ತಾಲೂಕಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ವರ್ಗಾವಣೆಗೊಂಡು ಬೇರೆಯವರು ಅಧಿಕಾರ ವಹಿಸಿಕೊಳ್ಳುತ್ತಿದಂತೆ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ಗರಿ ಗೆದರಿದೆ.! ಅವ್ಯಾಹತವಾಗಿ ಮರಳು ಸಾಗಾಣಿಕೆ ಎಗ್ಗಿಲ್ಲದೇ ಸಾಗುತ್ತಿದೆ. ಅಕ್ರಮ ಮರಳು ದಂಧೆಗಾರರು ಸರಕಾರದ ನಕಲಿ ಪಾಸಗಳನ್ನು ಇಟ್ಟುಕೊಂಡು ಮರಳು ದಂಧೆಯನ್ನು ಮಾಡುವ ಮೂಲಕ ಸರಕಾರಕ್ಕೆ ಮೋಸ ಎಸುತ್ತಿದ್ದಾರೆ. ಈ ದಂಧೆಯಲ್ಲಿ ರಾಜಕೀಯ ಮುಖಂಡರು ಭಾಗಿಯಾಗಿರುವದರಿಂದ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ.
ಬುಧವಾರ ಸಂಜೆ ಪಟ್ಟಣದ ಹೊರ ವಲಯದ ಅಬ್ಬಿಹಾಳ ರಸ್ತೆಯಲ್ಲಿ ನಕಲಿ ಪಾಸ ಇಟ್ಟುಕೊಂಡು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ (ಎಂಎಚ್ 10 ಝಡ್ 4441)ಯಿಂದ ನಂಬರ ಪ್ಲೇಟ್ ಇಲ್ಲದ ಟ್ರ್ಯಾಕ್ಟರದಲ್ಲಿ ತುಂಬಿಕೊಳ್ಳುತ್ತಿದ್ದಾಗ ಸಾರ್ವಜನಿಕರೇ ಹಿಡಿದು ತಾಲೂಕಾ ತಹಶೀಲ್ದಾರ ಅವರಿಗೆ ಒಪ್ಪಿಸಿದ ಘಟನೆ ಜರುಗಿದೆ.
ಪಾಸ ಬೇರೆ, ಲಾರಿ ಬೇರೆ:
ತಹಶೀಲ್ದಾರ ಕಚೇರಿಯ ಅಧಿಕಾರಿಗಳು ವಶಪಡಿಸಿಕೊಂಡ ಲಾರಿ ಸಂಖ್ಯೆ ಮತ್ತು ಪಾಸ ಸಂಖ್ಯೆ ಬೇರೆ ಬೇರೆಯಾಗಿತ್ತು. ಮಹಾರಾಷ್ಟ್ರ ಸರಕಾರದ ಪಾಸ ಇದ್ದರೆ, ಅದರಲ್ಲಿ ಕರ್ನಾಟಕ ಸರಕಾರದ ಇಂಡಿ ತನಿಖಾ ಠಾಣೆಯ ಮುದ್ರೆ ಮಾತ್ರ ಕಂಡು ಬರುತ್ತದೆ. ಲಾರಿಯಲ್ಲಿ 6 ಬ್ರಾಸ ಮರಳು ತುಂಬಿದ್ದರೆ, ಪಾಸದಲ್ಲಿ ಕೇವಲ ಒಂದು ಬ್ರಾಸ ನಮೂದಿಸಲಾಗಿದೆ. ಪಾಸದಲ್ಲಿ ವಾಹನ ನಂಬರ ಕೆಎ 25 ಬಿ 9164 ಇದ್ದರೆ ಮರಳು ಸಾಗಿಸುವ ಲಾರಿ ಸಂಖ್ಯೆ ಎಂಎಚ್-10 ಝಡ್ 4441 ಇದೆ. ಪಾಸ ಅನುಮತಿ ಪ್ರಕಾರ ಕಳೆದ ಅ.1 ರಂದು ಬೆಳಗ್ಗೆ 9.30ಕ್ಕೆ ತುಂಬಿದ ಲಾರಿಯಲ್ಲಿ ಮರಳನ್ನು ಚಿಕ್ಕೋಡಿ ತಾಲೂಕಿನ ನಿಪ್ಪಾಣಿಗೆ ಸಾಗಿಸಬೇಕಾಗಿತ್ತು. ಆದರೆ ಬುಧವಾರ ದಿ.3ರ ಸಂಜೆ ಬೇರೆ ಅಥಣಿ ಪಟ್ಟಣದ ಹೊರವಲಯದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾಗ ಸಾರ್ವಜನಿಕರ ಕಣ್ಣಿಗೆ ಬಿದ್ದು ತಾಲೂಕಾ ದಂಡಾಧಿಕಾರಿಗಳ ವಶವಾಯಿತು. ತಹಶಿಲ್ದಾರ ಡಿ.ಜಿ ಮಹಾಂತ, ಅಥಣಿ ಕಂದಾಯ ನಿರೀಕ್ಷಕ ನಿಡೋಣಿ, ಗ್ರಾಮ ಲೆಕ್ಕಾದಿಕಾರಿ ಎಂ.ಎಂ.ಮಿರ್ಜಿ ವಾಹನವನ್ನು ವಶಪಡೆದು ತನಿಖೆ ನಡೆಸಿದ್ದಾರೆ.
ಇಂತಹ ನೂರಾರು ಲಾರಿಗಳು ಅಕ್ರಮವಾಗಿ ಮರಳು ದಂಧೆಯಲ್ಲಿ ತೊಡಗಿದ್ದು, ತೆರೆಮರೆಯಲ್ಲಿ ಅನೇಕ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಹಿರಿಯ ಅಧಿಕಾರಿಗಳು ಕೂಡಾ ಜಾಣ ಕುರುಡರಾಗಿದ್ದಾರೆ. ಇದಕ್ಕೆ ಇತ್ತಿಚೀಗೆ ಬೆಳಗಾವಿ ಜಿಲ್ಲೆಯಲ್ಲಿ ನಡೆದ ಘಟನೆಗಳೇ ಸಾಕ್ಷಿ.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …