Breaking News

ಉತ್ತರ ವಲಯದಲ್ಲಿ ಕಾನೂನು ಸುವ್ಯವಸ್ಥೆಯ ಗಂಭೀರ ಘಟನೆಗಳು ನಡೆದಿಲ್ಲ : ಐಜಿಪಿ ರಾಮಚಂದ್ರರಾವ್ ಸ್ಪಷ್ಟಣೆ

ಬೆಳಗಾವಿ- ಉತ್ತರ ವಲಯದ. ಬೆಳಗಾವಿ, ವಿಜಯಪುರ, ಬಾಗಲಕೋಟ, ಧಾರವಾಡ ಹಾಗೂ ಗದಗ ಐದು ಜಿಲ್ಲೆಗಳನ್ನು ಒಳಗೊಂಡ ಉತ್ತರ ವಲಯದಲ್ಲಿ ಇತ್ತೀಚೆಗೆ ಮಹಾದಾಯಿ‌ ಹೋರಾಟಕ್ಕೆ ಸಂಬಂಧಿಸಿದಂತೆ ನವಲಗುಂದ ಘಟನೆಯನ್ನು ಹೊರತುಪಡಿಸಿ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಗಂಭೀರ ಸ್ವರೂಪದ ಯಾವುದೇ ಘಟನೆಗಳು ಸಂಭವಿಸಿಲ್ಲ ಎಂದು ಉತ್ತರ ವಲಯ ಐಜಿಪಿ ರಾಮಚಂದ್ರರಾವ್ ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ವಲಯದಲ್ಲಿ ರೌಡಿಗಳ ಮೇಲೆ ಮುಂಜಾಗೃತಾ ಕ್ರಮದಡಿ ೨೦೧೬ರಲ್ಲಿ ೧ ಸಾವಿರದ ೭೯೭, ೨೦೧೭ರಲ್ಲಿ ೨ ಸಾವಿರದ ೨೯೭ ಪ್ರಕರಣಗಳು ದಾಖಲಾಗಿದ್ದು, ೨೦೧೬ನೇ ಸಾಲಿನಲ್ಲಿ ರೌಡಿಗಳ ಗಡಿಪಾರು ಆದೇಶಗಳಾಗಿವೆ. ೨೦೧೭ರಲ್ಲಿ ೧೭ ಗಡಿಪಾರು ಆದೇಶಗಳಾಗಿವೆ. ಟಿಪ್ಪು ಜಯಂತಿ ಸಂದರ್ಭದಲ್ಲಿ ಶಾಂತಿ ಕದಡದಂತೆ ಯೋಗ್ಯ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗಳ ಸಹಯೋಗದಲ್ಲಿ ಕಪ್ಪುಚುಕ್ಕೆ ಅಥವಾ Black Spot’s ಎಂದು ಗುರುತಿಸಲಾದ ಸ್ಥಳಗಳನ್ನು ಸರಿಪಡೆಸಲು ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗುವುದು. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಪದೇ ಪದೇ ಸಂಭವಿಸುವ ಅಪಘಾತ ಸ್ಥಳಗಳನ್ನು ಗುರುತಿಸಿ ಅಗತ್ಯವಿರುವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರ.

ವಾರಸುದಾರರಿಲ್ಲದ ಹಾಗೂ ಅಪರಾಧ ಪ್ರಕರಣಗಳಲ್ಲಿ ಜಪ್ತಮಾಡಿಕೊಂಡ ವಾಹನ ಹಾಗೂ ಇತರೆ ಮುದ್ದೇಮಾಲುಗಳ ವಿಲೇವಾರಿಯಲ್ಲಿ ಇಲ್ಲಿಯವರೆಗೆ ೮೨೯ ಪ್ರಕರಣಗಳಲ್ಲಿ ೧೫೦೭ ಜಪ್ತಮಾಡಿಕೊಂಡ ಮುದ್ದೇಮಾಲುಗಳ ಪೈಕಿ ೨೩ ಪ್ರಕರಣಗಳಲ್ಲಿ ೪೧೪ ವಿಲೇವಾರಿ ಮಾಡುವಲ್ಲಿ ಯಶಸ್ಸು ಸಾಧಿಸಲಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ.

ಮಧ್ಯಪ್ರದೇಶದಿಂದ ವಿಜಯಪುರಕ್ಕೆ ಪಿಸ್ತೂಲ್ ಗಳ ಸರಬುಜಾರು ಆಗುತ್ತಿದ್ದ ಮಾಹಿತಿ ಹಿನ್ನಲೆಯಲ್ಲಿ ಕಳೆದ ವರ್ಷ ೩೦ ಪಿಸ್ತೂಲ್ ಗಳನ್ನು ಜಪ್ತ ಮಾಡಲಾಗಿದೆ. ಪ್ರಸಕ್ತ ವರ್ಷ ೪೬ ಪಿಸ್ತೂಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೆಲವರನ್ನು ಬಂಧಿಸಲಾಗಿದ್ದು, ಮುಖ್ಯ ಆರೋಪಿ ಇನ್ನೂ ಪತ್ತೆ ಆಗಿಲ್ಲ. ಆತನ ಹುಡುಕಾಟ ನಡೆದಿದೆ ಎಂದು ಐಜಿಪಿ ರಾಮಚಂದ್ರರಾವ್ ಹೇಳಿದ್ದಾರೆ.

ನ್ಯಾಯಾಲಯದಿಂದ ಜಾಮೀನು ಪಡರದುಕೊಂಡು ಕಲಕೆದ ಎರಡು ವರ್ಷಗಳ ಕಾಲಾವಧಿಯಲ್ಲಿ ತಲೆಮರೆಸಿಕೊಂಡವ ೧೨೭೬ ಪ್ರಕರಣಗಳಲ್ಲಿ ಈ ವರ್ಷ ೪೮ ಪ್ರಕರಣಗಳ ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಅವರು ಹೇಳುದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *