ಬೆಳಗಾವಿ- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಶ್ರಮ ಮತ್ತು ಬಲದಿಂದ ಅಧಿಕಾರಕ್ಕೆ ಬಂದಿದೆ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪಕ್ಷದ ನಾಯಕರು ಕಾರ್ಯಕರ್ತರಿಗೆ ಯಾವುದೇ ಸ್ಥಾನಮಾನ ನೀಡದೇ ಕಾರ್ಯಕರ್ತರಿಗೆ ಗುಲಾಮರಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ
ನಗರದಲ್ಲಿ ಹಲವಾರು ಜನ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು ಕಾಂಗ್ರೆಸ್ ನಾಯಕರು ಮುಖ್ಯವಾಗಿರುವ ಜಾತಿ ಪಂಗಡಗಳನ್ನು ಗುರುತಿಸಿ ಬಲಾಢ್ಯ ಸಮುದಾಯಗಳಿಗೆ ಪಕ್ಷದ ಸಂಘಟನೆಯ ಜವಾಬ್ದಾರಿ ನೀಡಿದ್ದಾರೆ ಪಕ್ಷವನ್ನು ಅಧಿಕಾರಕ್ಕೆ ತರಲು ಈ ರಾಜ್ಯದ ಮುಸ್ಲಿಮರು ಸಮಗಾರ ಢೋರ ಭಂಗಿ ಭೋವಿ ಸಮಾಜದ ನಾಯಕರು ದುಡಿದಿಲ್ಲವೇ ಅವರಿಗೇಕೆ ಪಕ್ಷದ ಸಂಘಟನೆಯ ಜವಾಬ್ದಾರಿ ಕೊಟ್ಟಿಲ್ಲ ಎಂದು ಶಂಕರ ಮುನವಳ್ಳಿ ಪಕ್ಷದ ನಾಯಕರನ್ನು ಪ್ರಶ್ನಿಸಿದ್ದಾರೆ
ಅಧಿಕಾರ ಪಡೆಯಲು ಪಕ್ಷದ ಜೊತೆ ಬ್ಲ್ಯಾಕ್ ಮೇಲ್ ಮಾಡುವವರಿಗೆ ಪಕ್ಷ ಸ್ಥಾನ ಮಾನ ಕೊಡುತ್ತಿದೆ ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಪಕ್ಷಕ್ಕೆ ನೀಡಿರುವ ಕೊಡುಗೆಯಾದರೂ ಏನು ಎಂದು ಪ್ರಶ್ನೆ ಮಾಡಿರುವ ಶಂಕರ ಮುನವಳ್ಳಿ ಕಾಂಗ್ರೆಸ್ ಪಕ್ಷ ಜಾರಕಿಹೊಳಿ ಸಹೋದರರ ಸ್ವತ್ತಲ್ಲ ಪಕ್ಷ ಕಾರ್ಯಕರ್ತರ ಆಸ್ತಿ ಎಂದು ಮುನವಳ್ಳಿ ಪ್ರತಿಪಾದಿಸಿದ್ದಾರೆ
ರಾಜ್ಯದ ಕಾಂಗ್ರೆಸ್ ನಾಯಕರು ತಾವು ಮಾಡಿರುವ ತಪ್ಪನ್ನು ತಿದ್ದುಕೊಳ್ಳದಿದ್ದರೆ ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭೆ ಕ್ಷೇತ್ರಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ವೇದಿಕೆಯಿಂದ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಉತ್ತರ ಕರ್ನಾಟಕದ 56 ಕ್ಷೇತ್ರಗಳಲ್ಲಿಯೂ ವೇದಿಕೆ ಪಕ್ಷದ ವಿರುದ್ಧ ಕೆಲಸ ಮಾಡುತ್ತದೆ ಎಂದು ಶಂಕರ ಮುನವಳ್ಳಿ ಎಚ್ಚರಿಕೆ ನೀಡಿದ್ದಾರೆ
ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಮಾನಿಕ್ ಟ್ಯಾಗೋರ್ ಬೆಳಗಾವಿ ಗೆ ಬಂದ ಸಂಧರ್ಭದಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಳಲು ತೋಡಿಕೊಂಡಾಗ ಶಂಕರ ಮುನವಳ್ಳಿ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಮಾನಿಕ್ ಟ್ಯಾಗೋರ್ ಗೆ ಸುಳ್ಳು ಮಾಹಿತಿ ಕೊಟ್ಟಿರುವ ಜಿಲ್ಲೆಯ ಕಾಂಗ್ರೆಸ್ ನಾಯಕರು ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ್ದಲ್ಲಿ ಕಾಂಗ್ರೆಸ್ ಭವನ ಕಟ್ಟಲು ನನ್ನಿಂದ ಎರಡುವರೆ ಲಕ್ಷ ರೂ ಹಣ ಪಡೆದಿದ್ದೇಕೆ ಎಂದು ಶಂಕರ ಮುನವಳ್ಳಿ ಕಿಡಿಕಾರಿದ್ದಾರೆ
ನಾನು ಕೆಪಿಸಿಸಿ ಮಾಜಿ ಸದಸ್ಯ ಈ ಪದವಿಯನ್ನು ನನ್ನಿಂದ ಯಾರೂ ಕಸಿದುಕೊಳ್ಳುಲು ಸಾಧ್ಯವಿಲ್ಲ ಎಂದು ಶಂಕರ ಮುನವಳ್ಳಿ ತಿಳಿಸಿದ್ದಾರೆ