ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಜಯರಾಂ ಅವರ ವರ್ಗ ಆದ ನಂತರ ಹೊಸ ಜಿಲ್ಲಾಧಿಕಾರಿಯ ನೇಮಕದ ವಿಚಾರದಲ್ಲಿ ಸತೀಶ ಜಾರಕಿಹೊಳಿ ಮತ್ತು ರಮೇಶ ಜಾರಕಿಹೊಳಿ ಸಹೋದರರ ನಡುವೆ ಕಿತ್ತಾಟ ಶುರು ವಾಗಿದ್ದು ಸಹೋದರರ ಕಿತ್ತಾಟಕ್ಕೆ ಬೆದರಿದ ಸಿಎಂ ಇಬ್ಬರೂ ಶಿಫಾರಸ್ಸು ಮಾಡಿದವರನ್ನು ಬಿಟ್ಟು ಹೊಸ ಡಿಸಿ ಯ ಹುಡುಕಾಟದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಪರದಾಡುತ್ತಿರುವ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ
ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬೊಮ್ಮನಹಳ್ಳಿ ಅವರೇ ಬೆಳಗಾವಿ ಜಿಲ್ಲೆಯ ಹೊಸ ಡಿಸಿ ಆಗಿ ಬರಬೇಕು ಎಂದು ಪಟ್ಟು ಹಿಡಿದರೇ ಮಾಜಿ ಸಚಿವ ಸತೀಶ ಜಶರಕಿಹೊಳಿ ಅವರು ಜಯರಾಂ ಅವರನ್ನೇ ಮುಂದುವರೆಸಬೇಕು ಎಂಬ ವಾದವನ್ನು ಸಿಎಂ ಬಳಿ ಪ್ರಸ್ತಾಪ ಮಾಡಿರುವದರಿಂದ ಮುಖ್ಯಮಂತ್ರಿ ಸಿದ್ಧ ರಾಮಯ್ಯ ಜಾರಕಿಹೊಳಿ ಸಹೋದರರು ಶಿಪಾರಸ್ಸು ಮಾಡಿದವರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ನೇಮಿಸುವಸವದು ಬೇಡ ರೆಗ್ಯುಲರ್ ಡಿಸಿಯೊಬ್ಬರನ್ನು ನೇಮಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಮುಖ್ಯಮಂತ್ರಿಗಳ ಸಚಿವಾಲಯದಿಂದ ಲಭ್ಯವಾಗಿದೆ
ಹೊಸ ಡಿಸಿ ನೇಮಕ ಮಾಡುವ ವಿಚಾರದಲ್ಲಿ ಧಾರವಾಡ ಜಿಲ್ಲಾಧಿಕಾರಿ ಆಗಿರುವ ಬೊಮ್ಮನಹಳ್ಳಿ ಅವರನ್ನೇ ಬೆಳಗಾವಿಗೆ ವರ್ಗಾವಣೆ ಆಗಬೇಕು ಎಂದು ಜಿಲ್ಲಾಂತ್ರಿಗಳು ಪಟ್ಟು ಹಿಡಿದಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯ ಇಬ್ಬರು ಸಹೋದರರ ಬೇಡಿಕೆಯನ್ನು ತಿರಸ್ಕರಿಸಿ ಹೊಸ IAS ರೆಗ್ಯುಲರ್ ಡಿಸಿಯೊಬ್ಬರನ್ನು ಬೆಳಗಾವಿ ಡಿಸಿಯನ್ನಾಗಿ ನೇಮಕ ಮಾಡುವ ವಿಚಾರ ಹೊಂದಿದ್ದು ಗೌತಮ ಬಗಾದಿ ಅಥವಾ ಗದಗ ಡಿಸಿ ವೆಂಕಟೇಶ ಅವರನ್ನು ನೇಮಿಸುವ ಉತ್ಸುಕದಲ್ಲಿದ್ದಾರೆ ಎಂದು ತೀಳಿದು ಬಂದಿದೆ
ಆದರೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರು ಜಯರಾಂ ಅವರ ವರ್ಗಾವಣೆ ರದ್ದು ಮಾಡಿ ಅವರನ್ನೇ ಬೆಳಗಾವಿ ಜಿಲ್ಲಾಧಿಕಾರಿಯನ್ನಾಗಿ ಮುಂದುವರೆಸಬೇಕು ಎಂದು ಪಟ್ಟು ಹಿಡಿದಿದ್ದು ಅವರು ಎಷ್ಟರ ಮಟ್ಟಿಗೆ ಜಯಶಾಲಿ ಆಗುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕು