Breaking News

ಬೆಳಗಾವಿಯ ಹುಕ್ಕೇರಿ ಹಿರೇಮಠಕ್ಕೆ ಕಾಶಿ ಜಗದ್ಗುರುಗಳ ಭೇಟಿ

ಬೆಳಗಾವಿ

ಎರಡು ಸಾವಿರದ ಮಕ್ಕಳು ವೇಧವನ್ನು ಕಲಿಯುವುದರೊಂದಿಗೆ ಐದನೂರು ಜನ ಹೆಣ್ಣು ಮಕ್ಕಳು ವೇಧವನ್ನು ಕಲಿಯುವದರ ಮೂಲಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಗುರುಕುಲ ಕ್ರಾಂತಿಯನ್ನೆ ಮಾಡಿದೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಬಗವತ್ಪಾದರು ಹೇಳಿದರು.
ಅವರು ಗುರುವಾರ ನಗರದ ಲಕ್ಷ್ಮೀಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಇಷ್ಟ ಲಿಂಗ ಪೂಜೆ ಸಾಮೂಹಿಕ ರುದ್ರಪಠಣ ಮಹಿಳೆಯರಿಂದ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಗಡಿ ಭಾಗದಲ್ಲಿ ಸಾಹಿತ್ಯ, ಸಂಸ್ಕೃತಿ, ಪರಿಸರ ಸೇರಿದಂತೆ ಸಮಾಜದ ಸುಧಾರಣೆಯ ಕಾಳಜನಿಯನ್ನು ಅವರಿಂದ ನೋಡಬಹುದು. ಅದರಲ್ಲಿಯೂ ವೇಧವನ್ನು ಮಹಿಳೆಯರಿಗೆ ಕಲಿಸುವುದರ ಮುಖಾಂತರ ಅದ್ಬುತ ಕ್ರಾಂತಿ ಮಾಡಿದ್ದಾರೆ ಎಂದರು.
ಮನೆಯೇ ಮೊದಲು ಪಾಠಶಾಲೆ, ಜನನಿತಾನೇ ಮೊದಲು ಗುರು ಎನ್ನುವಹಾಗೆ ತಾಯಂದಿರು ಸಂಸ್ಕಾರವನ್ನು ಹೊಂದಿದೆ ಆದರೆ ಇಡೀ ಮನೆ ಸಂಸ್ಕಾರವುತವಾಗಿರಲು ಸಾಧ್ಯವಾಗುತ್ತದೆ. ಆ ಒಂದು ಜವಾಬ್ದಾರಿಯ ವಿಚಾರ ಅರಿತು ಶ್ರೀಗಳು ಮಹಿಳೆಯರಿಗೆ ರುದ್ರ ಪಾರಾಯಣವನ್ನು ಕಲಿಸಿರುವುದು ಅಭಿಮಾನದ ಸಂಗತಿ ಎಂದರು.
ಬೆಳಗಾವಿ ನಗರದಲ್ಲಿ ಧಾರವಾಡದ ವೇಧ ಮಾತೆ ಶ್ರೀಮತಿ ಕವಿತಾ ಹಿರೇಮಠ ಅವರ ಮೂಲಕ ವೇಧ ತರಬೇತಿ ಆರಂಭಿಸಿರುವುದು ಸಂತೋಷದ ಸಂಗತಿ. ಇಂದು ನೂರಾರು ಜನ ವೇಧವನ್ನು ಪಠಿಸಿದ್ದನ್ನು ಕಂಡು ಆನಂದವಾಗಿದೆ ಎಂದು ಹೇಳಿದರು.
ಬೆಳಗಾವಿ ನಗರದಲ್ಲಿ ಸುವರ್ಣ ವಿಧಾನಸೌಧದ ಕನಸನ್ನು ಕಟ್ಟಿಕೊಂಡವರು ಸಿಎಂ ಕುಮಾರಸ್ವಾಮಿ ಅವರು ಅದು ನೆರವೆರಿದೆ. ಆದರೆ ಎಲ್ಲೋ ಒಂದು ಕಡೆ ಕೂಡಲೇ ನಿರ್ಧಾರ ತೆಗೆದುಕೊಳ್ಳುವ ಮುಖಾಂತರ ವಿಟಿಯು ವಿಭಜನೆಗೆ ಮುಂದಾಗಿರುವುದು ಅಪಾಯದ ಬೆಳವಣಿಗೆ. ಉತ್ತರ ಕರ್ನಾಟಕದ ಜನರಿಗೆ ನ್ಯಾಯ ವದಗಿಸಬೇಕಾಗಿತ್ತು ಎಂದರೆ ತಾಳ್ಮೆಯಿಂದ ಈ ಭಾಗದ ಜನರ ಸಮಸ್ಯೆ ಅರಿತು ಮುಂದುವರೆಯುವುದು ತುಂಬಾ ಯೋಗ್ಯ ಎಂದು ಸಲಹೆ ನೀಡಿದರು.
ಹುಕ್ಕೇರಿ ಹಿರೇಮಠದ ಶ್ರೀ‌ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾರತ ದೇಶದ ಸಂಸ್ಕಾರವನ್ನು ಹೊರ‌ ದೇಶದವರು ಪ್ರೀತಿಸುತ್ತಿದ್ದಾರೆ. ನಮ್ಮ ಸಂಸ್ಕಾರವನ್ನು ನಾವು ಬಿಟ್ಟ ಮರುಕ್ಷಣವೇ ನಮ್ಮ ದೇಶಕ್ಕೆ ಅನಾಹುತ. ಅದಕ್ಕಾಗಿ ನಮ್ಮ ಸಂಸ್ಕಾರ ಎತ್ತಿ ಹಿಡಿಯುವ ಕಾರ್ಯವನ್ನು ಎಲ್ಲರೂ ಮಾಡಬೇಕಾಗಿದೆ ಎಂದರು.
ಬೆಳಗಾವಿ,ಧಾರವಾಡ, ಗದಗನಿಂದ ಬಂದ ಭಕ್ತರು ಸಾಮೂಹಿಕವಾಗಿ ಲಿಂಗಪೂಜೆಯಲ್ಲಿ ಪಾಲ್ಗೊಂಡರು.
ನೂರಾರು ಜನ ಹೆಣ್ಣು ಮಕ್ಕಳು ವೇಧವನ್ನು ಪಠಿಸುವ ಮೂಲಕ ಗುರುಗಳ ಸಾಮೂಹಿಕ ಲಿಂಗಪೂಜೆಯಲ್ಲಿ ಭಾಗಿಯಾಗಿದ್ದರು.
ಯೋಗ ಗುರು ಬ್ರಹ್ಮಾನಂದ ಸ್ವಾಮೀಜಿ, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಮೇಕನಮರಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *