ಬೆಳಗಾವಿ: ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯ ಕಾಕತಿ, ಹೊನಗಾ, ವಂಟಮೂರಿ, ಯಮಕನಮರಡಿ , ಹೆಬ್ಬಾಳ ಗ್ರಾಮಗಳ ಜನರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ್ ಜಾರಕಿಹೊಳಿ ಉಚಿತ 10 ಸಾವಿರ ವಾಸೆಬಲ್ ಮಾಸ್ಕ್ ಗಳನ್ನು ವಿತರಿಸಿದರು.
ಶನಿವಾರ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭದ್ರತೆ ಸಿಬ್ಬಂದಿ ಇಲ್ಲದೆ ಒಬ್ಬರೆ ತೆರಳಿ ಜನರಿಗೆ ಮಾಸ್ಕ್ ವಿತರಣೆ ಮಾಡುವುದರ ಮೂಲಕ ಜನರಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.
ಜನರ ಆರೋಗ್ಯದ ದೃಷ್ಟಿಯಿಂದ ಪ್ರತಿ ಗ್ರಾಮಗಳಲ್ಲಿ ಪಾಗಿಂಗ್, ಬ್ಲಿಚಿಂಗ್ ಪೌಡರ್ ಸಿಂಪಡಿಸಬೇಕು. ಸಾರ್ವಜನಿಕರಿಗೆ ಕೊರೊನಾ ಜಾಗೃತಿ ಮೂಡಿಸುವುದರೊಂದಿಗೆ ಅವರ ಆರೋಗ್ಯ ರಕ್ಷಣೆ ಮಾಡುವುದು ನಮ್ಮಲ್ಲರೆ ಹೊಣೆಯಾಗಿದೆ. ಆದ ಕಾರಣ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯ ಹಾಗೂ ಗ್ರಾಮ ಪಂಚಾಯಿತಿ , ಆರೋಗ್ಯ ಅಧಿಕಾರಿಗಳಿಗೆ ಶಾಸಕ ಸತೀಶ್ ಜಾರಕಿಹೊಳಿ ಸೂಚಿಸಿದರು.
ಕೊರೊನಾ ಸೋಂಕು ಹರಡದಂತೆ ಮುಂಜಾಗೃತವಾಗಿ ಕೇಂದ್ರ ಸರ್ಕಾರ ಭಾರತ ಲಾಕ್ ಡೌನ್ ಮಾಡಿದೆ. ಆದ ಕಾರಣ ಜನರು ಸಹ ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರ ಬರದೆ, ಮನೆಯಲ್ಲಿ ಇರಿ. ಸಾರ್ವಜನಿಕರು ಕಂದಾಯ, ಆರೋಗ್ಯ, ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಸಹಕರಿಸಿ ಎಂದು ಜನರಿಗೆ ಮಾಸ್ಕ್ ವಿತರಣೆ ಮಾಡುವ ಮೂಲಕ ತಿಳಿಸಿದರು. ಇಂದಿನಿಂದ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ತೆರಳಿ ಮಾಸ್ಕ್ ನೀಡಲಿದ್ದಾರೆ.
ಆರೋಗ್ಯ ಇಲಾಖೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತರರು ಇದ್ದರು.