ಬೆಳಗಾವಿ- ಬೆಳಗಾವಿಯಲ್ಲಿ ಬಿಜೆಪಿ ಮುಖಂಡ ಈಶ್ವರಪ್ಪ ಸಿಎಂ ಸಿದ್ರಾಮಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದು ಹಿಂದುಳಿದ ಮತಗಳಿಂದಲ್ಲ. ಕೆಜೆಪಿ – ಬಿಜೆಪಿ ಇಬ್ಬಾಗದಿಂದ ಮುಖ್ಯಮಂತ್ರಿಯಾಗಿದ್ದು ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಪುನರುಚ್ಚರಿಸಿದರು.
ಶನಿವಾರ ಬಿಜೆಪಿ ಹಿಂದುಳಿದ ವರ್ಗಗಗಳ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಹಿಂದಿನ ವಿಧಾನಸಭಾ ಚುನಾವಣೆ ಬಿಜೆಪಿ ಹಾಗೂ ಕೆಜೆಪಿಯಿಂದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.ಅವರು ಹೇಳುತ್ತಾರೆ. ನಾನು ಹಿಂದುಳಿದ ವರ್ಗಗಳಿಂದ ಮುಖ್ಯಮಂತ್ರಿಯಾಗಿದ್ದೇನೆ ಎಂದು ನಂತರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರು ಒಗ್ಗಟ್ಟಾಗಿ ಕೇಂದ್ರದಲ್ಲಿ ಪ್ರಧಾನಿಯಾಗಿ ಮೋದಿ ಆಯ್ಕೆ ಮಾಡಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಗೆ ಮುಖ ಭಂಗ ಮಾಡಿರುವುದನ್ನು ಮರೆತ್ತಿದ್ದಾರೆ.
ಸಿದ್ದರಾಮಯ್ಯನರು ಮುಂದಿನ ಸಲವು ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳುತ್ತಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರಗೆ ಕೇಳಿದರೆ ಅವರೇ ಬೇರೆ ಹೇಳತ್ತಾರೆ ಎಂದು ಲೇವಡಿಮಾಡಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬರುವಾಗ ಮಾತ್ರ ಹಿಂದುಳಿದವರ ಬಗ್ಗೆ ಅನುಕಂಪ ತೋರುತ್ತಾರೆ. ಆದರೆ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗಗಳಿಗೆ ಏನು ಕೊಡುಗೆ ನೀಡಿದ್ದಿರಿ ಎಂದು ಶ್ವೇತ ಪತ್ರ ಹೊರಡಿಸಿ ಎಂದು ಸವಾಲ್ ಹಾಕಿದರು.
ರಾಜ್ಯದಲ್ಲಿನ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಿಕ್ಷಣ ಕೊಡಲಿಲ್ಲ, ಸುಸಜ್ಜಿತ ಮನೆ ನೀಡಲಿಲ್ಲ ಎಂದು ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದರು.
ಕುಲಕುಲವೆಂದು ಹೋಡೆದಾಡ ಬೇಡಿ ಎಂದು ಶರಣರ ವಚನವನ್ನು ಮರೆತು ವೀರಶೈವ ಲಿಂಗಾಯತರ ಮಧ್ಯೆ ಬೆಂಕಿಹಚ್ಚಿದ್ದಾರೆ. ಅವರದ್ದೆ ಶಾಸಕರಾದ ಶಾಮನೂರು ಶಿವಶಂಕ್ರಪ್ಪ ಇದನ್ನು ವಿರೋಧಿಸುತ್ತಿದ್ದಾರೆ. ಇದು ಸಚಿವ ಸಂಪುಟದಲ್ಲಿ ತಿರ್ಮಾನ ಮಾಡತ್ತಾರೆ ನಾಚಿಗೆಯಾಗಬೇಕು ಇವರಿಗೆ ಎಂದು ಸಿಡಿಮಿಡಿಗೊಂಡರು.
ಕರ್ನಾಟಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ಹೇಳುವ ಸಿದ್ದರಾಮಯ್ಯ ರಾಜ್ಯದಲ್ಲಿ ಒಟ್ಟು 23 ಹಿಂದುಗಳ ಕೊಲೆಯಾಗಿದೆ. ರಾಜ್ಯದಲ್ಲಿ ಆರ್ ಎಸ್ ಎಸ್ ಮಟ್ಟ ಹಾಕುತ್ತೇನೆ ಎಂದು ಹಾಸ್ಯಾಸ್ಪದ ಹೇಳಿಕೆ ನೀಡುವ ಸಿದ್ದರಾಮಯ್ಯ ಯಾವುರ ದಾಸಯ್ಯ. ನೀನು ಲೆಕಕ್ಕೆ ಇಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.
ಕಾಂಗ್ರೆಸ್ ಸರಕಾರ ಹಾಗೂ ಸಿದ್ದರಾಮಯ್ಯನರ ಮೇಲೆ ಹಿಂದುಳಿದ ವರ್ಗದವರು ಬೇಸತ್ತು ಹೋಗಿದ್ದಾರೆ. ಹಿಂದುಳಿದ ಸಮಾಜದವರು ಸ್ಲಂಗಳಲ್ಲಿ ವಾಸ ಮಾಡುವವರಿಗೆ ಹಕ್ಕು ಪತ್ರ ನೀಡಲು ಆಗದ ಸಿಎಂ ಸಿದ್ದರಾಮಯ್ಯ ಹಿಂದುಳಿದ ನಾಯಕನಾಗಲು ಸಾಧ್ಯವೆ ಎಂದು ಪ್ರಶ್ನಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ಸಾಕಷ್ಟು ಹಿಂದುಳಿದ ವರ್ಗಗಗಳಿಗೆ ಅಭಿವೃದ್ಧಿ ಕಾರ್ಯಮಾಡಿದ್ದೇವೆ. ಲೋಕಸಭಾ ಚುನಾವಣೆ ಕಾಂಗ್ರೆಸ್ ಸೋಲಿಗೆ ಹಿಂದುಗಳ ವರ್ಗಗಗಳಿಂದ ಸಾಧ್ಯವಾಯಿತು.
ಕರ್ನಾಟಕದಲ್ಲಿ ಹಿಂದುಳಿದವರು ಬಿಜೆಪಿ ಬೆಂಬಲ ಇದ್ದಾರೆ ಎಂದು ತೋರಿಸಲು ಏ.3 ರಂದು ಕಾಗಿನೆಯಲ್ಲಿ ಬೃಹತ ಹಿಂದುಳಿದ ವರ್ಗಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮುಂಬರು ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಮಾಡುವ ಸಂಕಲ್ಪ ಮಾಡೋಣ ಎಂದರು.