Breaking News

ಸಿದ್ರಾಮಯ್ಯ ಜಾತಿವಾದಿ,ನಾನು ರಾಷ್ಟ್ರೀಯವಾದಿ- ಬೆಳಗಾವಿಯಲ್ಲಿ ಈಶ್ವರಪ್ಪ ಹೇಳಿಕೆ

ಬೆಳಗಾವಿ-
ಮತ್ತೆ ಆಪರೇಷನ್ ಕಮಲ ಆರಂಭ ಆಗೋ ಪ್ರಶ್ನೆ ಇಲ್ಲ. ಮೊದಲು ನಾವು ಆಪರೇಷನ್ ಕಮಲ ಮಾಡಿಲ್ಲ. ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ಈಶ್ವರಪ್ಪ ತಿರುಗೇಟು ,ನೀಡಿದ್ದಾರೆ

ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಹಿಡಿತದಲ್ಲಿ ಇಟ್ಟುಕೊಳ್ಳವಲ್ಲಿ ವಿಫಲವಾಗಿದೆ ಮುಂಬಯಿಗೆ ಶಾಸಕರು‌ ಹೋದ ಸಂದರ್ಭದಲ್ಲಿ ಹೊರ ಬಂದ ಶಾಸಕರು ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎಂದಿದ್ದರು.
ಬಿಜೆಪಿ ಆಪರೇಷನ್ ಕಮಲ ಮಾಡೋ ಪ್ರಶ್ನೆ ಉದ್ಬವಿಸಲ್ಲ ಅನೇಕ ಶಾಸಕರಿಗೆ ಸರಕಾರದ ಮೇಲೆ ಅತೃಪ್ತಿ ಇದೆ.
ಅತೃಪ್ತ ಶಾಸಕರಿಗೆ ರಾಜೀನಾಮೆ ಅಂಗೀಕಾರದ ಭಯ ಇತ್ತು. ಉಮೇಶ ಜಾಧವ ರಾಜೀನಾಮೆ ಅಂಗೀಕಾರ ಮಾಡಲಾಗಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಲಿದ್ದಾರೆ. ನಂಬರ್ ಗೊತ್ತಿಲ್ಲ ಕಾಂಗ್ರೆಸ್, ಜೆಡಿಎಸ್ ಶಾಸಕರು ರಾಜೀನಾಮೆ ನೀಡುತ್ತಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು ಸಮ್ಮಿಶ್ರ ಸರ್ಕಾರ ತಾನಾಗೆ ಪತನವಾಗಲಿದೆ.ಎಂದರು

ಮಾಜಿ ಸಿಎಂ ಸಿದ್ದರಾಮಯ್ಯಗೆ ಜಾತಿ ಬಿಟ್ರೆ ಬೇರೆ ಗೊತ್ತಿಲ್ಲ. ಸಿದ್ದರಾಮಯ್ಯ ಎಷ್ಟು ಜನ ಕುರುಬರಿಗೆ ಅನುಕೂಲ ಮಾಡಿದ್ದಾರೆ?
ವಿಶ್ವನಾಥ, ಜಿ ಶಂಕರಗೆ ಸಿದ್ದರಾಮಯ್ಯ ಮೋಸ ಮಾಡಿದ್ದಾರೆ.
ಸದ್ಯ ಸಿದ್ದರಾಮಯ್ಯ ಟಿಕೆಟ್ ಕೊಡಿಸಿದ ತೃಪ್ತಿಯಲ್ಲಿ ಇದ್ದಾರೆ. ಸೋಲೋ ಕಡೆಯಲ್ಲಿ ಕುರುಬರಿಗೆ ಟಿಕೆಟ್ ಕೊಡಿಸಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಸೇರಿ ಯಾರಿಗೆ ಬೇಡವಾದ ಟಿಕೆಟ್ ಕುರುಬರಿಗೆ ಕೊಡಿಸಿದ್ದಾರೆ. ನಾನು ಕುರುಬ ನಾಯಕ ಅಲ್ಲ.
ನಾನು ರಾಷ್ಟ್ರೀಯವಾದಿ, ಸಿದ್ದರಾಮಯ್ಯ ಜಾತಿವಾದಿ‌. ಇದನ್ನು ನೇರವಾಗಿ ಹೇಳಿದ್ದರೆ ಸಿದ್ದರಾಮಯ್ಯಗೆ ಸಿಟ್ಟು ಬರುತ್ತೆ.
ಕುರುಬ ಉದ್ಧಾರದ ಹೆಸರಲ್ಲಿ ಸಿದ್ದರಾಮಯ್ಯ ಉದ್ಧಾರ ಆಗಿದ್ದಾರೆ.
ಬಿಜೆಪಿ ಅವಧಿಯಲ್ಲಿ ಹಿಂದುಳಿದ, ಅಲ್ಪಸಂಖ್ಯಾತ ಕಲ್ಯಾಣಕ್ಕೆ ಅನೇಕ ಯೋಜನೆ ತಂದಿದ್ದೇವೆ. ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಲಿ.
ಹಿಂದುಳಿದವರಿಗೆ ಏನು ಮಾಡಿದ್ದಾರೆ ಎಂದು ಶ್ವೇತ ಪತ್ರ ಹೊರಡಿಸಲಿ.
ನಮಗಿಂತ ಸಿದ್ದರಾಮಯ್ಯ ಖರ್ಚು ಮಾಡಿದ್ಧು ಜಾಸ್ತಿ ಇದ್ರೆ ಅವರ ಹೇಳಿದಂಗೆ ಕೇಳತ್ತಿನಿ.
ಪ್ರಶ್ನೆ ಮಾಡಿದ್ರೆ ಸಿದ್ದರಾಮಯ್ಯ ಒರಟು ಮಾತನಾಡಿ ಬೈಸಿಕೊಳ್ತಾರೆ.
ಕುರುಬ, ಹಿಂದುಳಿದವರ ಉದ್ಧಾರ ಮಾಡಿದ್ದಿರಿ.
ನೇರವಾಗಿ ಅಂಕಿ, ಅಂಶ ಸಮೇತ ದಾಖಲೆ ನೀಡಿ. ಓಟ್ ಬ್ಯಾಂಕ್ ಸಲುವಾಗಿ ಕುರುಬ ಜಾತಿ ಬಳಸಿಕೊಳ್ಳುತ್ತಿದ್ದಾರೆ. ಎಂದು
ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲ್ ಹಾಕಿದ್ರು

ಮಂಡ್ಯದಲ್ಲಿ ಸುಮಲತಾ ಜಾತಿ ವಿಚಾರ ಪ್ರಸ್ತಾಪ. ಜೆಡಿಎಸ್, ಕಾಂಗ್ರೆಸ್ ನಮ್ಮನ್ನು ಜಾತಿವಾದಿಗಳು ಎನ್ನುತ್ತಾರೆ. ಈಗ ನಾಯ್ಡು, ಕುರುಬ, ಒಕ್ಕಲಿಗರು ತಂದಿದ್ದು ಯಾರು. ಜಾತಿ ಬಗ್ಗೆ ಸಿದ್ದರಾಮಯ್ಯ, ಶಿವರಾಮೇಗೌಡ ಹಾಗೂ ದೇವೇಗೌಡ ಮಾತನಾಡುತ್ತಾರೆ. ನಮ್ಮನ್ನು ಕೋಮುವಾದಿಗಳು ಎನ್ನುತ್ತಾರೆ.
ಇದಕ್ಕೆ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಈಶ್ವರಪ್ಪ ಹೇಳಿದರು

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *