Breaking News

ಕೇಂದ್ರ-ರಾಜ್ಯದ ನಡುವಿನ ಕೊಂಡಿ,ಆಗ್ತಾರಂತೆ ಕಡಾಡಿ

ಬೆಳಗಾವಿ-ರಾಜ್ಯಸಭಾ ಸದಸ್ಯರಾಗಿ ಏಕಾಏಕಿ ಜಾಕ್ ಫಾಟ್ ಹೊಡೆದ ಬಿಜೆಪಿಯ ಕ್ರಿಯಾಶೀಲ ಮುಖಂಡ ಈರಣ್ಣಾ ಕಡಾಡಿ ಅವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಬಳಿಕ ಪ್ರಥಮವಾಗಿ ಬೆಳಗಾವಿಗೆ ಆಗಮಿಸಿದರು.

ಬೆಳಗಾವಿ ಜಿಲ್ಲೆಯ ನೂರಾರು ಕಾರ್ಯಕರ್ತರು ಈರಣ್ಣಾ ಕಡಾಡಿ ಅವರನ್ನು ಸುವರ್ಣ ವಿಧಾನಸೌಧದ ಬಳಿ ತಡೆದು ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಬೆಳಗಾವಿಗೆ ಬರಮಾಡಿಕೊಂಡರು.

ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಬೆಳಗಾವಿಯಲ್ಲಿರುವ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆಗೆ ಮಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ಸಾಮಾನ್ಯ ಕಾರ್ಯಕರ್ತ ರಾಜ್ಯಸಭಾ ಪ್ರವೇಶ ಮಾಡಲು ಬಿಜೆಪಿ ಅವಕಾಶ ಕೊಟ್ಟಿದೆ, ಕಾರ್ಯಕರ್ತರ ಬಲ, ನಾಯಕರ ಸಹಕಾರದ ಮೂಲಕ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತೇನೆ.ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಕಾರ್ಯಕರ್ತರು, ನಾಯಕರ ಆಪೇಕ್ಷೆಗೆ ತಕ್ಕಂತೆ ಕೆಲಸ ಮಾಡುವ ಸಂಕಲ್ಪದೊಂದಿಗೆ ಪ್ರವಾಸ ಆರಂಭಿಸಿದ್ದೇನೆ, ಇಲ್ಲಿಯವರೆಗೆ ರಾಜ್ಯಸಭೆ ಎಂದರೆ ಬೇರೆಯಾದ ಕಲ್ಪನೆ ಇತ್ತು, ಸಾಮಾನ್ಯರು ರಾಜ್ಯಸಭೆ ಪ್ರವೇಶಿಸಬಹುದೆಂಬ ಕಲ್ಪನೆ ಬಿಜೆಪಿ ಹರಿಬಿಟ್ಟಿದೆ, ಉಳಿದ ಪಕ್ಷಗಳಲ್ಲಿಯೂ ಈ ಚರ್ಚೆ ಬಿರುಸಿನಿಂದ ಪ್ರಾರಂಭವಾಗಿದೆ. ಈ ಪರಂಪರೆ ನೀವು ತರಬೇಕೆಂದು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ನಾನು ಕಳೆದ ಹಲವು ದಶಕಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಜನರ ಮಧ್ಯೆ ಬೆಳೆದಂತವನು, ಸಾಮಾನ್ಯ ಜನರ, ಕಟ್ಟಕಡೆಯ ವ್ಯಕ್ತಿಯ ಕನಸೇನು ಎಂಬ ಕಲ್ಪನೆ ನನಗಿದೆ. ನಮ್ಮ ರಾಜ್ಯಕ್ಕೆ ಸಮರ್ಪಕ ಅನುದಾನ ತರೋದು, ಬಳಕೆ ಮಾಡೋದರಲ್ಲಿ ಬಹಳಷ್ಟು ಸಲ ವಿಫಲರಾಗಿದ್ದೇವೆ, ಅದು ಆಗದಂತೆ ನಾನು ಪ್ರಯತ್ನಿಸುವೆ ಎಂದು ಈರಣ್ಣ ಕಡಾಡಿ ಹೇಳಿದರು.

ವಿಧಾನ ಪರಿಷತ್ ಆಯ್ಕೆಯಲ್ಲೂ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಬಗ್ಗೆ ಪಕ್ಷ ತೀರ್ಮಾನಿಸುತ್ತದೆ. ನಮ್ಮ ಪಕ್ಷ ಕಾರ್ಯಕರ್ತರ ಆಧಾರಿತ ಪಕ್ಷವಾಗಿದೆ. ಕೊಟ್ಟಿರುವ ಅವಕಾಶ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದರು

ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಬಣಗಳು ಇಲ್ಲ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ,ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ಅದ್ಯಕ್ಷರು ಆಗ್ತಾರೆ,ಎಂದು ಈರಣ್ಣಾ ಕಡಾಡಿ ವಿಶ್ವಾಸವ್ಯೆಕ್ತಪಡಿಸಿದರು.
ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ನೂರಾರು ಕಾರ್ಯಕರ್ತರು ಯಪಸ್ಥಿತರಿದ್ದರು.

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.