Breaking News

ರಮೇಶ ಜಾರಕಿಹೊಳಿ ,ಬಾಲಚಂದ್ರ ಜಾರಕಿಹೊಳಿಗೆ ದಿಗ್ಭಂಧನ ಹಾಕ್ತಾರಂತೆ…!

ಬೆಳಗಾವಿ-ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯ ಸರ್ಕಾರ ಮೂಡಲಗಿ ತಾಲ್ಲೂಕು ಎಂದು ಘೋಷಣೆ ಮಾಡಬೇಕು ಇಲ್ಲದಿದ್ದರೆ ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಮೂಡಲಗಿ ತಾಲ್ಲೂಕಿನ ಹಳ್ಳಿಗಳಲ್ಲಿ ದಿಗ್ಭಂಧನ ಹೇರುತ್ತೇವೆ ಮೂಡಲಗಿ ತಾಲ್ಲೂಕು ಆಗುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಭೀಮಪ್ಪ ಗಡಾದ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು

ಬೆಳಗಾವಿ
ನಾಡು ನುಡಿ ವಿಚಾರದಲ್ಲಿ ರಾಜ್ಯ ಸರ್ಕಾರದ ಉದಾಸೀನತೆ ಮುಂದೊವರೆದಿದೆ.. ಕನ್ನಡ ರಾಜ್ಯೋತ್ಸವ ಹೊಸ್ತಿಲ್ಲಲಿದೇ.. ಆದ್ರೂ ಈವರೆಗೂ ಕನ್ನಡ ನಾಡಧ್ವಜ ಶಾಸನ ಬದ್ಧಗೊಳಿಸುವ ಕೆಲಸಕ್ಕೆ ಚಾಲ್ತಿನೇ ಸಿಕ್ಕಿಲ್ಲ… ನವಂಬರ ತಿಂಗಳ ಒಳಗಾಗಿ ನಾಡಧ್ವಜ ಶಾಸನಬದ್ಧಗೊಳಿಸದಿದ್ದರೇ ಸರ್ಕಾರದ ವಿರುದ್ಧ ಪಿಐಎಲ್ ಸಲ್ಲಿಕೆ ಮಾಡಲಾಗುವುದು ಎಂದು ಆರ್.ಟಿ.ಐ ಕಾರ್ಯಕರ್ತ ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.

ಹೌದು. ಏಳು ಕನ್ನಡಿಗರ ಆಸೆಯದಂತೆ ಕೆಂಪು-ಹಳದಿ ಬಣ್ಣದ ನಾಡಧ್ವಜವನ್ನ ಶಾಸನ ಬದ್ಧಗೊಳಿಸಬೇಕೆಂಬ ಕೂಗಿಗೆ ಸರ್ಕಾರ ಏನೋ ಸ್ಪಂದಿಸಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ರೂಪಿಸಿ, ಕಾನೂನು ಚೌಕಟ್ಟು ಒದಗಿಸಲು ಸಮಿತಿಯೊಂದನ್ನ ರಚಿಸಿದೆ. ಆದ್ರೆ ಸಮಿತಿ ರಚನೆಯಾಗಿ ನಾಲ್ಕು ತಿಂಗಳುಗಳೇ ಕಳೆದ್ರೆ ಈವರೆಗೂ ಒಂದೇ ಒಂದು ಸಭೆ ನಡೆಸಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೇ, ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಆದ್ರೂ ಈವರೆಗೂ ಸಭೆ ಸೇರದಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಬರುವ ನವಂಬರ ತಿಂಗಳೊಳಗಾಗಿ ಕನ್ನಡದ ನಾಡಧ್ವಜವನ್ನ ಶಾಸನಬದ್ಧಗೊಳಿಸಲು ಸಾಮಾಜಿ ಹೋರಾಟಗಾರ ಭೀಮಪ್ಪ ಗಡಾದ್ ಗಡುವು ವಿಧಿಸಿದ್ದಾರೆ

ಕನ್ನಡಿಗರ ಆಸೆಯಂತೆ ಕೆಂಪು-ಹಳದಿ ನಾಡಧ್ವಜವನ್ನ ಶಾಸನ ಬದ್ಧಗೊಳಿಸುವಂತೆ ಇದೇ ಭೀಮಪ್ಪ ಗಡಾದ ಪತ್ರ ವ್ಯವಹಾರದ ಮೂಲಕ ಹೋರಾಟ ನಡೆಸಿದ್ರೆ. ನಾಡದ್ರೋಹಿಗಳು ಕನ್ನಡಿಗರ ಕೆಂಪು-ಹಳದಿ ಅನಧಿೃತವಾದ ಧ್ವಜವಿದೆ ಎಂದು ಕಾನೂನು ಹೋರಾಟ ಆರಂಭಿಸಿದ್ದಾಗ.. ಗಡಾದ ಸರ್ಕಾರದ ಮೇಲೆ ಪ್ರತ್ಯೇಕ ನಾಡಧ್ವಜ ಜಾರಿಗೊಳಿಸುವಂತೆ ಆಗ್ರಹಿಸಿದ್ರು. ಅದರ ಪರಿಣಾಮವಾಗಿ ಸರ್ಕಾರವು ಅಡ್ವೋಕೇಟ್ ಜನರಲ್ ಅವರಿಂದ ಸಲಹೆಯನ್ನ ಪಡೆದಿದ್ದು, ಅಡ್ವೋಕೇಟ್ ಜನರಲ್ ಅವರು ಸಹ ಸರ್ಕಾರ ರಾಷ್ಟ್ರಧ್ವಜಕ್ಕೆ ಅಗೌರವ ಬರದಂತೆ ನಾಡಧ್ವಜವನ್ನ ಹಾರಿಸಬೇಹುದು. ಈ ಕೆಂಪು-ಹಳದಿ ಧ್ವಜವನ್ನ ಶಾಸನಬದ್ಧಗೊಳಿಸಬಹುದೆಂದು ಸಲಹೆ ನೀಡಿದ್ದಾರೆ. ಆದ್ರೆ ಈವರೆಗೂ ನಾಡಧ್ವಜ ಸಮಿತಿ ಸಭೆ ಸೇರದಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಬರುವ ನವಂಬರ ತಿಂಗಳೊಳಗಾಗಿ ನಾಡಧ್ವಜವನ್ನ ಶಾಸನಬದ್ಧಗೊಳಿಸಿ ಆದೇಶ ಹೊರಡಿಸಲುವಂತೆ ಗಡುವು ವಿಧಿಸಿದ್ದು, ಒಂದು ವೇಳೆ ವಿಳಂಬ ನೀತಿ ಮುಂದೊರೆದ್ರೆ ಉಚ್ಛನ್ಯಾಯಾಲಯದಲ್ಲಿ ಸರ್ಕಾರದ ವಿರುದ್ಧ ಪಿಐಎಲ್ ಸಲ್ಲಿಸಲು ಗಡಾದ್ ಮುಂದಾಗಿದ್ದು, ಉಚ್ಛನ್ಯಾಯಾಲಯಕ್ಕೆ ಪಿಐಎಲ್ ಮೂಲಕ ಸರ್ಕಾರಕ್ಕೆ ನಾಡಧ್ವಜವನ್ನ ಶಾಸನಬದ್ಧಗೊಳಿಸಲು ಸೂಚಿವಂತೆ ಮನವಿ ಮಾಡಿಲಿದ್ದಾರೆ

ಒಟ್ಟ್ನಲ್ಲಿ ಕನ್ನಡಧ್ವಜವನ್ನ ಶಾಸನಬದ್ಧಗೊಳಿಸುವುದಾಗಿ ಸರ್ಕಾ ಆರಂಭದಲ್ಲಿ ತೋರಿಸಿದ ಸೂರತ್ವ ಆಸಕ್ತಿ ಈಗ ಕಂಡು ಬರುತ್ತಿಲ್ಲ. ಇದಕ್ಕೆ ಈವರೆಗೂ ಸರ್ಕಾರವೇ ರಚಿಸಿದ ಸಮಿತಿ ಸಭೆ ಸೇರದಿರುವುದು ಸಾಕ್ಷಿಯಾಗಿದೆ. ಇನ್ನಾದ್ರು ಸರ್ಕಾರ ಎಚ್ಚೆತ್ತುಕೊಂಡು ಕನ್ನಡಿಗರ ಆಸೆಯಂತೆ ನಾಡಧ್ವಜವನ್ನ ಶಾಸನಬದ್ಧಗೊಳಿಸಲು ಕ್ರಮಕೈಗೊಳ್ಳಬೇಕಿದೆ

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *