ಬೆಳಗಾವಿ- ಜಗದೀಶ್ ಶೆಟ್ಟರ್ ಅವರಿಗೆ ಭರ್ಜರಿಯಾಗಿ ಬೆಳಗಾವಿಯ ಜನ ಗೆಲ್ಲಿಸಿದ್ದಾರೆ. ಶೆಟ್ಟರ್ ಅವರಿಗೆ ಬೆಳಗಾವಿ ಲಕ್ಕಿ ಯಾಕಂದ್ರೆ ಬೆಳಗಾವಿಯಿಂದ ಗೆದ್ದಿರುವ ಶಟ್ಟರ್ ಕೇಂದ್ರದ ಮಂತ್ರಿ ಆಗುವ ಎಲ್ಲ ಲಕ್ಷಣಗಳಿವೆ.
ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.ಮೋದಿ ಅವರ ಜೊತೆ ಎಷ್ಟು ಜನ ಮಂತ್ರಿಗಳು ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ, ಅದರಲ್ಲೂ ಕರ್ನಾಟಕದಿಂದ ಎಷ್ಟು ಜನ ಮಂತ್ರಿ ಆಗ್ತಾರೆ ಎನ್ನುವ ವಿಚಾರ ಈಗ ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕದಿಂದ ಕೇಂದ್ರ ಮಂತ್ರಿ ಆಗುವವರ ದೊಡ್ಡ ಪಟ್ಟಿ ಇದೆ. ಈ ಪಟ್ಟಿಯಲ್ಲಿ ಮೂರು ಜನ ಮಾಜಿ ಮುಖ್ಯಮಂತ್ರಿಗಳು ಇದ್ದಾರೆ,ಕುಮಾರಸ್ವಾಮಿ,ಬಸವರಾಜ್ ಬೊಮ್ಮಾಯಿ, ಹಾಗೂ ಜಗದೀಶ್ ಶೆಟ್ಟರ್ ಈ ಮೂವರಲ್ಲಿ ಕುಮಾರಸ್ವಾಮಿ ಮಂತ್ರಿ ಆಗೋದು ಬಹುತೇಕ ಖಚಿತ ಜಗದೀಶ್ ಶೆಟ್ಟರ್ ಮತ್ತು ಬಸವರಾಜ್ ಬೊಮ್ಮಾಯಿ ಇಬ್ಬರಲ್ಲಿ ಒಬ್ವರು ಮಂತ್ರಿ ಆಗ್ತಾರೆ ಜೊತೆಗೆ ಪ್ರಲ್ಹಾದ್ ಜೋಶಿ ಅವರೂ ಸಹ ಮಂತ್ರಿ ಆಗೋದು ಖಚಿತ ಎಂದು ಹೇಳಲಾಗುತ್ತಿದೆ.
ದಕ್ಷಿಣ ಕರ್ನಾಟಕ ಉತ್ತರ ಕರ್ನಾಟಕ ಎಂದು ಪ್ರದೇಶಿಕವಾಗಿ ಮಂತ್ರಿ ಸ್ಥಾನ ಹಂಚಿಕೆ ಆದಲ್ಲಿ ದಕ್ಷಿಣದಿಂದ ಕುಮಾರಸ್ವಾಮಿ, ಉತ್ತರದಿಂದ ಜಗದೀಶ್ ಶೆಟ್ಟರ್ ಮದ್ಯದಿಂದ ಪ್ರಲ್ಹಾದ್ ಜೋಶಿ ಅಥವಾ ಬೊಮ್ಮಾಯಿ ಕೇಂದ್ರದ ಮಂತ್ರಿ ಆಗುವ ಎಲ್ಲ ಸಾಧ್ಯತೆಗಳಿವೆ.
ಮಂತ್ರಿ ಸ್ಥಾನದ ಆಕಾಂಕ್ಷಿಗಳು ಎರಡು ದಿನ ಮೊದಲೇ ದೆಹಲಿಗೆ ಹೋಗಿದ್ದು ದೆಹಲಿಯಲ್ಲಿ ಕಸರತ್ತು ನಡೆಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು ತಮ್ಮ ಪುತ್ರ ರಾಘವೇಂದ್ರ ಅವರಿಗೆ ಮಂತ್ರಿ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಶೋಭಾ ಕರಂದ್ಲಾಚೆ ಅವರೂ ಸಹ ಮಂತ್ರಿ ಆಗ್ತಾರೆ ಎಂದು ಹೇಳಲಾಗುತ್ತಿದೆ.
ಜಗದೀಶ್ ಶೆಟ್ಟರ್ ಅವರ ಅದೃಷ್ಟ ಚನ್ನಾಗಿದೆ.ಹುಬ್ಬಳ್ಳಿಯಿಂದ ಬೆಳಗಾವಿಗೆ ಬಂದು ಸಂಸದರಾಗಿರುವ ಶೆಟ್ಟರ್ ಬೆಳಗಾವಿಯಿಂದ ಈಗ ದೆಹಲಿಗೆ ಹೋಗಿದ್ದು ಮಂತ್ರಿ ಆಗಿ ಬೆಳಗಾವಿಗೆ ಬರ್ತಾರೆ ಎಂದು ಹೇಳಲಾಗುತ್ತಿದೆ. ಜೈ ಜಗದೀಶ್ ಹರೇ…..ಅವರು ಮಂತ್ರಿ ಆಗ್ತಾರೆ ಇದು ಬೆಳಗಾವಿ ಸುದ್ದಿಯ ಎಕ್ಸಿಟ್ ಪೋಲ್..