Breaking News

ಕನ್ನಡಕ್ಕೆ ಕೊಡ್ಲಿ ಪೆಟ್ಟು..ರಾಜಕೀಯ ಕಿತ್ತಾಟಕ್ಕೆ ಹೋಯ್ತು.ಕನ್ನಡದ ಮಾನ….!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡದ ಹಿತಾಸಕ್ತಿಗೆ ಕೊಡ್ಲಿ ಪೆಟ್ಟು ಬಿದ್ದಿದೆ ಸ್ವಾರ್ಥ ರಾಜಕಾರಣದ ತಿಕ್ಕಾಟದಲ್ಲಿ ಕನ್ನಡಗಿರಿಗೆ ದಕ್ಕಬಹುದಾಗಿದ್ದ ಮೇಯರ್ ಸ್ಥಾನ ಕೈ ತಪ್ಪಿ ಹೋಗಿದೆ

ಬೆಳಗಾವಿ ಮಹಾನಗರ ಪಾಲಿಕೆಯ ಮೂರನೇ ಅವಧಿಗೆ ಇವತ್ತು ನಡೆದ ಮೇಯರ್ -ಉಪಮೇಯರ್ ಚುನಾವಣೆಯಲ್ಲಿ ಮತ್ತೋಮ್ಮೆ ನಾಡದ್ರೋಹಿ ಎಂಇಎಸ್ ಮೇಯರ್ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲವಾಗಿದೆ.ಒಟ್ಟು 58ಸದಸ್ಯ ಬಲ ಹೊಂದಿರುವ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಚಿವರು, ಶಾಸಕರು ಸೇರಿ ಒಟ್ಟು 62ಮತಗಳಿವೆ. ಇದರಲ್ಲಿ 32ಜನ ಸದಸ್ಯರನ್ನ ಹೊಂದಿರುವ ಎಂಇಎಸ್ , ಇತ್ತೀಚಿಗೆ ಒಡೆದು ಎರಡು ಹೋಳಾಗಿತ್ತು.ಒಂದು ಬಣ ಕನ್ನಡ ಗುಂಪಿನ ಕಡೆಗೆ ಬರುವುದಾಗಿ ಒಪ್ಪಿಕೊಂಡಿತ್ತು. ಇದರ ಲಾಭ ಪಡೆದು ಈ ಬಾರಿಯಾದ್ರೂ ಕನ್ನಡ ಮೇಯರ್ ಮಾಡಬಹುದು ಎನ್ನುವ ಆಶಾಭಾವನೆ ಗಡಿ ನಾಡ ಕನ್ನಡಿಗರಲ್ಲಿತ್ತು. ಆದ್ರೆ ಬೆಳಗಾವಿ ಜಿಲ್ಲೆಯಲ್ಲಿನ ಒಣ ರಾಜಕೀಯದಿಂದ ಕನ್ನಡ ಭಾಷಿಕ ಸದಸ್ಯರಲ್ಲಿಯೇ ಎರಡು ಬಣಗಳಾಗಿದ್ದರಿಂದ ಇದು ಸಾಧ್ಯವಾಗಲಿಲ್ಲ. ಇವತ್ತು ನಡೆದ ಚುನಾವಣೆಯಲ್ಲಿ ಮೇಯರ್ -ಉಪಮೇಯರ್ ಚುನಾವಣೆಯಲ್ಲಿ ಮಾಜಿ ಸಚಿವ ಸತೀಶ ಜಾರಕಿಹೋಳಿ, ಶಾಸಕ ಪಿರೋಜ್ ಶೇಠ್ ಒಂದು ಬಣ ಕಟ್ಟಿಕೊಂಡು ಪ್ರತ್ಯೇಕವಾಗಿ ಮೇಯರ್ ಸ್ಥಾನಕ್ಕೆ ಪುಷ್ಪಾ ಪರ್ವತರಾವ್ ಅವರನ್ನ ಕಣಕ್ಕಿಳಿಸಿದ್ರೆ, ಇತ್ತ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ ಜಯಶ್ರೀ ಮಾಳಗಿಯನ್ನ ಕಣಕ್ಕಿಳಿಸಿದ್ರು. ಇದರ ಲಾಭ ಪಡೆದ ಎಂಇಎಸ್ ಸದಸ್ಯರೆಲ್ಲಾ ಒಂದಾಗಿ ಸಂಜೋತಾ ಬಾಂದೇಕರ್ ಅವರನ್ನ ಮೇಯರ್ ಸ್ಥಾನಕ್ಕಿಳಿಸಿ ಅವರನ್ನೇ ಮೇಯರ್ ಆಗಿ ಗೆಲ್ಲಿಸುವಲ್ಲಿ ಸಫಲವಾದ್ರು.
ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂಜೋತಾ ಬಾಂದೆಕರ್ 32 ಮತಗಳನ್ನ ಪಡೆದು ಆಯ್ಕೆಯಾದ್ರೆ, ಇವರ ಪ್ರತಿಸ್ಪರ್ಧಿಗಳಾದ ಕನ್ನಡ ಭಾಷಿಕ ಅಭ್ಯರ್ಥಿಗಳಾದ ಜಯಶ್ರೀ ಮಾಳಗಿ 17ಮತಗಳನ್ನ ಪಡೆದುಕೊಂಡ್ರೆ, ಪುಷ್ಪಾ ಪರ್ವತರಾವ್ 10ಮತಗಳನ್ನ ಪಡೆದು ಸೋಲು ಕಂಡರು.ಇನ್ನೂ ಉಪಮೇಯರ್ ಸ್ಥಾನ ಕೂಡಾ ಎಂಇಎಸ್ ಪಡೆದುಕೊಂಡಿದೆ. ನಾಗೇಶ ಮಂಡೋಳ್ಕರ್ 32ಮತಗಳನ್ನ ಪಡೆದುಕೊಂಡು ಗೆಲವು ಸಾಧಿಸಿದ್ದಾರೆ.ಕನ್ನಡಿಗರಲ್ಲಿಯೇ ಎರಡು ಬಣಗಳಾಗಿರುವುದನ್ನ ಮನಗಂಡ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ, ಯಾರಿಗೂ ಮತಚಲಾವಣೆ ಮಾಡದೇ ತಟಸ್ಥರಾಗಿ ಉಳಿದ್ರು. ಒಗ್ಗೂಡದೇ ಇರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೊರಟು ಹೋದ್ರು.ಇನ್ನೂ ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಕನ್ನಡ ಬಲಿ ಕೊಟ್ಟಿರುವುದನ್ನ ಖಂಡಿಸಿ ಕನ್ನಡ ಪರ ಸಂಘಟನೆಗಳು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ವು. ರಾಜಕೀಯ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸತೀಶ ಜಾರಕಿಹೋಳಿ, ತಾವು ಕನ್ನಡ ಅಭ್ಯರ್ಥಿಗೆ ಓಟು ಮಾಡಿರುವುದಾಗಿ ಹೇಳಿ ಜಾರಿಕೊಂಡರು.

ಕಳೆದ ಹದಿನೈದು ದಿನಗಳ ಹಿಂದೆ ನಡೆದ ಎಪಿಎಂಸಿ ಚುನಾವಣೆಯಲ್ಲೂ ಸಹ ಜಾರಕಿಹೋಳಿ ಸಹೋದರರ ಪ್ರತಿಷ್ಠೆ ಹಿನ್ನೆಲೆಯಲ್ಲಿ ಅಲ್ಲೂ ಸಹ ಎಂಇಎಸ್ ಅಭ್ಯರ್ಥಿಗಳ ಗೆಲುವು ಸಾಧಿಸಿದ್ದರು. ಇದು ಇಲ್ಲಿಗೆ ಮುಕ್ತಾಯವಾಗುತ್ತದೆ ಅಂತಾ ಎಲ್ಲರೂ ಭಾವಿಸಿದ್ದರು. ಆದ್ರೆ ಇದೀಗ ಮತ್ತೆ ಅದು ಮಹಾನಗರ ಪಾಲಿಕೆಯಲ್ಲಿ ಮುಂದುರೆದಿದ್ದರಿಂದ ಕನ್ನಡಿಗರೊಬ್ಬರೂ ಬಹಳ ದಿನಗಳ ನಂತ್ರ ಮೇಯರ್ ಆಗುವ ಕನಸ್ಸು ನುಚ್ಚು ನೂರಾಗಿದೆ.

ಸೂಪರ್ ಸೀಡ್ ಫೈಲ್ ರೀ ಓಪನ್

ಮಹಾನಗರ ಪಾಲಿಕೆ ಮೇಯರ್ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆಯೇ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಅವರು ಪಾಲಿಕೆ ಆಯುಕ್ತರನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಂಡಿದ್ದಾರೆ ಸರ್ಕಾರ ಪಾಲಿಕೆ ಸೂಪರ್ ಸೀಡ್ ಮಾಡುವ ಫೈಲ್ ರೀ ಓಪನ್ ಮಾಡುವ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *