ಬೆಳಗಾವಿ-ಬೆಳಗಾವಿಯಲ್ಲಿ ಮಾವು ಸಂತೆ ಮುಗಿದ ಬೆನ್ನಲ್ಲಿಯೇ ಈಗ ಸಸ್ಯ ಸಂತೆ ಆರಂಭವಾಗಿದೆ ಕ್ಲಬ್ ರಸ್ತೆಯಲ್ಲಿರುವ ತೋಟಗಾರಿಕೆ ಇಲಾಖೆಯ ಹ್ಯುಂ ಪಾರ್ಕಿನಲ್ಲಿ ಸಸ್ಯ ಸಂತೆ ಎಲ್ಲರನ್ನು ಕೈಬೀಸಿ ಕರೆಯುತ್ತಿದೆ
ಬೆಳಗಾವಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸುಕ್ತವಾದ ವಾತಾವರಣ ಹೊಂದಿರುವುದನ್ನು ಇಲಾಖೆ ಗಮನದಲ್ಲಿಟ್ಟುಕೊಂಡು ಜಿಲ್ಲೆಯಲ್ಲಿ ಪ್ರಮುಖವಾಗಿ ಬೆಳೆಯುವ ಮಾವು, ಚಿಕ್ಕು, ದ್ರಾಕ್ಷಿ, ನಿಂಬೆ, ಕರಿಬೇವು, ನೇರಳೆ, ಗೇರು, ತರಕಾರಿ, ಹೂವಯ/ಅಲಂಕಾರಿಕ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಆದರೆÀ ಔಷಧಿ ಸಸ್ಯಗಳನ್ನು ರೈತರು ಬೆಳೆಯುವಂತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಸ್ಯ ಜಾತ್ರೆಯಲ್ಲಿ ರೈತರಿಗೆ ಮಾಹಿತಿ ವಿನಮಯವಾಗಲಿದೆ.
ಬೆಳಗಾವಿಯ ಅದರಲ್ಲೂ ಹನುಮಾನ ನಗರ, ತಿಳಕವಾಡಿ, ಸದಾಶಿವ ನಗರ, ಮಹಾಂತೇಶ ನಗರ ಪ್ರದೇಶಗಳಲ್ಲಿನ ಅತೀ ಹೆಚ್ಚು ನಿವಾಸಿಗಳು ತಮ್ಮ ಕೈ ತೋಟಗಳನ್ನು ನಿರ್ಮಿಸಿ ಅಲಂಕಾರಿಕ ಮಾಡಿರುವುದು ಅಲ್ಲಲ್ಲಿ ಕಾಣಿಸಿಗುತ್ತವೆ. ಈಗಾಗಲೇ ಆ ಹಳೆಯ ಗಿಡ, ಹುಲ್ಲು, ಬಳ್ಳಿ, ಕಂಟಿಗಳನ್ನು ಕತ್ತರಿಸಿ ಹೊಸ ಸಸಿಗಳ ಆಗಮನವನ್ನು ಎದುರು ನೋಡುತ್ತಿರುವಾಗ ತೋಟಗಾರಿಕೆ ಇಲಾಖೆಯ ವತಿಯಿಂದ ಸಸ್ಯೆ ಸಂತೆಯನ್ನು ಆಯೋಜಿಸಿದೆ.
ನಗರದಲ್ಲಿ ಆಯೋಜನೆಗೊಂಡಿರುವ ಸಸ್ಯ ಸಂತೆಯಲ್ಲಿ ಅಲಂಕಾರಿಕ ಸಸಿಗಳು ಮಾತ್ರವಲ್ಲದೆ, ರೈತರಿಗೆ ಆದಾಯದಾಯಕವಾಗಿರುವ ಹಣ್ಣು ಹಾಗೂ ತರಕಾರಿ ಸಸಿಗಳು ಸಹ ದೊರೆಯಲ್ಲಿವೆ. ಸಸ್ಯ ಜಾತ್ರೆಯಲ್ಲಿ ಸಸಿಗಳ ಮಾರಾಟದೊಂದಿಗೆ ತೋಟಗಾರಿಕೆ ಇಲಾಖೆ ವತಿಯಿಂದ ತಯಾರಿಸಲಾದ ವಿವಿಧ ಜೈವಿಕ ಗೊಬ್ಬರಗಳು ಸಹ ಇಲ್ಲಿ ದೊರೆಯಲಿವೆ. ಇದರೊಂದಿಗೆ ಸಸ್ಯ ಪ್ರೇಮಿಗಳಿಗೆ ಸಸಿಗಳ ಫಾಲನೆ, ಪೋಷಣೆಗಳ ಬಗ್ಗೆ ಉಚಿತ ಮಾಹಿತಿ ಸಹ ನೀಡಲು ತೋಟಗಾರಿಕಾ ಇಲಾಖೆ ಮುಂದಾಗಿದೆ.
20 ದಿನಗಳ ಕಾಲ ನಗರದ ನಡೆಯಲಿದೆ ವಿವಿಧ ಬಗೆಯ ಸಸಿಗಳು ಖಾಸಗಿ ನರ್ಸರಿಗಳಿಗಿಂತ ಸಸ್ಯ ಜಾತ್ರೆಯಲ್ಲಿ ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲ್ಲಿವೆ. ಮುಂಗಾರು ಮಳೆಯ ಆರಂಭಕ್ಕೂ ಹಾಗೂ ನಗರದಲ್ಲಿ ಸಸ್ಯ ಸಂತೆ ಪ್ರಾರಂಭಕ್ಕೂ ಹೊಂದಾಣಿಕೆಯಾದಂತಿದೆ.
ವಿವಿಧ ಬಗೆಯ ಸಸಿಗಳು
ಅಪೂಸ, ಕೇಸರ-ಮಾವು, ಕ್ರಿಕೆಟ್ ಬಾಲ್, ಕಾಲಿಪತ್ತಿ-ಸಪೋಟ ಕಸಿ, ದೂಪದಾಳ ಸೆಲೆಕ್ಷನ್-ನೆರಳೆ, ಎಲ್-49, ಲಲಿತ್-ಪೇರಲ, ಬಾಲನಗರ-ಸೀತಾಫಲ, ಟಿಎಕ್ಸ್‍ಡಿ, ಅರಸೀಕೆರೆ-ತೆಂಗು, ಸ್ಥಳೀಯ ಲಿಂಬೆ, ಬಳ್ಳಾರಿ ರೆಡ್-ಅಂಜೂರ, ಸ್ಥಳೀಯ ಕರಿಬೇವು, ಕೃಷ್ಣಾ-ಬೆಟ್ಟದ ನೆಲ್ಲಿ, ಪಿಕೆಎಂ-1-ಹುಣಸೆ, ವೆಂಗೂರ್ಲಾ-ಗೋಡಂಬಿ ಸೇರಿದಂತೆ ವಿವಿಧ ಸಸಿಗಳು ಸಸ್ಯ ಜಾತ್ರೆಯಲ್ಲಿ ಮಾರಾಟಕ್ಕಿವೆ.