Breaking News

ದೆಹಲಿಯಲ್ಲಿ ಬೆಳಗಾವಿ ವಿಕಾಸ ಯಾತ್ರೆ , ಶೆಟ್ಟರ್ ಭೇಟಿ ಪರ್ವ….!!

 

ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಬೆಳಗಾವಿ ಅಭಿವೃದ್ಧಿ ವಿಚಾರದಲ್ಲಿ ದೆಹಲಿಯಲ್ಲಿ ವಿಕಾಸ ಯಾತ್ರೆ ಮುಂದುವರೆಸಿದ್ದಾರೆ.ಬೆಳಗಾವಿ ಅನೇಕ ಯೋಜನೆಗಳ ಮಂಜೂರು ಮಾಡಲು ಆಗ್ರಹಿಸಿ ಸಂಬಂಧಿಸಿದ ಇಲಾಖಾ ಸಚಿವರನ್ನು ಭೇಟಿ ಮಾಡಿ ಮನವಿ ಅರ್ಪಿಸಿದ್ದಾರೆ.

ಯಲ್ಲಮ್ಮನ ದೇವಸ್ಥಾನಕ್ಕೆ ಹೊಸ ರೈಲು ಮಾರ್ಗಕ್ಕೆ ಮನವಿ

ವಿಶ್ವವಿಖ್ಯಾತ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನಿಡಲು ಅನುಕೂಲವಾಗುವ ನಿಟ್ಟಿನಲ್ಲಿ ಸವದತ್ತಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸಲು ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆಯನ್ನು ಕೈಗೊಳ್ಳುವ ಅವಶ್ಯಕತೆಯ ಬಗ್ಗೆ ಪ್ರಸ್ತಾಪಿಸಲು ಇಂದು ನವದೆಹಲಿಯಲ್ಲಿ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಬೆಳಗಾವಿ ಲೋಕಸಭಾ ಸಂಸದರಾದ ಜಗದೀಶ್ ಶೆಟ್ಟರ್ ಅವರು ವಿ. ಸೋಮಣ್ಣ ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರು ಅವರೊಂದಿಗೆ ಜೊತೆಗೂಡಿ ಭೇಟಿ ಮಾಡಿ ವಿನಂತಿಸಿ ಮನವಿಯನ್ನು ಅರ್ಪಿಸಿದರು.

ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಪ್ರತಿ ವರ್ಷ ದೇಶದ ವಿವಿಧೆಡೆಗಳಿಂದ ಲಕ್ಷಾಂತರ ಜನ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ. ಆದರೆ ಇಲ್ಲಿ ಆಗಮಿಸಲು ಕೇವಲ ರಸ್ತೆ ಸಂಪರ್ಕ ಮಾತ್ರ ಲಭ್ಯವಿರುವುದರಿಂದ ದೇವಸ್ಥಾನದ ರಸ್ತೆ ಉದ್ದಕ್ಕೂ ವಾಹನಗಳ ಸಂಚಾರ ದಟ್ಟಣೆ ಉಂಟಾಗಿ ಹಲವಾರು ಗಂಟೆಗಳ ಕಾಲ ಭಕ್ತರು ಪರದಾಡುವ ಸ್ಥಿತಿ ಎದುರಿಸಬೇಕಾಗುತ್ತದೆ.

ಈ ನಿಟ್ಟಿನಲ್ಲಿ ಸವದತ್ತಿ ಪಟ್ಟಣಕ್ಕೆ ರೈಲು ಸಂಪರ್ಕ ಕಲ್ಪಿಸುವುದು ತುಂಬಾ ಅವಶ್ಯಕವಾಗಿದ್ದು, ಈ ಕುರಿತು ನೂತನವಾಗಿ ನಿರ್ಮಾಣ ಮಾಡಬೇಕಾದ ರೈಲು ಮಾರ್ಗದ ಸರ್ವೆ ಕಾರ್ಯ ನಡೆಸಲು ಹುಬ್ಬಳ್ಳಿ ನೈರುತ್ಯ ವಲಯ ರೈಲ್ವೆ ಮಹಾಪ್ರಭಂದಕರು ಇವರಿಗೆ ನಿರ್ದೇಶನ ನೀಡುವ ಬಗ್ಗೆ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಇವರು ಕೇಂದ್ರ ರೇಲ್ವೆ ಸಚಿವರಲ್ಲಿ ವಿನಂತಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವರು ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಈ ವಿಷಯವನ್ನು ಶೀಘ್ರ ಪರಿಗಣಿಸುವ ಬಗ್ಗೆ ಭರವಸೆಯನ್ನು ನೀಡಿದ್ದಾರೆ ಎಂದು ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಇದೆ ಸಮಯದಲ್ಲಿ ಸನ್ :2016 ರಲ್ಲಿ ಮಹಾದಾಯಿ ಯೋಜನೆಯ ಅನುಷ್ಠಾನಕ್ಕೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲು ರುಕೋ ಕೈಗೊಂಡ ನೂರಾರು ರೈತರ ಮೇಲೆ ಪೋಲಿಸರು ಆಗಿನ ಸಮಯದಲ್ಲಿ ದಾಖಲಿಸಿದ ಕೇಸುಗಳನ್ನು ರದ್ದು ಪಡಿಸುವಂತೆಯೂ ಸಹ ಸಂಸದರು ರೇಲ್ವೆ ಸಚಿವರಲ್ಲಿ ವಿನಂತಿಸಿದರು. ಈ ವಿಷಯದ ಬಗ್ಗೆ ತಾವು ಪರಿಶೀಲಿಸುವ ಒಂದು ಸ್ಪಷ್ಟ ಭರವಸೆಯನ್ನು ರೈಲ್ವೆ ಸಚಿವರು ನೀಡಿರುವ ಬಗ್ಗೆ ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

122 ಕೋಟಿ ಯೋಜನೆಯ ಮಂಜೂರಾತಿಗೆ ಮನವಿ

ಬೆಳಗಾವಿ ಜಿಲ್ಲೆಯಲ್ಲಿ “ಕೃಷಿ ಸಿಂಚಾಯಿ ಯೋಜನೆ” ( ಹರ ಖೇತ ಕೋ ಪಾನಿ HKKP – SMI ) ಯೋಜನೆಯಡಿ ಕಾಮಗಾರಿಗಳ ಪ್ರಾರಂಭಕ್ಕೆ ತಯಾರಿಸಿದ ಸುಮಾರು ರೂ.122.75 ಕೋಟಿ ಅಂದಾಜು ಮೊತ್ತದ ಪ್ರಸ್ತಾವನೆಗೆ ಅನುಮೋದನೆ ಕೋರಿ ರಾಜ್ಯ ಸರ್ಕಾರವು ಈಗಾಗಲೇ ಕೇಂದ್ರ ಜಲ ಶಕ್ತಿ ಸಚಿವಾಲಯಕ್ಕೆ ಮನವಿ ಕಳುಹಿಸಿದ್ದು, ಅದಕ್ಕೆ ಶೀಘ್ರ ಅನುಮೋದನೆ ಸೂಚಿಸುವಂತೆ ಕೋರಿ ಬೆಳಗಾವಿ ಲೋಕಸಭಾ ಸಂಸದರಾದ ಜಗದೀಶ್ ಶೆಟ್ಟರ್ ಅವರು ಕೇಂದ್ರ ಜಲ ಶಕ್ತಿ ಖಾತೆಯ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಇವರನ್ನು ನವದೆಹಲಿಯಲ್ಲಿ ಭೇಟಿ ಮಾಡಿ, ಮನವಿ ಅರ್ಪಿಸಿ, ಒತ್ತಾಯಿಸಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಅದರಂತೆ ಪ್ರಸ್ತಾಪಿತ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ದೊರೆಯುವ ಭರವಸೆ ಇದೆ ಎಂದು ಸಂಸದರಾದ ಶ್ರೀ ಜಗದೀಶ್ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Check Also

ಡಿಸ್ಕೋ ಡ್ಯಾನ್ಸ್ ಗಲಾಟೆ, ಮೂವರಿಗೆ ಚೂರಿ ಇರಿತ,

ಬೆಳಗಾವಿ-ಬೆಳಗಾವಿಯಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಡಿಜೆ ತಾಳಕ್ಕೆ ಕುಣಿಯುವಾಗ ನಡೆದ ಗಲಾಟೆಯಲ್ಲಿ ಮೂವರಿಗೆ ಚೂರಿ ಇರಿತವಾದ ಘಟನೆ ನಡೆದಿದೆ. …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.