ರಾಜಧಾನಿ ದೆಹಲಿಗೆ ವಿಸ್ತರಿಸಿದ ಜಾರಕಿಹೊಳಿ ಸಾಮ್ರಾಜ್ಯ……!!!
ಬೆಳಗಾವಿ- ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿಗೆ ಸೀಮೀತವಾಗಿದ್ದ ಜಾರಕಿಹೊಳಿ ಸಾಮ್ರಾಜ್ಯ ಈಗ ದೇಶದ ರಾಜಧಾನಿ ದೇಹಲಿಗೂ ವಿಸ್ತರಿಸಿದೆ ಗೋಕಾಕಿನಿಂದ ಯಮಕನಮರ್ಡಿ ವಾಯಾ ಚಿಕ್ಕೋಡಿ ಮಾರ್ಗವಾಗಿ ಈಗ ದೆಹಲಿಗೂ ಮುಟ್ಟಿದೆ.
ಜಾರಕಿಹೊಳಿ ಕುಟುಂಬದ ಮಾಸ್ಟರ್ ಮೈಂಡ್ ಸತೀಶ್ ಜಾರಕಿಹೊಳಿ ಅವರು ಹಲವು ವರ್ಷಗಳ ಹಿಂದೆ ಗೋಕಾಕಿನಿಂದ ಬೆಳಗಾವಿ ಮಹಾನಗರಕ್ಕೆ ಶಿಪ್ಟ್ ಆಗಿದ್ದೇ ಜಾರಕಿಹೊಳಿ ಕುಟುಂಬದ ಟರ್ನಿಂಗ್ ಪಾಯಿಂಟ್ ಬೆಳಗಾವಿಯಲ್ಲಿ ಮನೆ ಮಾಡುವ ಮೂಲಕ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯಾದ್ಯಂತ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು.ತಮ್ಮ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಚಿಕ್ಕೋಡಿ ಲೋಕಸಭಾ ಮತ ಕ್ಷೇತ್ರದಿಂದ ನಿಲ್ಲಿಸಿ,ಗೆಲ್ಲಿಸಿದ ಮಾಸ್ಟರ್ ಮೈಂಡ್ ರಾಜ್ಯ ರಾಜಕಾರಣದಿಂದ ನೇರವಾಗಿ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿ ಪ್ರಿಯಾಂಕಾ ಜಾರಕಿಹೊಳಿ ಅವರು ಸಂವಿಧಾನದ ಮೇಲೆ ಪ್ರಮಾಣ ಮಾಡಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಜಾರಕಿಹೊಳಿ ಕುಟುಂಬದ ಹೊಸ ಪೀಳಿಗೆ ನೇರವಾಗಿ ರಾಷ್ಟ್ರ ರಾಜಕಾರಣಕ್ಕೆ ಧುಮುಕಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ಯಸ್ವಿಯಾಗುತ್ತಿದೆ.ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತ ಬಂದಿರುವ ಜಾರಕಿಹೊಳಿ ಕುಟುಂಬ ಈಗ ರಾಷ್ಟ್ರ ರಾಜಕಾರಣ ಪ್ರವೇಶಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ, ಕತ್ತಿ ಸಾಹುಕಾರ್, ಸವದಿ ಸಾಹುಕಾರ್, ಕೋರೆ ಸಾಹುಕಾರ್ ಹೆಸರಿನಲ್ಲಿ ರಾಜಕಾರಣ ನಡೆಯುತ್ತ ಬಂದಿದೆ, ಕತ್ತಿ ಸಾಹುಕಾರ್ ಕುಟುಂಬದ ಎರಡನೇಯ ಪೀಳಿಗೆ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದೆ.ನಿಖಿಲ್ ಕತ್ತಿ ಹುಕ್ಕೇರಿ ಕ್ಷೇತ್ರದ ಶಾಸಕರಾಗಿ ಸೇವೆ ಮಾಡುತ್ತಿದ್ದು ಸವದಿ ಸಾವುಕಾರ್ ಕೋರೆ ಸಾವುಕಾರ್ ಕುಟುಂಬದ ಎರಡನೇಯ ಪೀಳಿಗೆ ಫೀಲ್ಡ್ ಗೆ ಇಳಿಯುವದು ಬಾಕಿ ಇದ್ದು ಬೆಳಗಾವಿ ಜಿಲ್ಲೆಯಲ್ಲಿ ಸಾಹುಕಾರ್ ಪರ್ವ ಯಶಸ್ವಿಯಾಗಿದೆ.
ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಕನ್ನಡದಲ್ಲಿ ಪ್ರಮಾಣ ಮಾಡಿದ್ದು ವಿಶೇಷ.ಪ್ರೀಯಾಂಕಾ ಅವರಿಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಯ ಮೇಲೆ ಹಿಡಿತವಿದ್ದು ಸಂಸತ್ತಿನಲ್ಲಿ ಅವರ ಧ್ವನಿ ಗಟ್ಟಿಯಾಗಿ ಕೇಳಿಸಲಿದೆ.
ಬೆಳಗಾವಿ ಜಿಲ್ಲೆ ಐತಿಹಾಸಿಕ ಜಿಕ್ಲೆಯಾಗಿದೆ.ವೀರರಾಣಿ ಕಿತ್ತುರು ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕ್ರಾಂತಿಯ ನೆಲವಾಗಿದೆ.ಕ್ರಾಂತಿ ನೆಲದ ಪ್ರತಿನಿಧಿಯಾಗಿ ಲೋಕಸಭೆಗೆ ಪ್ರವೇಶ ಮಾಡಿರುವ ಪ್ರಿಯಾಂಕಾ ಜಾರಕಿಹೊಳಿ ಅವರು, ಮೊದಲನೇಯದಾಗಿ ವೀರರಾಣಿ ಕಿತ್ತೂರು ಚನ್ನಮ್ಮ ಬ್ರೀಟೀಷರ ವಿರುದ್ಧ ಹೋರಾಡಿದ ಮೊದಲ ವೀರರಾಣಿ, ಝಾನ್ಸಿ ರಾಣಿಗಿಂತಲೂ ಮೊದಲು ರಾಣಿ ಚೆನ್ನಮ್ಮ ಬ್ರಿಟಿಷ್ ಕಲೆಕ್ಟರ್ ಥ್ಯಾಕರೆಯ ರುಂಡ ಚೆಂಡಾಡಿದ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಮಹಿಳಾ ಹೋರಾಟಗಾರ್ತಿ ಎನ್ನುವ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಇತಿಹಾಸವನ್ನು ಸಂಸತ್ತಿನಲ್ಲಿ ಬೆಳಗಿಸುವ ಮೂಲಕ ತಮ್ಮ ಹೋರಾಟ ಆರಂಭಿಸಲಿ ಎನ್ನುವದು ನಮ್ಮೆಲ್ಲರ ಆಶಯ.