ಬೆಳಗಾವಿಯ ಮರಾಠಾ ರೆಜಮೆಂಟ್ ಇಡೀ ದೇಶದಲ್ಲಿಯೇ ಪ್ರಸಿದ್ಧಿ ಇಲ್ಲಿರುವ ಕಮಾಂಡೋ ಟ್ರೇನಿಂಗ್ ಸೆಂಟರ್ ಜಾಗತಿಕ ಪ್ರಸಿದ್ಧಿ ಪಡೆದಿದೆ ಭಾರತದ ಜೊತೆ ಜಂಟೆ ಸಮರಾಭ್ಯಾಸ ನಡೆಸಲು ಮಾಲ್ಡೀವ್ಸ ಸೈನಿಕರು ಬೆಳಗಾವಿಯ ಮರಾಠಾ ರೆಜಮೆಂಟ್ ಸೆಂಟರ್ ಗೆ ಬಂದಿಳಿದಿದ್ದಾರೆ
ಅತ್ಯುತ್ತಮ ಸೈನಿಕ ತರಬೇತಿಗಳಲ್ಲಿ ಒಂದಾಗಿರುವ ಮರಾಠಾ ರೆಜಮೆಂಟ್ ಕೇಂದ್ರದಲ್ಲಿ ಕಮಾಂಡೋ ಟ್ರೈನಿಂಗ್ ಸೇರಿದಂತೆ ದೇಶದ ಗಡಿ ಕಾಯುವ ಯೋಧರಿಗೆ ತರಬೇತಿ ಕೊಡಲಾಗುತ್ತದೆ
ಇದೇ ಟ್ರೈನಿಂಗ್ ಸೆಂಟರ್ ನಲ್ಲಿ ಇಂದಿನಿಂದ 14ದಿನಗಳ ಕಾಲ ಭಾರತ ಮತ್ತು ಮಾಲ್ಡೀವ್ಸ್ ದೇಶಗಳ ಜಂಟಿ ಸಮರಭ್ಯಾಸ ನಡೆಸಲಿವೆ ಇಂದು ಇಳಿ ಸಂಜೆಯಲ್ಲಿ ಕೈ ಕುಲಕಿ ಸಮರಾಭ್ಯಾಸಕ್ಕೆ ಚಾಲನೆ ನೀಡಿದ ಮಾಲ್ಡೀವ್ಸ ದೇಶದ ಸೈನಿಕರು ಮತ್ತು ಭಾರತದ ಸೈನಿಕರು ತಮ್ಮಲ್ಲಿರುವ ಶೌರ್ಯ ಮತ್ತು ಸಹಾಸದ ಕಲೆಗಳನ್ನು ಪ್ರದರ್ಶಿಸಿ ಎಲ್ಲರ ಮೈಮನ ರೋಮಾಂಚನ ಗೊಳಿಸಿದರು
ಉಭಯ ದೇಶಗಳ ಸೈನಿಕರುಟ್ಯೂಬ್ ಲೈಟ್ ಬಲ್ಪಗಳನ್ನು ಮೈ ಹೊಡೆದುಕೊಂಡು , ತಲ್ವಾರನಿಂದ ರೋಚಕ ಪ್ರದರ್ಶನ ಸೇರಿದಂತೆ ಹಲವಾರು ಬಗೆಯ ಸಹಾಸ ಪ್ರದರ್ಶನ ಮಾಡಿ ಎಲ್ಲರ ಗಮನ ಸೆಳೆದರು
ಬೆಳಗಾವಿಯ ಮರಾಠಾ ರೆಜ್ ಮೆಂಟ್ ನ ಶಿವಾಜಿ ಮೈದಾನದಲ್ಲಿ ನಡೆದ ರೋಚಕ ಪ್ರಾತ್ಯಕ್ಷಿಕೆ ಉಭಯ ದೇಶಗಳ ಸಹಾಸದ ಕಲೆಗೆ ಸಾಕ್ಷಿಯಾಯಿತು
ಇಂದಿನಿಂದ 14 ದಿನಗಳ ಕಾಲ ಇಂಡೋ- ಮಾಲ್ಡೀವ್ಸ್ ದೇಶದ ಸಮರಭ್ಯಾಸ ನಡೆಯಲಿದೆ. ಇದಕ್ಕಾಗಿ ಮಾಲ್ಡೀವ್ಸ್ ದೇಶದ 90 ಸೈನಿಕರು ಬೆಳಗಾವಿಗೆ ಆಗಮಿಸಿದ್ದಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ರೀಗೆಡಿಯರ್, ಗೋವಿಂದ ಕವಲಾಡ್, ಭಯೋತ್ಪಾದನೆ ಜಾಗತ್ತಿಕ ಸಮಸ್ಯೆಯಾಗಿದ್ದು, ಭಯೋತ್ಪದಾನ ಚಟುವಟಿಕೆಯನ್ನು ನಿಯಂತ್ರಿಸಲು ಎರಡು ದೇಶಗಳ ನಡುವೆ ಸಾಮರ್ಥ್ಯ ಮತ್ತು ಕಲೆಯ ವಿನಿಮಯಕ್ಕೆ ಈ ಜಂಟಿ ಸಮರಭ್ಯಾಸ ಆಯೋಜನೆ ಮಾಡಲಾಗಿದೆ. ಇದರಿಂದ ಎರಡು ದೇಶಗಳಿಗೆ ಉಪಯೋಗ ಆಗಲಿದೆ ಎಂದರು.
ನಂತರ ಪೈಪ್ ಬ್ಯಾಂಡ್, ಬೆಂಗಾಲ್ ಇಂಜನಿಯರಿಂಗ್ ಗ್ರೂಪ್ ಕರ್ಕಿ ನಡೆಸಿದ ಮಾರ್ಷಲ್ ಆರ್ಟ್ ಆಕರ್ಷಕವಾಗಿತ್ತು. ಸೈನಿಕರು ತಲ್ವಾರ ಕಲೆ, ಟ್ಯೂಬ್ ಲೈಟ್ ಹೊಡೆಯುವುದು, ಮುಳಿನ ಹಾಸಿನ ಮೇಲೆ ಮಲಗೋ, ಇಟ್ಟಿಂಗಿ ಹೋಡೆಯುವ ರೋಚಕ ಪ್ರಾತ್ಯಕ್ಷಿತೆಯನ್ನು ಪ್ರದರ್ಶಿಸಿದ್ರು.
ಮಾಲ್ಡೀವ್ಸ ದೇಶದ ಮೊಹಮ್ಮದ್ ಶಿನಾನ್, ಮಾಲ್ಡೀವ್ಸ್ ಕ್ಯಾಪ್ಟನ್
ಭಯೋತ್ಪಾದಕ ವಿರುದ್ಧ ಹೋರಾಟಕ್ಕೆ ಎರಡು ದೇಶಗಳು ಮುಂದಾಗಿದ್ದು, ಇದರ ಭಾಗವಾಗಿ ಈ ಸಮರಭ್ಯಾಸ ನಡೆಯಲಿದೆ. ಈಗಾಗಲೇ ದೇಶದಲ್ಲಿ ಅತ್ಯಾದುನಿಕ ಕಮಾಂಡೋ ಟ್ರೈನಿಂಗ್ ಹೊಂದಿರುವ ಬೆಳಗಾವಿ ಈ ಜಂಟಿ ಸಮರಭ್ಯಾಸ ನಡೆಯುತ್ತಿರೋದು ಹೆಮ್ಮೆಯ ಸಂಗತಿಯಾಗಿದೆ.