ಕರ್ನಾಟಕ ಸರ್ಕಾರ ಮಹಾರಾಷ್ಟ್ರಕ್ಕಿಂತ ಒಂದು ಹೆಜ್ಜೆ ಮುಂದಿಡಬೇಕು ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಅಲ್ಲ ಅವರು ಉಪದ್ಯಾಪಿ ಠಾಕ್ರೆ ಎಂದು ಜೆಡಿಎಸ್ ಮುಖಂಡ ಮಾಜಿ ಮಂತ್ರಿ ಬಸವರಾಜ ಹೊರಟ್ಟಿ ವ್ಯಂಗ್ಯವಾಡಿದ್ದಾರೆ.
ಬೆಳಗಾವಿಯಲ್ಲಿ ಮಹಾದಾಯಿ ಹೋರಾಟದ ಕುರಿತು ಸಭೆ ನಡೆಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ಬಸವರಾಜ ಹೊರಟ್ಟಿ ಬೆಳಗಾವಿಯ ಸಂಸದರು ಸ್ವಾರ್ಥ ಲಾಭಕ್ಕಾಗಿ ಗಡಿ ವಿಚಾರದಲ್ಲಿ ಮಾರನಾಡುವದಿಲ್ಲ ಮಹಾದಾಯಿ ಇರಲಿ ಅಥವಾ ಗಡಿ ವಿಚಾರ ಇರಲಿ ಎಲ್ಲರೂ ರಾಜ್ಯದ ಹಿತ ಕಾಯಬೇಕು ಸರ್ಕಾರ ಬೇಕಾದ್ರೆ ಗಡಿ ವಿಚಾರದಲ್ಲಿ ಇಬ್ಬರೂ ಮಂತ್ರುಗಳನ್ನು ನೇಮಿಸಿ ಗಡಿ ರಕ್ಷಣೆಗೆ ಮುಂದಾಗಬೇಕು ಎಂದು ಹೊರಟ್ಟಿ ಹೇಳಿದರು.
ಮಹಾದಾಯಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ,ಟ್ರಿಬನಲ್ ತೀರ್ಪು ಗೆಜೆಟ್ ಆಗಬೇಕಿದೆ .ಗೋವಾ ರಾಜ್ಯಪಾಲರು ಸಂವಿಧಾನಿಕ ಹುದ್ದೆಯ ಅರಿವಿಲ್ಲದೇ ಮಹಾದಾಯಿ ಕುರಿತು ಮಾತನಾಡುತ್ತಿದ್ದಾರೆ ,ಇದು ಕೇಂದ್ರ ಸರ್ಕಾರಕ್ಕೆ ಹೊತ್ತಾಗಬೇಕು ,ಮಹಾದಾಯಿ ವಿಚಾರದಲ್ಲಿ ರಾಜಕಾರಣ ಸಾಕು ನಮಗೆ ನ್ಯಾಯ ಬೇಕು ಎಂದು ಹೊರಟ್ಟಿ ಒತ್ತಾಯಿಸಿದ್ರು
ಮಹಾದಾಯಿ ಕುರಿತು ರೈತ ಸಂಘಟನೆಗಳು ಒಂದಾಗಿವೆ,ಈ ವಿಚಾರದಲ್ಲಿ ಕನ್ನಡ ಸಂಘಟನೆಗಳೂ ಬೆಂಬಲ ನೀಡಿವೆ , ಮಹಾದಾಯಿ ಕುರಿತು ನಾಲ್ಕು ಜಿಲ್ಲೆ ಹದಿನಾಲ್ಕು ತಾಲ್ಲೂಕುಗಳಲ್ಲಿ ಸಭೆ ಮಾಡ್ತೀವಿ,ಹೋರಾಟದ ರೂಪ ರೇಷೆಗಳನ್ನು ನಿರ್ಧರಿಸುತ್ತೇವೆ ನಂತರ ರಾಜ್ಯದ ಮುಖ್ಯಮಂತ್ರಿಗಳನ್ನು ಭೇಟಿ ಆಗುತ್ತೇವೆ ಎಂದು ಹೊರಟ್ಟಿ ಹೇಳಿದರು
ನಾನು ಬಿಜೆಪಿ ಸೇರ್ತಿನಿ ಅಂತಾ ನಾಲ್ಕು ವರ್ಷದಿಂದ ಉಹಾಪೋಹ ಇದೆ ,ಯಡಿಯೂರಪ್ಪ ಅವರು ನನಗೆ ಬಿಜೆಪಿಗೆ ಬರುವಂತೆ ಎರಡು ಬಾರಿ ಅಹ್ವಾನ ನೀಡಿದ್ರು ಆದ್ರೆ ನಾನು ಎಲ್ಲಿಯೂ ಹೋಗೋದಿಲ್ಲ ಜೆಡಿಎಸ್ ಪಕ್ಷದಲ್ಲೇ ಇರ್ತಿನಿ ಅಂದ್ರು ಹೊರಟ್ಟಿ