Breaking News

ಈರಣ್ಣ ಕಡಾಡಿ, ಕೇಂದ್ರ ಕಾನೂನು ಮಂತ್ರಿಗಳನ್ನು ಭೇಟಿಯಾಗಿದ್ದು ಏಕೆ ಗೊತ್ತಾ.??*

ಬೆಳಗಾವಿ: ನೋಟರಿ ವೃತ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡ ವಕೀಲರಿಗೆ ಒಂದು ಗೌರವದ ವೃತ್ತಿ ಬದುಕು ನೀಡುವಂತೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಪದಾಧಿಕಾರಿಗಳು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸಿದರು.

ರಾಜ್ಯದಾದ್ಯಂತ ನೋಟರಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಪೂರ್ಣ ಪ್ರಮಾಣದಲ್ಲಿ ನೋಟರಿ ವೃತ್ತಿಯಲ್ಲಿ ತೊಡಗಿರುವ ನೋಟರಿಗಳಿಗೆ ಕೋರ್ಟ ಆವರಣದಲ್ಲಿಯೇ ಕಾರ್ಯನಿರ್ವಹಿಸಲು ಸ್ಥಳ ನೀಡಬೇಕು, ಒಂದು ಬಾರಿ ನೋಟರಿಯಾಗಿ ಆಯ್ಕೆಯಾದವರಿಗೆ 5 ವರ್ಷಕ್ಕೊಮ್ಮೆ ನೋಟರಿ ನೊಂದಣಿಯನ್ನು ನವೀಕರಿಸುವುದನ್ನು ರದ್ದುಪಡಿಸಿ, ಜೀವನ ಪೂರ್ತಿ ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಹೊಸ ನೋಟರಿಗಳ ನೇಮಕವಾಗುವಾಗ ಬೇಕಾಬಿಟ್ಟಿಯಾಗಿ ಮಾಡುವುದಕ್ಕಿಂತ ಒಂದು ನಿಯಮಾವಳಿ ರೂಪಿಸುವುದು ಅಗತ್ಯವಾಗಿದೆ. ರಾಜ್ಯ ನೋಟರಿ ಅಸೋಶಿಯೇಶನ ವತಿಯಿಂದ ಯಾವುದೇ ನೋಟರಿ ಮೃತಪಟ್ಟಲ್ಲಿ ಅವರ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಿಸಲು ಹಣಕಾಸಿನ ತೊಂದರೆಯಿದ್ದು ಅದಕ್ಕಾಗಿ ಕೇಂದ್ರ ಸರ್ಕಾರದ ಕಾನೂನು ಇಲಾಖೆಯಿಂದ ಸಹಾಯಧನ ನೀಡಬೇಕು ಹೀಗೆ ಹತ್ತು ಹಲವಾರು ಸಮಸ್ಯೆಗಳ ಕುರಿತು ಕೇಂದ್ರ ಕಾನೂನು ಸಚಿವರ ಗಮನಕ್ಕೆ ತರಲಾಯಿತು ಮತ್ತು ಈ ಸಮಸ್ಯೆಗಳ ಪರಿಹಾರಕ್ಕಾಗಿ ಒತ್ತಾಯ ಮಾಡಲಾಯಿತು.
ನೋಟರಿ ರಾಜ್ಯ ಸಂಘದ ಪದಾಧಿಕಾರಿಗಳ ಎಲ್ಲ ಸಮಸ್ಯೆಗಳನ್ನು ಸಹಾನೂಭೂತಿಯಿಂದ ಆಲಿಸಿ ಇಲ್ಲಿಯವರೆಗೆ ಯಾವುದೇ ನೋಟರಿ ಸಂಘಟನೆಗಳು ನನ್ನ ಬಳಿ ಬಂದಿಲ್ಲ. ಸಂಸದ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ಎಲ್ಲ ಸಮಸ್ಯೆಗಳ ಬಗ್ಗೆ ಗಮನ ಸೆಳೆದಿದ್ದಿರಿ ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಅಧ್ಯಕ್ಷ ಶ್ರೀಕಾಂತ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಿ.ಎಸ್ ಚಿಕ್ಕನಗೌಡರ, ಸಹ ಕಾರ್ಯದರ್ಶಿ ವಿಜಯ ಮಹೇಂದ್ರಕರ, ಸಂಘಟನಾ ಕಾರ್ಯದರ್ಶಿ ಪ್ರಕಾಶಕುಮಾರ ಪರುತಗೌಡ್ರು, ಎಸ್.ಎನ್ ಜಾಲಿಹಾಳ, ಕೆ.ಆರ್ ಕೋಠೆವಾಲೆ, ಎಸ್. ವಾಯ್. ಪಾಟೀಲ ಇದ್ದರು.
ಪೋಟೋ ಶೀರ್ಷಿಕೆ: ನವದೆಹಯಲ್ಲಿ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರನ್ನು ಕರ್ನಾಟಕ ರಾಜ್ಯ ನೋಟರಿಗಳ ಸಂಘದ ಪದಾಧಿಕಾರಿಗಳು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸಿಸುತ್ತಿರುವುದು.

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *