ಬೆಳಗಾವಿ- ಪ್ರತಿವರ್ಷ ವಿಭಿನ್ನ ಶೈಲಿಯಲ್ಲಿ ದಸರಾ ಮಹೋತ್ಸವ ಆಚರಿಸಿ ಭಾವೈಕ್ಯತೆ ಸಾರುವ ಹುಕ್ಕೇರಿಯ ಹಿರೇಮಠ ಈ ಬಾರಿಯ ದಸರಾ ಮಹೋತ್ಸವವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಲು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಿದೆ ಹುಕ್ಕೇರಿಯ ಹಿರೇಮಠದಲ್ಲಿ ಸೆಪ್ಟೆಂಬರ 21 ರಿಂದ 30 ರವರೆಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಪಿಠಾರೋಹಣದ ರಜತ ಮಹೋತ್ಸವದ ಸಂಬ್ರಮ ದಸರಾ ಮಹೋತ್ಸವದಲ್ಲಿ ಕೂಡಿಕೊಂಡಿರುವದರಿಂದ ಈ ಬಾರಿಯ ದಸರಾ ಉತ್ಸವ ಮತ್ತಷ್ಟು ಅದ್ಧೂರಿಯಾಗಿ ನಡೆಯಲಿದೆ
ಸೆಪ್ಟೆಂಬರ 24 ರಂದು ಯೋಗ ಗುರು ರಾಮದೇವ ಬಾಬಾ ಅವರು ಹುಕ್ಕೇರಿಗೆ ಬರಲಿದ್ದು ಅವರಿಗೆ ಅಂದು ದಸರಾ ಮಹೋತ್ಸವದಲ್ಲಿ ರೇಣುಕ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವದು ಎಂದು ಹಿರೇಮಠದ ಶ್ರೀ ಚಂದ್ರ ಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು
ಉಚಿತ ಯೋಗ ಶಿಬಿರಗಳ ಮೂಲಕ ಭಾರತದಲ್ಲಿ ಅಷ್ಟೇ ಅಲ್ಲ ಇಡೀ ಜಗತ್ತಿನ ಗಮನ ಸೆಳೆದ ರಾಮದೇವ ಬಾಬಾ ಅವರಿಗೆ ಈ ಬಾರಿಯ ರೇಣುಕ ಶ್ರೀ ಪ್ರಶಸ್ತಿಯನ್ನು ನೀಡಲು ನಿರ್ಧರಿದಲಾಗಿದೆ ಎಂದು ಶ್ರೀಗಳು ಹೇಳಿದರು
29 ರಂದು ನಡೆಯುವ ಮಹಿಳಾ ಉತ್ಸವದಲ್ಲಿ ಸಾಲು ಮರದ ತಿಮ್ಮಕ್ಕ ಅವರಿಗೆ ಮಹಾ ಮಾತಾ ಪ್ರಶಸ್ತಿ ನೀಡಿ ಗೌರವಿಸಲಾಗುವದು
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರ ಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪಿಠಾರೋಹಣದ ರಜತ ಮಹೋತ್ಸವದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ 250 ಉಚಿತ ಯೋಗ ಶಿಬಿರಗಳನ್ನು ಆಯೋಜಿಸಲಾಗಿದ್ದು ಕೊನೆಯ ಶಿಬಿರ ಹುಕ್ಕೇರಿಯ ದಸರಾ ಮಹೋತ್ಸವದಲ್ಲಿ ನಡೆಯುತ್ತದೆ 24 ರಂದು ರೇಣುಕ ಶ್ರೀ ಪ್ರಶಸ್ತಿ ಸ್ವೀಕರಿಸಲು ಹುಕ್ಕೇರಿಗೆ ಬರುತ್ತಿರುವ ರಾಮದೇವ ಬಾಬಾ ಅವರು ಅಂದು ಸುಮಾರು ಎರಡು ಗಂಟೆಗಳ ಕಾಲ ಯೋಗದ ಮಹತ್ವ ತಿಳಿಸಲಿದ್ದಾರೆ
,21 ರಂದು ಉಜ್ಜೈನಿ ಜಗದ್ಗುರುಗಳ ಸಾನಿದ್ಯದಲ್ಲಿ ದಸರಾ ಉತ್ಸವ ಉದ್ಘಾಟನೆ ಗೊಳ್ಳಲಿದೆ ,23 ರಂದು ಮಹರ್ಷಿ ಆನಂದ ಗುರೂಜಿ ಅವರ ನೇತ್ರತ್ವದಲ್ಲಿ ರಾಜ್ಯ ಪುರುವಂತರ ಸಮಾವೇಶ ನಡೆಯಲಿದೆ 22 ರಂದು ಭಾವೈಕ್ಯ ದಸರಾ ನಗೆ ಹಬ್ಬ,ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ
27 ರಂದು ಬೆಳಿಗ್ಗೆ 11-30 ಕ್ಕೆ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಮಹಾಸ್ವಾಮಿಗಳು ವಿಶೇಷ ಅದ್ಯಾತ್ಮಿಕ ಪ್ರವಚನ ನಡೆಯಲಿದೆ
30 ರಂದು ಶ್ರೀಶೈಲ ಜಗದ್ಗುರುಗಳಿಂದ ಹುಕ್ಕೇರಿ ಹಿರೇಮಠದ ಚಂದ್ರ ಶೇಖರ ಶಿವಾಚಾರ್ಯ ಮಹಾ ಸ್ವಾಮಿಗಳಿಗೆ ಆಶಿರ್ವಾದ ನೀಡುವ ವಿಶೇಷ ಕಾರ್ಯಕ್ರಮ ನಡೆಯಲಿದೆ ಅಂದು ನಾಲ್ಕು ಘಂಟೆಗೆ ಶ್ರೀಗಳ ಅಡ್ಡ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ